ಯಾರನ್ನೂ ಟೀಕಿಸಬೇಡಿ… ಇಷ್ಟವಾಗದಿದ್ದರೆ ಅವರನ್ನು ಬಿಟ್ಟುಬಿಡಿ.. : ನಟ ಅಲ್ಲು ಅರ್ಜುನ್ ಕಿವಿಮಾತು
ನಟ ಅಲ್ಲು ಅರ್ಜುನ್ ಅವರ ಅಭಿಮಾನಿಗಳ ‘ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್’ ಸಭೆ ಹೈದರಾಬಾದ್ನಲ್ಲಿ ನಡೆಯಿತು. ಈ ಸಭೆಯಲ್ಲಿ ನಟ ಅಲ್ಲು ಅರ್ಜುನ್ ಭಾಗವಹಿಸಿ, ಅಭಿಮಾನಿಗಳೊಂದಿಗೆ ಸಂವಾದ ನಡೆಸಿ ಅಗತ್ಯ ಸಲಹೆ ನೀಡಿದರು

ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್, “ನಿಮಗೆ ಇಷ್ಟವಾಗದವರನ್ನು ಟ್ರೋಲ್ ಮಾಡುವ ಬದಲು, ನಿಮಗೆ ಇಷ್ಟವಾದ ಕೆಲಸವನ್ನು ಮಾಡುತ್ತಾ ಮುನ್ನಡೆಯಿರಿ” .ಯಾರಾದರೂ ಇಷ್ಟವಾಗದಿದ್ದರೆ ಅವರನ್ನು ಬಿಟ್ಟುಬಿಡಬೇಕು, “ಬೇಕಿದ್ದರೆ ಇಷ್ಟವಾದ ಹುಡುಗಿಯ ಮನೆಯ ಹೊರಗೆ ಕಾಯಬಹುದು” ಇಷ್ಟವಿಲ್ಲದವರಿಗಾಗಿ ಸಮಯ, ಶಕ್ತಿ ಮತ್ತು ಹಣವನ್ನು ಪೆÇೀಲು ಮಾಡದೆ, ಅವುಗಳನ್ನು ತಮ್ಮ ಸ್ವಂತ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
”ಅಭಿಮಾನಿಗಳು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತಾರೆ. ‘ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್’ ಸ್ಥಾಪಿಸಿದ್ದಕ್ಕಾಗಿ ಧನ್ಯವಾದಗಳು. ಸಭೆಗೆ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೊರತುಪಡಿಸಿ ಇನ್ನೇನು ಹೇಳಬಲ್ಲೆ ನಿಮ್ಮಲ್ಲಿರುವ ಉತ್ಸಾಹ ಹೀಗೆಯೇ ಇರಲಿ” ಎಂದು ಅವರು ಹೇಳಿದ್ದಾರೆ.
ಯಾರನ್ನೂ ಟೀಕಿಸುವುದು ಎಂದಿಗೂ ಒಳ್ಳೆಯದಲ್ಲ. ನಿಮಗೆ ಯಾರಾದರೂ ಇಷ್ಟವಾಗದಿದ್ದರೆ ಅವರನ್ನು ದ್ವೇಷಿಸಿ, ಟ್ರೋಲ್ ಮಾಡಿ ಸಮಯ ಹಾಳು ಮಾಡಿಕೊಳ್ಳಬೇಡಿ. ಇಷ್ಟವಾಗದಿದ್ದರೆ ಅವರನ್ನು ಹಾಗೆಯೇ ಬಿಟ್ಟುಬಿಡಿ” .ನಮಗೆ ಇಷ್ಟವಿಲ್ಲದ ವಿಷಯದ ಮೇಲೆ ಯಾರಾದರೂ ಹಣ ಖರ್ಚು ಮಾಡುತ್ತಾರೆಯೇ ಇಲ್ಲವಲ್ಲ ಹಾಗಾಗಿ ನಿಮಗೆ ಇಷ್ಟವಾಗದಿದ್ದರೆ ಬಿಟ್ಟುಬಿಡಿ, ಇಷ್ಟವಾದ ಕೆಲಸ ಮಾಡಿ. ಇಷ್ಟವಾದ ಹುಡುಗಿಯ ಮನೆಯ ಹೊರಗೆ ನಿಂತು ಕಾಯಿರಿ, ಪರವಾಗಿಲ್ಲ ಎಂದಿದ್ಧಾರೆ
ಮನಸ್ಸು ಮುಟ್ಟಿದೆ: ಅಭಿಮಾನದ ಧನ್ಯವಾದ
ಫ್ಯಾನ್ಸ್ ಮೀಟ್ ಮುಗಿದ ಬಳಿಕ ಅಲ್ಲು ಅರ್ಜುನ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ನನ್ನ ಪ್ರೀತಿಯ ಅಭಿಮಾನಿಗಳೇ.. ಈ ಕಾರ್ಯಕ್ರಮಕ್ಕಾಗಿ ನನ್ನ ಮೇಲಿನ ಪ್ರೀತಿಯಿಂದ ವಿವಿಧ ಪ್ರದೇಶಗಳಿಂದ ಆಗಮಿಸಿದ್ದು ನಿಜಕ್ಕೂ ನನ್ನ ಮನಸ್ಸನ್ನು ಮುಟ್ಟಿದೆ. ನೀವು ತೋರಿಸುತ್ತಿರುವ ಅಪಾರ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಗೆ ನಾನು ಎಂದಿಗೂ ಋಣಿಯಾಗಿರುತ್ತೇನೆ. ನಿಮ್ಮನ್ನು ಇನ್ನಷ್ಟು ಹೆಮ್ಮೆಪಡುವಂತೆ ಮಾಡಲು ಶ್ರಮಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ
ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ `ರಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಂತರ ಲೋಕೇಶ್ ಕನಗರಾಜ್ ನಿರ್ದೇಶನದ ಪಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

