Actress Ragini supports Deadly Killer, which has completed 25 days

25 ದಿನ ಪೂರೈಸಿದ ಡೆಡ್ಲಿ ಕಿಲ್ಲರ್ ಚಿತ್ರಕ್ಕೆ ನಟಿ ರಾಗಿಣಿ ಬೆಂಬಲ - CineNewsKannada.com

25 ದಿನ ಪೂರೈಸಿದ ಡೆಡ್ಲಿ ಕಿಲ್ಲರ್ ಚಿತ್ರಕ್ಕೆ ನಟಿ ರಾಗಿಣಿ ಬೆಂಬಲ

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನದ ಹಾಗೂ ಅಭಯ್‍ವೀರ್, ಲೋಕೇಂದ್ರ ಸೂರ್ಯ ನಟಿಸಿರುವ ಡೆಡ್ಲಿ ಕಿಲ್ಲರ್ ಚಿತ್ರವೀಗ 25 ದಿನಗಳನ್ನು ಪೂರೈಸಿ ಮುನ್ನಡೆದಿದ್ದು ನಟಿ ರಾಗಿಣಿ ದ್ವಿವೇದಿ ಸಾಥ್ ನೀಡಿದ್ದಾರೆ.

ಕಾಡಿನ ಮನೆಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ತನ್ನ ಗಟ್ಟಿ ಕಂಟೆಂಟ್, ಬಿಗಿಯಾದ ನಿರೂಪಣೆಯಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಮುನ್ನಡೆದಿದೆ. ಉತ್ತರ ಕರ್ನಾಟಕದಲ್ಲಿ ಚಿತ್ರ ಹೆಚ್ಚು ಜನಪ್ರಿಯವಾಗರುವ ಈ 17ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಅಲ್ಲದೆ ಬೆಂಗಳೂರಿನ ಭೂಮಿಕಾ ಥೇಟರಿನಲ್ಲಿ ಈಗಲೂ ಪ್ರದರ್ಶನವಾಗುತ್ತಿದೆ,

ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಸಿನಿಮಾ ಮಾಡುವಾಗ ಎಷ್ಟೊಂದು ಕಷ್ಟ ಇರುತ್ತೆ ಅನ್ನೋದು ನೆನಪಾಯ್ತು ಜನರೂ ಅಷ್ಟೇ ಚೆನ್ನಾಗಿ ಚಿತ್ರ ಸ್ವೀಕರಿಸಿದ್ದಾರೆ. ಉಪೇಂದ್ರ, ಜಗ್ಗೇಶ್, ದೊಡ್ಡಣ್ಣ, ಗಣೇಶ್, ಪ್ರಥಮ್ ಹೀಗೆ ಎಲ್ಲರೂ ಬೆಂಬಲ ನೀಡಿದರು ಎಂದರು

ನಾಯಕ ಅಭಯ್‍ವೀರ್ ಮಾತನಾಡಿ ಸಿನಿಮಾದ ಗೆದ್ದಿದೆ, 14 ವರ್ಷದಲ್ಲಿ ಎಷ್ಟೋ ಏಳು ಬೀಳು ನೋಡಿಕೊಂಡು ಬಂದಿದ್ದೇನೆ, ನನ್ನ ನಂಬಿ ದುಡ್ಡು ಹಾಕಿ ಅಣ್ಣನ ಸ್ಥಾನದಲ್ಲಿ ನಿಂತದ್ದು ನಿರ್ಮಾಪಕ ಪ್ರಶಾಂತ್. ನನಗೇನೂ ಗೊತ್ತಿಲ್ಲ, ನಾನು ಕಲೀಬೇಕು ಅಂದರು. ಬಹುತೇಕ ಸಿನಿಮಾಗಳಲ್ಲಿ ಥ್ರಿಲ್ಲರ್ ಮಂಜು ಜತೆಗಿದ್ದಾರೆ, ನಟಿ ರಾಗಿಣಿ ಅವರೂ ಚಿತ್ರದ ಜರ್ನಿಯಲ್ಲಿ ಜತೆ ನಿಂತು ಬೆಂಬಲಿಸಿದ್ದಾರೆ ಎಂದು ಹೇಳಿದರು

ನಟಿ ರಾಗಿಣಿ ಮಾತನಾಡಿ ಈ ಟೀಮ್ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಯಾಕೆಂದರೆ ಈ ವೇದಿಕೆ ಮೇಲೆ ನಿಂತಿರುವ ಪ್ರತಿಯೊಬ್ಬರೂ ಕಷ್ಟಪಟ್ಟು ಮುಂದೆ ಬಂದವರು. 2006ರಲ್ಲಿ ನಾನು ಕೂಡ ಹೊಸಬಳೆ ಆಗಿದ್ದೆ ಅಭಯ್ ಆರಂಭದಲ್ಲಿ ಯಾರ ಸಪೆÇೀರ್ಟ್ ಇಲ್ಲದೆ, ತುಂಬಾ ಪ್ರಯತ್ನಪಟ್ಟು ಮುಂದೆ ಬಂದಿದ್ದಾರೆ. ಸತತ ಪ್ರಯತ್ನ, ನಂಬಿಕೆ ಇದ್ದರೆ ಸಕ್ಸಸ್ ಖಂಡಿತ ಸಿಗುತ್ತೆ ಎಂದರು

ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಮಾತನಾಡಿ ಚಿತ್ರದ ಜರ್ನಿ ಇವತ್ತಿಗೆ ಕಂಪ್ಲೀಟ್ ಆಗುತ್ತದೆ, ಸಿನಿಮಾದ ಕನಸು ನನಸಾಗಿದೆ, ಇನ್ನಷ್ಟು ಸಿನಿಮಾಗಳನ್ನು ಮಾಡಬೇಕೆಂದು ಹೆಜ್ಜೆ ಇಡುತ್ತಿದ್ದೇನೆ, ಅಲ್ಲದೆ ಎ.ವಿ.ಆರ್. ಸಿನಿಮ್ಯಾಕ್ಸ್ ಓಟಿಟಿ ಒಳ್ಳೆಯ ಮೊತ್ತಕ್ಕೆ ನಮ್ಮ ಚಿತ್ರವನ್ನು ಖರೀದಿಸಿದೆ ಎಂದು ಹೇಳಿದರು.

ಥ್ರಿಲ್ಲರ್ ಮಂಜು ನಿರ್ದೇಶನದ ಜತೆಗೆ ವಿಲನ್ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ವೇದಿಕೆಯಲ್ಲಿ ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ಮಲ್ಲಿಕಾರ್ಜುನ್, ನಟರಾದ ಲೋಕೇಂದ್ರ ಸೂರ್ಯ, ಸುನಿಲ್ ಬಾಲ್ಡರ್, ಪುನೀತ್, ಅಭಿ ಸೇರಿದಂತೆ ಎಲ್ಲರಿಗೂ ಸ್ಮರಣಫಲಕ ವಿತರಿಸಲಾಯಿತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin