“ಲವ್ ಕಾಕ್ಟೇಲ್” ಚಿತ್ರದ ಮೂಲಕ ಸಿನಿ ಜರ್ನಿಯಲ್ಲಿ 30 ವರ್ಷ ಪೂರ್ಣಗೊಳಿಸಿದ ಕಲಾಕಾರ್ ಹರೀಶ್ ರಾಜ್
ಕನ್ನಡ ಚಿತ್ರರಂಗದಲ್ಲಿ ಕಲಾಕಾರ್ ಎಂದೇ ಖ್ಯಾತಿ ಪಡೆದಿರುವ ನಟ ಹರೀಶ್ ರಾಜ್, ಬಣ್ಣದ ಬದುಕಿನಲ್ಲಿ 30 ವರ್ಷ ಪೂರ್ಣಗೊಳಿಸಿದ್ದಾರೆ, ಜೊತೆಗೆ ಅವರು 50ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಕಿರುತೆರೆಯಲ್ಲಿಯೂ ಮೋಡಿ ಮಾಡದ ಕಲಾವಿದ.

ನಟ ಹರೀಶ್ ರಾಜ್, “ಲವ್ ಕಾಕ್ಟೇಲ್” ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ರಂಜಿಸಲು ಮುಂದಾಗಿದ್ದಾರೆ. ಪ್ಲೇ ಬಾಯ್ ಅವತರಾದಲ್ಲಿ ಮೋಡಿ ಮಾಡಲು ಸಿದ್ದವಾಗಿದ್ದಾರೆ. ಈ ಮೂಲಕ ಚಿತ್ರದ ಸಿನಿಮಾದ ಮೇಕಿಂಗ್, ಹಾಡು ಬಿಡುಗಡೆ ಮಾಡಲಾಗಿದೆ
ವೆಂಕಟೇಶಾಯನಮಃ ಚಿತ್ರದ ಶೀರ್ಷಿಕೆಯನ್ನು “ಲವ್ ಕಾಕ್ಟೇಲ್” ಎಂದು ಮರುನಾಮಕರಣ ಮಾಡಲಾಗಿದೆ. ಲವ್ ಮಾಕ್ಟೇಲ್ ಯಶಸ್ವಿಯಾದ ನಂತರ ಈ ರೀತಿಯ ಶೀರ್ಷಿಕೆ ಇಟ್ಟಿರಬಹುದು ಗೊತ್ತಿಲ್ಲ, ಚಿತ್ರತಂಡವೇ ಉತ್ತರಿಸಬೇಕು

ನಟ,ನಿರ್ದೇಶಕ ಹರೀಶ್ ರಾಜ್ ಮಾನತಾಡಿ ಬಣ್ಣದ ಬದುಕಿಗೆ ಕಾಲಿಟ್ಟು 30 ವರ್ಷ ಮತ್ತು ನನಗೆ ಈಗ 50 ವರ್ಷ. ಚಿತ್ರದಲ್ಲಿ ಹಿರಿಯ ನಟ ಉಮೇಶ್ ಅಣ್ಣ ಒಳ್ಳೆ ಪಾತ್ರ ಮಾಡಿದ್ದಾರೆ, ಜೊತೆಗೆ ಹಿರಿಯ ನಟಿ ಅಭಿನಯ ಮೇಡಂ ಜೊತೆಗೆ ಹಿಂದೆ ಒಂದು ಕಾಮಿಡಿ ಪಾತ್ರ ಮಾಡಿದ್ದೆ. ಈಗ ಮತ್ತೊಮ್ಮೆ ಜೊತೆಯಾಗಿದ್ದೇವೆ, ಮತ್ತೊಬ್ಬ ಹಿರಿಯ ನಟಿ ಉಮಾಶ್ರೀ ಅದ್ಭುತವಾಗಿ ಕಾಡ್ತಾರೆ. ಈ ಸಿನಿಮಾದ ಟೈಟಲ್ ಅನ್ನ ಈ ಮೊದಲು ವೆಂಕಟೇಶಾಯನಮಃ ಅಂದುಕೊಂಡಿದ್ದೆವು. ಸೆನ್ಸಾರ್ ಮಂಡಳಿ ಅವರು ಹೊಗಳಿದರು. ಒಂದು ಮಾರ್ಗದರ್ಶನದ ಪ್ರಕಾರ ಶೀರ್ಷಿಕೆಯನ್ನು ಬಲಾಯಿಸಿದ್ದೇವೆ ಎಂದರು
ಚಿತ್ರದಲ್ಲಿ ಲವ್ ಫೇಲ್ಯೂರ್ ಆದ್ರೆ ಏನಂತೆ, ಲೈಫ್ನ ಹೇಗೆ ಜಾಲಿಯಾಗಿ ಕಳೆಯಬಹುದು ಎಂಬುದನ್ನ ತೋರಿಸಿಕೊಡುವ ಚಿತ್ರ ಇದು, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು

ನಿರ್ಮಾಪಕ ಜನಾರ್ಧನ್ ಪಿ ಮಾತನಾಡಿ, ನಿರ್ಮಾಪಕ ಅನ್ನೋದನ್ನ ಬಿಟ್ಟರೆ ಉಳಿದ ಜವಬ್ದಾರಿಯನ್ನೆಲ್ಲಾ ಹರೀಶ್ ರಾಜ್ ಅವರೇ ತಲೆ ಮೇಲೆ ಹಾಕಿಕೊಂಡು ನಿಭಾಯಿಸಿದರು. ಸಮಯ ಮಾಡಿಕೊಂಡು ಬಂದು ಹೋಗಿ ಅಂತಷ್ಟೇ ಹೇಳ್ತಾ ಇದ್ದರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು.
ಹಿರಿಯ ನಟಿ ಅಭಿನಯ ಮಾತನಾಡಿ ಹರೀಶ್ ನಾನು ಹೋಗ್ಲಿ ಬಿಡಿ ಸರ್ ಎಂಬ ಕಾಮಿಡಿ ಸೀರಿಯಲ್ ನಲ್ಲಿ ಮಾಡ್ತಾ ಇದ್ದೆವು. ಅಂದೆ ನಂಗೆ ಇವರ ಎನರ್ಜಿ ನೋಡಿ ನೀವೂ ಹೀರೋ ಆಗಬಹುದು ಎಂದಿದ್ದ. ಆಮೇಲೆ ಹೀರೋ ಆಗಿ ಮಿಂಚಿದ್ರು ಒಮ್ಮೆ ಕೇಳಿದ್ದೆ ಏನ್ ಹರೀಶ್ ನಮ್ಮನ್ನೆಲ್ಲಾ ಹಾಕಿಕೊಳ್ಳೋದೆ ಇಲ್ಲ ಅಂದಿದ್ದೆ. ಅದಾದ ಮೇಲೆ ಎಷ್ಟೋ ದಿನಕ್ಕೆ ಕಾಲ್ ಮಾಡಿ ಈ ಪಾತ್ರ ಕೊಟ್ಟರು ಎಂದರು.

ಲವ್ ಕಾಕ್ಟೇಲ್ ಸಿನಿಮಾಗೆ ಹರೀಶ್ ರಾಜ್ ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪಿ ಜನಾರ್ಧನ್ ನಿರ್ಮಾಣ ಮಾಡಿದ್ದು, ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ, ಜೀವನ್ ಪ್ರಕಾಶ್ ಸಂಕಲನ, ರಾಜಾ ಶಿವಶಂಕರ್ ಛಾಯಾಗ್ರಹಣ ನೀಡಿದ್ದಾರೆ ರಮಿತ್ ಏಲಕ್ಕಿ ಪ್ರಚಾರದ ಹೊಣೆ ಹೊತ್ತಿದ್ದಾರೆ. ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

