International Film Festival organized by North Karnataka Film Chamber of Commerce on August 22nd and 23rd

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಗಸ್ಟ್ 22 ಮತ್ತು 23 ರಂದು ಅಂತರಾಷ್ಟ್ರೀಯ ಚಿತ್ರೋತ್ಸವ - CineNewsKannada.com

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಎರಡನೇ ಭಾರಿಗೆ ಆಗಸ್ಟ್ 22 ಮತ್ತು 23 ರಂದು ಧಾರವಾಡ ಕರ್ನಾಟಕ ಕುಲಪುರೋಹಿತ ಡಾ. ಆಲೂರು ವೆಂಕಟರಾವ್ ಸಭಾಂಗಣದಲ್ಲಿ “ ಎರಡು ದಿನಗಳ ಅಂತರಾಷ್ಟ್ರೀಯ ಚಿತ್ರೋತ್ಸವ ಹಮ್ಮಿಕೊಂಡಿದೆ.

2020ರಿಂದ 2026 ಅವಧಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳು, ಟೆಲಿ ಫಿಲ್ಮ್, ವಿಡಿಯೋ ಸಾಂಗ್, ಮತ್ತು ಕಿರುಚಿತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜುನಾಥ್ ಎಲ್. ಹಗೇದಾರ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಯಾವುದೇ ಸಂಬಂಧವಿಲ್ಲ, ಪರ್ಯಾಯವಾಗಿ ನಾವು ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯ ಮಂಡಳಿ ಮಂಡಿಕೊಂಡಿದ್ದೇವೆ. ಈಗಾಗಲೇ ನಮ್ಮ ವಾಣಿಜ್ಯ ಮಂಡಳಿಯಲ್ಲಿ 500ಕ್ಕೂ ಹೆಚ್ಚು ನಿರ್ಮಾಪಕರು ಸದಸ್ಯರಾಗಿದ್ದಾರೆ. ಮಂಡಳಿಯಲ್ಲಿ ನೊಂದಾಯಿಸಿಕೊಂಡ ಹಲವು ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ಚಿತ್ರಗಳಿಗೆ ಸಹಾಯಧನ ಸೇರಿದಂತೆ ಇನ್ನಿತರೆ ಸೌಲಭ್ಯಗಲೂ ದೊರಕಿವೆ ಎಂದು ಮಾಹಿತಿ ನೀಡಿದರು.

ಆಗಸ್ಟ್ ತಿಂಗಳಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಚಿತ್ರಗಳು, ಕಿರುಚಿತ್ರಗಳು, ಟೆಲಿಪಿಲ್ಮ್ ಹಾಗು ಆಲ್ಬಂ ಹಾಡುಗಳನ್ನು ಕಳುಹಿಸಲು ಆಗಸ್ಟ್ 5 ಕಡೆಯ ದಿನವಾಗಿದೆ, ಈಗವರೆಗೆ 30 ಕ್ಕೂ ಅಧಿಕ ಚಿತ್ರಗಳು ಬಂದಿವೆ. ಚಿತ್ರೋತ್ಸವಕ್ಕೆ ಬರುವ ಎಲ್ಲಾ ಚಿತ್ರಗಳನ್ನು ಜ್ಯೂರಿ ಸಮಿತಿ ವೀಕ್ಷಣೆ ಮಾಡಿ ಆಯ್ದ ಚಿತ್ರಗಳನ್ನು ಪ್ರದರ್ಶನಕ್ಕೆ ಶಿಫಾರಸ್ಸು ಮಾಡಲಿದೆ, ಚಿತ್ರೋತ್ಸದಲ್ಲಿದಲ್ಲಿ ಪ್ರತಿಯೊಂದು ವಿಭಾಗಕ್ಕೆ ಅತ್ಯುತ್ತಮ ವಿಭಾಗದಲ್ಲಿ ಪ್ರಶಸ್ತಿ ವಿಭಾಗದಲ್ಲಿ ಆಯ್ಕೆಯಾದ ಚಿತ್ರಗಳಿಗೆ 25 ಸಾವಿರ ನಗದು ಪುರಸ್ಕಾರ ಮತ್ತು ಇತರೆ ವಿಭಾಗದಲ್ಲಿ ಪ್ರಶಸ್ತಿ ಫಲಕ ನೀಡಲಾಗುವುದು ಎಂದರು

ಚಿತ್ರೋತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ಮಾಗಡಿ ಮಾತನಾಡಿ, ಚಿತ್ರೋತ್ಸವದ ಮೂಲಕ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಚಿತ್ರೋತ್ಸವದ ಉದ್ದೇಶವಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳ ಪ್ರತಿಭೆಗಳು, ತಂತ್ರಜ್ಞರು, ನಿರ್ದೇಶಕರು, ಕಲಾವಿದರನ್ನು ಗುರುತಿಸಿ ಗೌರವಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರಭು ಹಂಚಿನಾಳ, ಕಾರ್ಯಾದ್ಯಕ್ಷ ಡಾ, ಕಲ್ಮೇಶ ಡಿ, ಹಾವೇರಿಪೇಟ್,ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತ ಪ್ರಸಾದ್, ಖಜಾಂಚಿ ಕಿರಣ್ ಸಿದ್ದಾಪೂರ, ಸಹಕಾರ್ಯದರ್ಶಿ ಅಸ್ಪಾಕ್ ಸೈಯ್ಯದ್, ಸಂಘಟನಾ ಕಾರ್ಯದರ್ಶಿ ಪ್ರವೀಣಾ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin