Kannada actress Samhita Vinya gets an offer from Bollywood

ಕನ್ನಡದ ನಟಿ ಸಂಹಿತಾ ವಿನ್ಯಾಗೆ ಬಾಲಿವುಡ್ ನಿಂದ ಆಫರ್ - CineNewsKannada.com

ಕನ್ನಡದ ನಟಿ ಸಂಹಿತಾ ವಿನ್ಯಾಗೆ ಬಾಲಿವುಡ್ ನಿಂದ ಆಫರ್

“ವಿಷ್ಣು ಸರ್ಕಲ್”, “ಮೆಜೆಸ್ಟಿಕ್ 2” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲೂ ತನ್ನದೇ ಆದ ಚಾಪು ಮೂಡಿಸಿರುವ ಕನ್ನಡದ ಪ್ರತಿಭಾನ್ವಿತ ನಟಿ ಸಂಹಿತಾ ವಿನ್ಯಾ ಅವರಿಗೆ ಬಾಲಿವುಡ್‍ನಿಂದಲೂ ಹಲವು ಅವಕಾಶಗಳು ಸುರಿಮಳೆಯೇ ಬರುತ್ತಿದೆ.

#SamhithaVinya

ಸದ್ಯದಲ್ಲಿಯೇ ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ಬಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಮೂಲಕ ಮಲ್ಲಿಗೆ ಪರಿಮಳವನ್ನು ಬಾಲಿವುಡ್‍ನಲ್ಲಿಯೂ ಪಸರಿಸಲು ವೇದಿಕೆ ಸಿದ್ದ ಪಡಿಸಿಕೊಂಡಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗಕ್ಕೆ ಹೋಗಿ ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅವರ ಸಾಲಿಗೆ ಸಂಹಿತಾ ವಿನ್ಯಾ ಸೇರಲು ಸಜ್ಜಾಗಿದೆ. ಕನ್ನಡಲದಲಿ ಸೂಕ್ತ ಅವಕಾಶ ಬಾಲಿವುಡ್‍ನಲ್ಲಿ ಗಿಟ್ಟಿಸಿಕೊಳ್ಳುವ ಉತ್ಸಾಹ ಮತ್ತು ತವಕದಲ್ಲಿದ್ದಾರೆ

ಐಫಾ ಗ್ರೀನ್ ಕಾರ್ಪೆಟ್‍ನಲ್ಲಿ ಹೆಜ್ಜೆ

#SamhithaVinya

ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಬಾಲಿವುಡ್ ಅತೀ ದೊಡ್ಡ ಪ್ರಶಸ್ತಿ ಸಮಾರಂಭ “ಐಫಾ 2025” ನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದಾರೆ. ಖ್ಯಾತ ವಸ್ತ್ರ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಅವರು ಸಿದ್ದಪಡಿಸಿದ ವಿನೂತನ ಉಡುಗೆಯಲ್ಲಿ ಸಂಹಿತಾ ವಿನ್ಯಾ 2025 ಗ್ರೀನ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ.

ಐಫಾ 2025″ ಬಾಲಿವುಡ್ ನ ದೊಡ್ಡ ಪ್ರಶಸ್ತಿ ಸಮಾರಂಭ. ಅದರಲ್ಲೂ ಬಾಲಿವುಡ್ ನ ಇಂಟನ್ರ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ ಗೆ ಇದು 25ನೇ ವರ್ಷ. ಹಾಗಾಗಿ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

#SamhithaVinya

ಬಾಲಿವುಡ್ ಖ್ಯಾತ ಕಲಾವಿದರಾದ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮುಂತಾದದವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇಂತಹ ವರ್ಣರಂಜಿತ ಸಮಾರಂಭದಲ್ಲಿ ಕನ್ನಡದ ನಟಿಯಾಗಿ ನಾನು ಪಾಲ್ಗೊಂಡಿದ್ದು ಬಹಳ ಸಂತೋಷವಾಗಿದೆ. ಇತ್ತೀಚೆಗೆ ಬಾಲಿವುಡ್ ನಿಂದಲೂ ನನಗೆ ತುಂಬಾ ಆಫರ್ ಬರುತ್ತಿದೆ ಎಂದು ಸಂಹಿತಾ ವಿನ್ಯಾ ಮಾಹಿತಿ ಹಂಚಿಕೊಂಡಿದ್ಧಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin