ನಟ ದಳಪತಿ ವಿಜಯ್ ಕೊನೆಯ ಚಿತ್ರ `ಜನ ನಾಯಗನ್’ ಗೆ ಕೆವಿಎನ್ ಸಂಸ್ಥೆ ನಿರ್ಮಾಣ
ಕನ್ನಡದಲ್ಲಿ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಚಿತ್ರರಂಗದಲ್ಲಿ ತಮ್ಮದೇ ಹೆಸರು ಖ್ಯಾತಿ ಪಡೆದಿರುವ ಕೆ. ವೆಂಕಟ್ ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ.

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ ಕಾಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. ತಮ್ಮದೇ ಹೊಸ ಪಕ್ಷ ಸ್ಥಾಪಿಸಿಕೊಂಡು ರಾಜಕೀಯಕ್ಕೆ ಧುಮುಕಿದ್ದಾರೆ. ಹಾಗಾಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿಲಿದ್ದಾರೆ.. ದಳಪತಿ ವಿಜಯ್ ಕೊನೇ ಸಿನಿಮಾ `ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ

2026 ಜನವರಿ 15 ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮ. ಅದೇ ದಿನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಹೈ ಬಜೆಟ್ ನೊಂದಿಗೆ ಸೆಟ್ಟೇರಿರೋ ಸಿನಿಮಾ ಜನನಾಯಕನ್.. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ.ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಜೊತೆಗೆ ಕೊನೆಯ ಚಿತ್ರ ಕೂಡ.
ಜನನಾಯಕನ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೆ ಇಡೀ ದಕ್ಷಿಣ ಭಾರತ ಕಾಯುತ್ತಿದೆ.ಈ ಸಿನಿಮಾಗೆ ಬಂಡವಾಳ ಹಾಕಿರುವ ಕೆವಿಎನ್ ಪ್ರೊಡಕ್ಷನ್ಸ್ ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡುತ್ತಿದೆ.

ಇನ್ನು ವಿದಾಯದ ಸಿನಿಮಾ ಅಂದ್ಮೇಲೆ ಏನೆಲ್ಲ ಇರಬೇಕೋ ಅದೆಲ್ಲವೂ ಇರುತ್ತದೆ ಅಂತ ಹೇಳಲಾಗ್ತಿದೆ ಈ ಸಿನಿಮಾ ಮೂಲಕ ಒಬ್ಬ ದಳಪತಿಗೆ ಯೋಗ್ಯವಾದ ವಿದಾಯವೇ ಸಿಗುತ್ತಿದೆ ಈ ನಿಟ್ಟಿನಲ್ಲಿ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.ಎಚ್ ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಸಂಗೀತವಿದೆ.
ಕೆವಿಎನ್ ಸಂಸ್ಥೆಯ ಅದ್ದೂರಿ ಬಜೆಟ್ನ ಚಿತ್ರ “ಜನನಾಯಗನ್” ಚಿತ್ರಕ್ಕಾಗಿ ತಮಿಳು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

