Veteran actress Urvashi makes comeback with “Bully”: Daughter Teja Urvashi enters Kannada

“ಬುಲ್ಲಿ” ಚಿತ್ರದ ಮೂಲಕ ಮರಳಿ ಬಂದ ಹಿರಿಯ ನಟಿ ಊರ್ವಶಿ: ಮಗಳು ತೇಜಾ ಊರ್ವಶಿ ಕನ್ನಡಕ್ಕೆ ಎಂಟ್ರಿ - CineNewsKannada.com

“ಬುಲ್ಲಿ” ಚಿತ್ರದ ಮೂಲಕ ಮರಳಿ ಬಂದ ಹಿರಿಯ ನಟಿ ಊರ್ವಶಿ: ಮಗಳು ತೇಜಾ ಊರ್ವಶಿ ಕನ್ನಡಕ್ಕೆ ಎಂಟ್ರಿ

ರಾಂಧವ ಸಿನಿಮಾ , “ಬಿಗ್ ಬಾಸ್” ಖ್ಯಾತಿಯ ನಟ ಭುವನ್ ಪೆÇನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ “ಬುಲ್ಲಿ” ಸಿನಿಮಾದ ಮೊದಲನೆಯ ಶೆಡ್ಯೂಲ್ ಮುಕ್ತಾಯ ಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅವರು ಭುವನ್ ಜೊತೆ ಅಭಿನಯಿಸುತ್ತಿದ್ದಾರೆ. ಜೊತೆಗೆ ಅವರ ಮಗಳು ತೇಜ ಊರ್ವಶಿ ನಾಯರ್ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ ಕುಮಾರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ನಡೆಯಿತು.

ಹಿರಿಯ ನಟಿ ಊರ್ವಶಿ ಮಾತನಾಡಿ ಹತ್ತು ವರ್ಷದ ನಂತರ ಕನ್ನಡ ಚಿತ್ರ ರಂಗಕ್ಕೆ ಮರಳಿದ್ದೇನೆ. ಹಲವಾರು ಕನ್ನಡ ಸಿನಿಮಾಗಳ ಆಫರ್ ಬಂದರೂ ಯಾವುದು ಹಿಡಿಸಿರಲಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಿಜಿ ಇದ್ದೆ. ಔಟ್ ಅಂಡ್ ಔಟ್ ಕಾಮೆಡಿ ಸಿನಿಮಾವನ್ನು ತಂಡ ಮಾಡುತ್ತಿದೆ. ಭುವನ್ ಜೊತೆ ನಟನೆ ಮಾಡಿ ತುಂಬಾ ಖುಷಿ ಆಯಿತು. ಮುಂದಿನ ದಿನಗಳಲ್ಲಿ ಒಬ್ಬ ಅಧ್ಬುತ ನಾಯಕ ನಟನಾಗಿ ನಿಮ್ಮ ಮುಂದೆ ಬರುತ್ತಾರೆ ಎನ್ನುವ ವಿಶ್ವಾಸ ಹೊರಹಾಕಿದರು

ಕನ್ನಡ ಚಿತ್ರರಂಗಕ್ಕೂ ನನಗೂ ಅವಿನಾಭಾವ ಸಂಬಂಧ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್ ನಾಗ್, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಎಲ್ಲಾ ನಾಯಕನಟರ ಜೊತೆಗೂ ನಟಿಸಿದ್ದೇನೆ. “ರಾಮ ಶ್ಯಾಮ ಭಾಮ” ಚಿತ್ರದ ನಂತರ ಟಿಸುತ್ತಿರುವ ಕನ್ನಡ ಚಿತ್ರವಿದು. ಕನ್ನಡ ಚಿತ್ರರಂಗ ಯಾವತ್ತೂ ನನ್ನನ್ನು ಬಿಟ್ಟುಕೊಟ್ಟಿಲ್ಲ. ಕನ್ನಡ ಚಿತ್ರದಿಂದಲೇ ಮಗಳ ಸಿನಿಮಾಯಾನ ಅರಂಭವಾಗುತ್ತಿರುವುದು ಬಹಳ ಖುಷಿಯಾಗಿದೆ ಎಂದರು

ನಾಯಕ ಭುವನ್ ಪೊನ್ನಣ್ಣ ಮಾತನಾಡಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಜೊತೆಗೆ ನಟಿಸುವುದು ನನ್ನ ಬಹು ದಿನಗಳ ಆಸೆ. ಈಗ ಆ ಆಸೆ ಈಡೇರಿದೆ. ಊರ್ವಶಿ ಅವರಿಂದ ತುಂಬಾ ಕಲಿತಿದ್ದೇನೆ. ಇನ್ನೂ, ಈ ಚಿತ್ರದ ಕಥೆ ಅನೂಪ್ ಹೇಳಿದಾಗ ಬಹಳ ಇಷ್ಟವಾಯಿತು. ಆಕರ್ಶ್ ಹಾಗೂ ಹರ್ಷಿಕಾ ಪೂಣಚ್ಛ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೊಂದು ಡಾರ್ಕ್ ಕಾಮಿಡಿ ಜಾನರ್‍ನ ಚಿತ್ರ. ಇದರಲ್ಲಿ ಯಾವುದೇ ಸಂದೇಶ ನೀಡಲು ಹೊರಟಿಲ್ಲ. ಚಿತ್ರದಲ್ಲಿ ಮನೋರಂಜನೆಯ ಪ್ರಧಾನ. ಎಲ್ಲಿಯ ವರೆಗು ಯಾವುದೇ ಸಿನಿಮಾದಲ್ಲಿ ಬಾರದ ತಾಯಿ – ಮಗನ ಒಂದು ಅಪರೂಪದ ಬಾಂಧವ್ಯವನ್ನು ಸಾರುವ ಕಥೆಯೂ ಹೌದು ಎಂದರು

ಚಿತ್ರದಲ್ಲಿ ಮಧ್ಯಮ ಕುಟುಂಬದ ಜೆನ್ ಝೀ ಹುಡುಗ. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಯಾವುದೇ ಗುರಿಯಿಲ್ಲದೆ ತನ್ನಷ್ಟಕ್ಕೆ ತಾನು ಜೀವನ ನಡೆಸುವ ಹುಡುಗ ಕೂಡ. ನನ್ನ ಪಾತ್ರದ ಹೆಸರು ಬಲರಾಮ. ಸ್ನೇಹಿತರೆಲ್ಲಾ “ಬುಲ್ಲಿ” ಎಂದು ಕರೆಯುತ್ತಿರುತ್ತಾರೆ. ಹಾಗಾಗಿ ಚಿತ್ರಕ್ಕೆ “ಬುಲ್ಲಿ” ಎಂದು ಹೆಸರಿಟ್ಟಿದ್ದೇವೆ. ಚಿತ್ರದ ಒಂದು ಹಂತದ ಚಿತ್ರೀಕರಣ ಮಾತ್ರ ಮುಕ್ತಾಯವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಊರ್ವಶಿ ಅಭಿನಯದ ಭಾಗದ ಚಿತ್ರೀಕರಣ ಪೂರ್ಣವಾಗಿದೆ ಎಂದರು

ನಿರ್ದೇಶಕ ಅನೂಪ್ ಆಂಟೋನಿ ಮಾತನಾಡಿ “ಕಥಾ ವಿಚಿತ್ರ” ಚಿತ್ರದಿಂದ ನಿರ್ದೇಶನದ ಪಯಣ ಶುರುವಾಯಿತು. ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಚಿತ್ರದಲ್ಲಿ ಭುವನ್ ಪೆÇನ್ನಣ್ಣ ನಾಯಕನಾಗಿ ನಟಿಸುತ್ತಿದ್ದಾರೆ. “ರಾಮ ಶ್ಯಾಮ ಭಾಮ” ಚಿತ್ರದ ನಂತರ ಹಿರಿಯ ನಟಿ ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಅಚ್ಯುತ ಕುಮಾರ್, ಓಂಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್, ಆರ್ಯ ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ಚಿತ್ರ. ತಾಯಿ – ಮಗನ ವಿಶೇಷ ಬಾಂಧವ್ಯದ ಕಥೆಯ ಚಿತ್ರವೂ ಹೌದು ಎಂದು ತಿಳಿಸಿದರು

ಹಿರಿಯ ನಟ ಓಂಪ್ರಕಾಶ್ ರಾವ್ ಮಾತನಾಡಿ ವೃತ್ತಿಯಿಂದ ನಿರ್ದೇಶಕ. ಆದರೆ ನಟನಾಗೂ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಭುವನ್ ಹಾಗು ಹರ್ಷಿಕಾ ಪೂಣಚ್ಛ ಚಿತ್ರದಲ್ಲಿ ನಾನೇ ನಟಿಸಬೇಕೆಂದರು. ಊರ್ವಶಿ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ನಟಿಸಿರುವುದು ಖುಷಿಯಾಗಿದೆ , ನಟನ ಜೀವದಲ್ಲಿ ನನಗೆ ನಟನಾಗಿ ತುಂಬಾ ತೃಪ್ತಿ ಕೊಟ್ಟ ಸಿನಿಮಾ ತುಂಬಾ ಎಂಜಾಯ್ ಮಾಡಿಕೊಂಡು ನಟಿಸಿದ್ದೇನೆ, ವೀಕ್ಷಕರಿಗೆ ತುಂಬಾನೆ ಇಷ್ಟವಾಗುತ್ತೆ ಎಂದರು

ನಿರ್ಮಾಪಕ ನವೀನ್ ಮಾತನಾಡಿ ಚಿತ್ರ ಪ್ರಾರಂಭವಾಗಲು ಪ್ರಮುಖ ಕಾರಣ. ಕಥೆ ಚೆನ್ನಾಗಿದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದು ತಿಳಿಸಿದರು .

ಕಾರ್ಯಕಾರಿ ನಿರ್ಮಾಪಕಿ ಹರ್ಷಿಕಾ ಪೂಣಚ್ಛ ಮಾತನಾಡಿ ನಟಿ ಊರ್ವಶಿ ಅವರು ಬಹಳ ವರ್ಷಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಾದರೆ, ಅವರ ಪುತ್ರಿ ತೇಜ ಅವರಿಗೆ ಬೇರೆ ಬೇರೆ ಭಾಷೆಗಳಿಂದ ಅವಕಾಶ ಬಂದರೂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಒಪ್ಪಿಕೊಂಡದ್ದು ಬಹಳ ಖುಷಿಯಾಗಿದೆ ಎಂದರು.

ಪಳ್ಳಾರ್ ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ನಟ ಹುಲಿ ಕಾರ್ತಿಕ್ ಹೇಳಿದರು. ಕಾರ್ಯಕಾರಿ ನಿರ್ಮಾಪಕ ಆಕರ್ಶ್ ಹಾಗೂ ಬಾಲ ನಟ ಆರ್ಯ ಸಹ “ಬುಲ್ಲಿ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin