Actress Saniya Iyer claps for murder mystery film "Sampige"

ಮರ್ಡರ್ ಮಿಸ್ಟ್ರಿ ಕಥಾನಕದ “ಸಂಪಿಗೆ” ಚಿತ್ರಕ್ಕೆ ನಟಿ ಸಾನಿಯಾ ಅಯ್ಯರ್ ಕ್ಲಾಪ್ - CineNewsKannada.com

ಮರ್ಡರ್ ಮಿಸ್ಟ್ರಿ ಕಥಾನಕದ “ಸಂಪಿಗೆ” ಚಿತ್ರಕ್ಕೆ ನಟಿ ಸಾನಿಯಾ ಅಯ್ಯರ್ ಕ್ಲಾಪ್

ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ , ಹಾಗೂ ಅವರ ತಾಯಿ ದೀಪಾ ಅಯ್ಯರ್ “ಸಂಪಿಗೆ” ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದು ಬಿಗ್ ಬಾಸ್ ಸ್ಪರ್ಧಿ ಇಶಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಂಜನಪ್ಪ ಸೇರಿದಂತೆ ಹಲವು ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು

ಯುವ ಪ್ರತಿಭೆಗಳು ಜತೆಗೂಡಿ ನಿರ್ಮಾಣ ಮಾಡುತ್ತಿರುವ “ಸಂಪಿಗೆ” ಚಿತ್ರಕ್ಕೆ ಬೆಂಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು

ನಿರ್ದೇಶಕ ಗಿರಿ ಗೌಡ ಮಾತನಾಡಿ ಮೊದಲ ಚಿತ್ರ. ಈ ಹಿಂದೆ ಹಲವು ವಿಡಿಯೋ ಆಲ್ಬಮ್ ಸಾಂಗ್ ನಿರ್ದೇಶನ ಮಾಡಿದ್ದೆ. ಮದ್ದೂರು ವಡೆ ಹಾಗೂ ಮಹಾ ಕಾಳಿ ಎಂಬ ಚಿತ್ರವನ್ನ ಕೂಡ ಆರಂಭಿಸಿದೆ. ಸಂಪಿಗೆ ಚಿತ್ರ ಮರ್ಡರ್ ಮಿಸ್ಟ್ರಿ ಕಥಾನಕ ಒಳಗೊಂಡಿದ್ದು , ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯದ ಸುತ್ತ ಕಥೆ ಬೆಸೆದುಕೊಂಡಿದ್ದು, ಉತ್ತಮ ಸಂದೇಶವಿದೆ. ಚಿತ್ರ ಆಗಸ್ಟ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮೇಲುಕೋಟೆ, ಕಣ್ಣೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಮಾಡಲು ಸಿದ್ಧರಾಗಿದ್ದೇವೆ.ಯುವ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿ ಯಾರೆಂದು ಪರಿಚಯ ಮಾಡುತ್ತೇವೆ ಎಂದರು.

ನಿರ್ಮಾಪಕ ರುದ್ರ ಕುಮಾರ್ ಮಾತನಾಡಿ ಸಿನಿಮಾ ನಿರ್ಮಾಣ 10 ವರ್ಷದ ಕನಸು. ಉತ್ತಮ ಕಥೆ ಸಿಕ್ಕಿದೆ. ಕಾಲಭೈರವೇಶ್ವರ ಪ್ರೊಡಕ್ಷನ್ಸ್ ಮೂಲಕ ಚಿತ್ರ ಆರಂಭಿಸಿದ್ದು , ನಿರ್ದೇಶಕ ಸಹೋದರ ಇದ್ದ ಹಾಗೆ , ಅವನಿಗಾಗಿ ಚಿತ್ರ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಯುವ ನಟ ವರ್ಧನ್ ಮಾತನಾಡಿ ಮೂಲತಃ ಹಾಸನದವನು , ಸುಮಾರು ಎಂಟು ವರ್ಷಗಳ ಹಿಂದೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಪಕ್ಕ ದರ್ಶನ್ ಅಭಿಮಾನಿ , ಅವರ ಆಶೀರ್ವಾದ ಸದಾ ತಂಡದ ಮೇಲೆ ಇರಲಿದೆ. ಇದೊಂದು ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯದ ಸುತ್ತ ನಡೆಯುವ ಚಿತ್ರವಾಗಿದ್ದು , ಆಕೆಯನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುವ ಅಂಶ ಒಳಗೊಂಡಿದೆ. ಪಾತ್ರವೂ ಬಹಳ ವಿಭಿನ್ನವಾಗಿದ್ದು ಎಲ್ಲೆ ಸಹಕಾರ ಬೆಂಬಲ ಬೇಕು ಎಂದು ಕೇಳಿಕೊಂಡರು

ಪ್ರವೀಣ್ ದಾವಣಗೆರೆ , ದರ್ಶನ್ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin