Anna from Mexico" teaser released: Priority given to family story along with action: Dalli Dhananjaya

“ಅಣ್ಣ ಫ್ರಮ್ ಮೆಕ್ಸಿಕೋ” ಟೀಸರ್ ಬಿಡುಗಡೆ: ಆಕ್ಷನ್ ಜೊತೆಗೆ ಕೌಟಂಬಿಕ‌ ಕಥನಕ್ಕೂ ಆದ್ಯತೆ : ಡಾಲಿ ಧನಂಜಯ - CineNewsKannada.com

“ಅಣ್ಣ ಫ್ರಮ್ ಮೆಕ್ಸಿಕೋ” ಟೀಸರ್ ಬಿಡುಗಡೆ: ಆಕ್ಷನ್ ಜೊತೆಗೆ ಕೌಟಂಬಿಕ‌ ಕಥನಕ್ಕೂ ಆದ್ಯತೆ : ಡಾಲಿ ಧನಂಜಯ

ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಸಿನಿಮಾಗೆ ಕೈಜೋಡಿಸುತ್ತಾರೆ ಎಂದಾಗ ಆಕ್ಷನ್. ಮಾತ್ರವಲ್ಲ ಕೌಟಂಬಿಕ ಮನರಂಜನೆಯೂ ಇರಬೇಕು ಎಂದುಕೊಂಡು ಬಡವ ರಾಸ್ಕಲ್ ನಿರ್ದೇಶಕ ಶಂಕರ್ ಗುರು ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆವು ಎಂದರು ನಟ ಡಾಲಿ ಧನಂಜಯ..”

ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಅವರ ಸಹೋದರ ವಿಧಾನಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ನಿರ್ಮಾಣದ ” ಅಣ್ಣಾ ಫ್ರಮ್ ಮೆಕ್ಸಿಕೋ” ಟೀಸರ್ ಬಿಡುಗಡೆ ವೇಳೆ ಸಿನಿಮಾ ಆರಂಭವಾದ ಬಗೆಯನ್ನು ವಿವರಿಸಿದರು.

ಹೊಯ್ಸಳ’ ಸಿನಿಮಾ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮೀ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ಸಹೋದರ ಚೆನ್ನರಾಜ್ ಸಿನಿಮಾ ಮಾಡುವ ಆಸಕ್ತಿ ಇದೆ. ಏನು ಮಾಡಬಹುದು ನೋಡಿ ಎಂದಿದ್ದರು. ಆ ಬಳಿಕ ಸಿನಿಮಾದ ಪಯಣ ಆರಂಭವಾಯಿತು. ಚೆನ್ನಾರಾಜು ಅವರಿಗೆ ಸಖತ್ ಸ್ಟೈಲೀಶ್ ಆಗಿ, ಆಕ್ಷನ್ ಈ ರೀತಿ ನನ್ನನ್ನು ತೋರಿಸಬೇಕು ಎಂದುಕೊಂಡಿದ್ದರು. ಆದರೆ ಲಕ್ಷ್ಮಿ ಮೇಡಂ ಜೊತೆ ಕೈಜೋಡಿಸುತ್ತಾರೆ ಎಂದಾಗ ಮತ್ತಷ್ಟು ಜವಾಬ್ದಾರಿಯಿಂದ ಸಿನಿಮಾ ಮಾಡಿದ್ದೇವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಟೀಸರ್ ಥ್ರಿಲ್ಲಿಂಗ್ ಆಗಿದೆ. ಹೊಸತನದಿಂದ ಕೂಡಿದೆ. ಶ್ರೀಮಂತಿಕೆಯಿಂದ ಕಾಣಿಸುತ್ತಿದೆ. ಧನಂಜಯ್ ನಟನರ ಸೂಪರ್. ‌ಅದರಲ್ಲಿಯೂ ಕರ್ನಾಟಕ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ಮನಸ್ಸಿಗೆ ಸಮಾಧಾನವಾಯ್ತು. ಟೀಸರ್ ನೋಡಿದರೆ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿಸುತ್ತದೆ. ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕಿಳಿದಿದ್ದೇವೆ. ಕನ್ನಡ ಚಿತ್ರ ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಚಿತ್ರದ ಕಥೆ ಕೇಳಿದೆವು ಇಷ್ಟವಾಯ್ತು. ಚಿತ್ರದಲ್ಲಿ ಒಂದೊಳ್ಳೆ ಪ್ರಯೋಗ ಮಾಡುವ ಉದ್ದೇಶದಿಂದ ಚಾಮುಂಡಿ ಆಶೀರ್ವಾದ ಪಡೆದು ಈ ಜರ್ನಿ ಶುರು ಮಾಡಿದೆವು ಎಂದು ಮಾಹಿತಿ ನೀಡಿದರು.

ಚಿತ್ರಕ್ಕೆ ನಿರ್ದೇಶಕ ಶಂಕರ್‌ ಗುರು ಆಕ್ಷನ್ ಕಟ್ ಹೇಳಿದ್ದು ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದು, ಸಿನಿಮಾದಲ್ಲಿ ರಂಗಾಯಣ ರಘು, ನಾಗಭೂಷಣ, ಪೂರ್ಣ ಮೈಸೂರು ಈಚಿತ್ರದ ಮುಖ್ಯ ತಾರಾಗಣದಲ್ಲಿದ್ದು, ವಾಸುಕಿ ವೈಭವ್‌ ಸಂಗೀತ, ಅಜಯ್ ಸಂಕಲನ , ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ. ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ,ಶಾಸಕಿ ನಯನಾ ಮೋಟಮ್ಮ, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕ ಶಂಕರ್‌ ಗುರು, ಸಹ ನಿರ್ಮಾಪಕ ಸತ್ಯ ರಾಯಲ, ಜೀ ಸ್ಟುಡಿಯೋದ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

Hi

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin