ಯುವ ಪೀಳಿಗೆ ಕಥೆಯ “ ಪಾರ್ಟ್ನರ್ ” ಚಿತ್ರದ ‘ಅಮೋರಾ’ ಹಾಡು ಬಿಡುಗಡೆ
ಮಳೆ, ಧೈರ್ಯಂ, ದಿಲ್ ಪಸಂದ್ ಚಿತ್ರಗಳ ನಂತರ ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿರುವ ಚಿತ್ರ “ಪಾರ್ಟ್ನರ್” ಸಿನಿಮಾ ವಿಶೇಷ ಹಾಡಿನ ಮೂಲಕ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಚಿತ್ರದಲ್ಲಿ ಈಗಿನ ಯುವ ಪೀಳಿಗೆ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ನಂಥ ಕಂಟೆಂಟ್ ಇಟ್ಟುಕೊಂಡು ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಸಂಗೀತವಿದೆ
ನಿರ್ಮಾಪಕ ಹರೀಶ್ ದೇವಿತಂದ್ರೆ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳಾದ ನಾಗಭೂಷಣ್ ದಂಪತಿ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ
ನಟ ಅಜಯ್ ರಾವ್ ಮಾತನಾಡಿ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ, ಕೆಲ ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತೆ ಅನಿಸುತ್ತೆ. ಅಂಥಾ ಚಿತ್ರವಿದು. ಈ ಚಿತ್ರದ ಮೇಲೆ ನನಗೆ ತುಂಬಾ ಕಾನ್ಫಿಡೆಂಟ್ ಇದೆ. ಮಾನವೀತ ಮೌಲ್ಯಗಳು, ಸಂಬಂಧ, ಭಾವನೆಗಳನ್ನು ಚೆನ್ನಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು

ನಾಯಕಿ ಬೃಂದಾ ಆಚಾರ್ಯ ಮಾತನಾಡಿ ನನ್ನ ಸಿನಿಮಾ ಕಲೆಕ್ಷನ್ ನಲ್ಲಿ ಅಮೋರಾ ದ ಬೆಸ್ಟ್ ಸಾಂಗ್. ಒಂದೊಳ್ಳೆ ಟೀಮ್ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ನಿರ್ದೇಶಕ ಶಿವತೇಜಸ್ ಮಾತನಾಡಿ ದಿಲ್ ಪಸಂದ್ ಚಿತ್ರದಿಂದ ನಿರ್ಮಾಪಕ ಹರೀಶ್ಸ್ನೇಹ ಆರಂಭವಾಯ್ತು. ಎಲ್ಲರಿಗೂ ಒಬ್ಬ ಪಾರ್ಟ್ನರ್ ಅಂತ ಇರ್ತಾರೆ. ಅದನ್ನೇ ಇಟ್ಟುಕೊಂಡು, ಜಂಜೀ ಕಂಟೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇನೆ. ಈ ಸಾಂಗ್ ಕೂಡ ಜಂಜಿಗಳಿಗಾಗೇ ಮಾಡಿರೋದು ಎಂದರು.

ನಿರ್ಮಾಪಕ ಹರೀಶ್ ಮಾತನಾಡಿ ನಾನಿಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ನನ್ನ ತಾಯಿ, ಪತ್ನಿ ಕಾರಣ. ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ಕೂತು ನೋಡುವÀ ಸಿನಿಮಾ ನಿರ್ಮಿಸಿದ್ದೇವೆ. ಅಜಯ್ ಚಿತ್ರದ ಸ್ಯಾಟಲೈಟ್ ಗೆ ಸಿಗೋ ಮೊತ್ತದ ಶೇಕಡಾ 50 ಹಣವನ್ನು ಆನಂದ್ ಆಡಿಯೋ ನಮ್ಮ ಆಡಿಯೋಗೆ ಕೊಟ್ಟಿದೆ ಎಂದರು.
ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್, ಸಾಹಿತಿ ನಾಗಾರ್ಜುನ ಶರ್ಮ, ಕೊರಿಯಾಗ್ರಾಫರ್ ಮುರಳಿ, ನಟ ಅರವಿಂದರಾವ್ ಈ ಚಿತ್ರದಲ್ಲಿ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹರೀಶ್ ದೇವಿತಂದ್ರೆ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಚಿತ್ರಕ್ಕಿದೆ. ಪಾರ್ಟ್ ನರ್ ಚಿತ್ರದನ4 ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ. ಶರ್ಮಾ ಸಾಹಿತ್ಯ ರಚಿಸಿದ್ದಾರೆ.


