September 21 Movie Review: “September 21” is a social concern film about Alzheimer’s disease

September 21 Movie Review : ಮರೆವಿನ ರೋಗದ ಸುತ್ತ ಸಾಗುವ ಸಾಮಾಜಿಕ ಕಳಕಳಿಯ ಚಿತ್ರ “ಸೆಪ್ಟಂಬರ್ 21” - CineNewsKannada.com

September 21 Movie Review : ಮರೆವಿನ ರೋಗದ ಸುತ್ತ ಸಾಗುವ ಸಾಮಾಜಿಕ ಕಳಕಳಿಯ ಚಿತ್ರ “ಸೆಪ್ಟಂಬರ್ 21”

ಚಿತ್ರ; ಸೆಪ್ಟಂಬರ್ 21
ನಿರ್ದೇಶನ : ಕರೆನ್ ಕ್ಷಿತಿ ಸುವರ್ಣ
ತಾರಾಗಣ: ಪ್ರವೀಣ್ ಸಿಂಗ್ ಸಿಸೋಡಿಯಾ, ಪ್ರಿಯಾಂಕ ಉಪೇಂದ್ರ, ಜರೀನಾ ವಹಾಬ್, ಅಮಿತ್ ಬೆಹ್ಲ್ , ಸಚಿನ್ ಪಾಟೇಕರ್ ,ಜಯಲಕ್ಷ್ಮಿ, ಅಂಕಿತಾ ಜಯರಾಮ್, ರಿತಿ ರುದ್ರ ಮತ್ತಿತರು
ರೇಟಿಂಗ್ : * 3/5

ಸಾಮಾಜಿಕ ಕಳಕಳಿಯ ಚಿತ್ರಗಳು ಜನರ ಮುಂದೆ ಹಾಗೊಮ್ಮೆ ಹೀಗೊಮ್ಮೆ ತೆರೆಗೆ ಬರುತ್ತಿವೆ, ಆ ಸಾಲಿಗೆ ಮತ್ತೊಂದು ಸೇರ್ಪಡೆ “ಸೆಪ್ಟಂಬರ್ 21_’ ಮೆರೆವಿನ ರೋಗ ದಿಂದ ಬಳಲುವ ವ್ಯಕ್ತಿ, ತುಮಲ ತಲ್ಲಳಮ ತಳಮಳ ಮತ್ತು ಒಂದು ಕ್ಷಣದ ನೆನಪು ಮತ್ತೊಂದು ಕ್ಷಣದಲ್ಲಿ ಇಲ್ಲದಿರುವುದನ್ನು ಮುಂದಿಟ್ಟುಕೊಂಡು ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ ಇದು.

ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ, ಸಾಮಾಜಿಕ ಕಾಳಜಿ ಇರುವ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅವರ ಪ್ರಯತ್ನ ಪ್ರಶಂಸಾರ್ಹ. ಮೆರೆವಿನ ರೋಗದಿಂದ ಬಳಲುವ ವ್ಯಕ್ತಿಯಷ್ಟೇ ಅವರನ್ನು ನೋಡಿಕೊಳ್ಳುವ ಆರೈಕೆ ಮಾಡುವ ಮಂದಿಯ ಪಾತ್ರವೂ ಮುಖ್ಯ ಎನ್ನುವುದನ್ನು ಚಿತ್ರದ ಮೂಲಕ ಹೇಳಲಾಗಿದೆ.

ಮೆರೆವಿನ ರೋಗದಿಂದ ಬಳಲು ರಾಜ್ ( ಪ್ರವೀಣ್ ಸಿಂಗ್ ಸಿಸೋಡಿಯಾ) ಹಾಗು ಮನೆಕೆಲಸ ಮಾಡುವ ಕಮಲಾ (ಪ್ರಿಯಾಂಕ ಉಪೇಂದ್ರ) ಸುತ್ತ ಪ್ರದಾನವಾಗಿ ಸಾಗುವ ಕಥೆ ಇದರ ಜೊತೆಗೆ ಎರಡು ಕುಟುಂಬಗಳು, ಒದೊಂದು ಕುಟುಂಬದ ಎದುರಿಸುವ ಸಮಸ್ಯೆ, ವಿದೇಶದಲ್ಲಿರುವ ಮಗ ಅಪ್ಪನ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿಲಾಗಿದೆ.

ಸೀಮಿತ ಪಾತ್ರಗಳನ್ನಿಟ್ಟುಕೊಂಡು ಸೀಮಿತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂದಿ ಮತ್ತು ಕನ್ನಡದಲ್ಲಿ ಚಿತ್ರವನ್ನು ಚಿತ್ರೀಕರಿಸಿರುವ ಹಿನ್ನೆಲೆಯಲ್ಲಿ ಕಲಾವಿದರ ಡಬ್ಬಿಂಗ್ ಕೈಕೊಟ್ಟಿದೆ. ಬಹುತೇಕ ಕಡೆ ಲಿಪ್ ಸಿಂಕ್ ಆಗಿಲ್ಲ, ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಮಾಡಿದ ಸಿನಿಮಾಗಳು ಲಿಪ್ ಸಿಂಕ್ ಆಗಿದರೆ ಇನ್ನೂ ಚೆಂದವಾಗಿರುತ್ತಿತ್ತು,

ಜೊತೆಗೆ ಇಂತಹ ಕಥೆಗಳ ಸಿನಿಮಾದಲ್ಲಿ ನಟಿಸಿರುವ ಪ್ರಿಯಾಂಕ ಉಪೇಂದ್ರ ಅವರ ಪಾತ್ರಕ್ಕೆ ಅವರೇ ಡಬ್ಬಂಗ್ ಮಾಡಿದ್ದರೆ ಪಾತ್ರಕ್ಕೆ ಇನ್ನಷ್ಟು ತೂಕ ಬರುತ್ತಿತ್ತು,

ನಿರ್ದೇಶಕಿ ಕರೆನ್ ಕ್ಷಿತಿ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿದ್ದಾರೆ, ಆದರೆ ಮೊದಲರ್ದ ಭಾಗವನ್ನು ಅನಗತ್ಯವಾಗಿ ಎಳೆದಿದ್ಧಾರೆ. ಕೆಲವು ಕಡೆ ಪುನರಾವರ್ತಿತ ಸನ್ನಿವೇಶಗಳು ನುಸುಳಾಡಿವೆ. ದ್ವಿತೀಯಾರ್ಧ ಬೇಗನೇ ಮುಗಿದು ಹೋಗಿದೆ, ರೋಗಿಯ ಆರೋಗ್ಯ ಎಷ್ಟು ಮುಖ್ಯವೋ ರೋಗಿಯನ್ನು ನೋಡಿಕೊಳ್ಳುವರೂ ಅಷ್ಟೇ ಮುಖ್ಯ ಎನ್ನುವುದನ್ನು ಹೇಳಿರುವ ಚಿತ್ರ ಇದು.

ಚಿತ್ರದಲ್ಲಿ ಜರೀನಾ ವಹಾಬ್, ಅಮಿತ್ ಬೆಹ್ಲ್ , ಸಚಿನ್ ಪಾಟೇಕರ್ ,ಜಯಲಕ್ಷ್ಮಿ, ಅಂಕಿತಾ ಜಯರಾಮ್, ರಿತಿ ರುದ್ರ ಚಿತ್ರದಲ್ಲಿದ್ದಾರೆ.

ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ ಯಾವುದೇ ಅಬ್ಬರವಿಲ್ಲದೆ ಪಾತ್ರ ಮತ್ತು ಸನ್ನಿವೇಶಕ್ಕೆ ಪೂರಕವಾಗಿದೆ, ಈ ಮೂಲಕ ವಿನಯ್ ಚಂದ್ರ ತಮ್ಮ ಕೆಲಸದಲ್ಲಿ ಗೆಲವು ಸಾಧಿಸಿದ್ದಾರೆ. ಅವರ ಪ್ರಯತ್ನ ಮೆಚ್ಚುವಂತಹುದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin