Gramayana Movie Review : ಅಪ್ಪಟ ಗ್ರಾಮೀಣ ಸೊಗಡಿನ ಸುಂದರ ಕಲಾಕೃತಿ “ಗ್ರಾಮಾಯಣ” - CineNewsKannada.com

Gramayana Movie Review : ಅಪ್ಪಟ ಗ್ರಾಮೀಣ ಸೊಗಡಿನ ಸುಂದರ ಕಲಾಕೃತಿ “ಗ್ರಾಮಾಯಣ”

ಚಿತ್ರ: ಗ್ರಾಮಾಯಣ
ನಿರ್ದೇಶನ; ದೇವನೂರು ಚಂದ್ರು
ತಾರಾಗಣ: ವಿನಯ್ ರಾಜ್ ಕುಮಾರ್, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಅರುಣ್ ಸಾಗರ್, ಲೂಸ್ ಮಾದ್ ಯೋಗಿ, ಅಪರ್ಣ ಮತ್ತಿತರರು
ರೇಟಿಂಗ್: *** 3.5 / 5

ಹಳ್ಳಿಯ ಬದುಕು,ಬವಣೆ, ರಾಜಕೀಯ ಸೇರಿದಂತೆ ಅಪ್ಪಟ ಗ್ರಾಮೀಣ ಸೊಗಡನ್ನು ಚಿತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಮಾಡುವುದು ಒಂದು ಕಲೆ, ಆ ಕೆಲಸವನ್ನು ಗ್ರಾಮಾಯಣ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಸುಂದರವಾದ ಕಲಾಕೃತಿಯನ್ನು ಮುಂದಿಡಲಾಗಿದೆ.

ಹಳ್ಳಿ ಸೊಗಡಿನಲ್ಲಿ ನಡೆಯುವ ಕಥೆ, ಊರ ಪರಿಸರ, ತನ್ನದೇ ನಡೆಯಬೇಕು ಎನ್ನುವ ಹಠ, ಜಿದ್ದು, ನಾವು ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತು ಮಾಡುವ ಉತ್ಸಾಹ ಹುಮ್ಮಸ್ಸು, ಜೊತೆಗೆ ಯುವ ಪ್ರೇಮಿಗಳ ಮುದ್ದಾದ ಪ್ರೇಮಕತೆಯನ್ನು ‘ಗ್ರಾಮಾಯಣ” ಚಿತ್ರದ ಮೂಲಕ ನಿರ್ದೇಶಕ ದೇವನೂರು ಚಂದ್ರು ಕಟ್ಟಿಕೊಟ್ಟಿದ್ದಾರೆ.

ಗ್ರಾಮೀಣ ಭಾಗದ ಕಥೆ, ಮತ್ತು ಅಲ್ಲಿನ ಭಾಷೆಮ ಸೊಗಡನ್ನು ಬಿಂಬಿಸುವ ಅನೇಕ ಚಿತ್ರಗಳು ತೆರೆಗೆ ಬರುತ್ತಿವೆ, ಯಾವ ನಿರ್ದೇಶಕ ನೈಜತೆಗೆ ಹತ್ತಿರವಾಗಿ ಚಿತ್ರವನ್ನು ಕಟ್ಟಿಕೊಡುತ್ತಾರೆ ಅಂತಹ ಚಿತ್ರವನ್ನು ಪ್ರೇಕ್ಷಕರು ಎಂದೂ ಕೈ ಬಿಟ್ಟಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ, ಅವುಗಳ ಸಾಲಿಗೆ ಸೇರಬಹುದಾದ ಚಿತ್ರ ಗ್ರಾಮಾಯಣ.

ಗ್ರಾಮೀಣ ಭಾಗದ ಬದುಕುಮ ಬವಣೆ, ನಿತ್ಯ ಎದುರುಸುವ ಸಮಸ್ಯೆ,ಸವಾಲು, ಮುಗ್ದರನ್ನು ವಂಚಿಸುವ ಮಂದಿ, ಹೀಗೆ ಹಲವು ತಿರುಳು ಜನರನ್ನು ಹಿಡಿದಿಡುವ ಕೆಲಸ ಮಾಡಿದ್ದಾರೆ.ಅದರಲ್ಲಿ ನಿರ್ದೇಶಕ ದೇವನೂರು ಚಂದ್ರ ಯಶಸ್ವಿಯಾಗಿದ್ದಾರೆ. ನಟ ವಿನಯ್ ರಾಜ್ ಕುಮಾರ್ ಹಳ್ಳಿ ಗೆಟಪ್‍ನಲ್ಲಿ ಮಿಂಚಿದ್ದಾರೆ, ಅಲ್ಲಲ್ಲಿ ಡಾ, ರಾಜ್ ಕುಮಾರ್ ನೆನಪಾದಂತೆ ಭಾಸವಾಗಿದೆ.

ದೇವಪುರದಲ್ಲಿ ಸೀನ (ವಿನಯ್ ರಾಜಕುಮಾರ್) ಸುತ್ತ ಸಾಉವ ಕಥೆ ಇದು. ಬಡ ರೈತ ಕುಟುಂಬದಲ್ಲಿ ಜನಿಸಿದ ಸೀನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡವ. ಊರಿನ ಕುಸುಮಾ ( ಮೇಘಾ ಶೆಟ್ಟಿ) ಕಂಡರೆ ಎಲ್ಲಿಲ್ಲದ ಪ್ರೀತಿ, ಸ್ನೇಹಿತನ ಪ್ರೀತಿ ದಕ್ಕಬೇಕು ಎಂದು ಗೆಳಯರೂ ಸಾಥ್ ಬೆಂಬಲ ನೀಡ್ತಾರೆ.

ಕರಿಬೆಕ್ಕು (ಲೂಸ್ ಮಾದ ಯೋಗಿ)ಗೆ ತನ್ನದೇ ನಡೆಯಬೇಕು ಎನ್ನುವ ಹಠ, ಇಂತವನಿಗೆ ರಾಜಕಾರಣಿ ( ಗೋಪಾಲ ಕೃಷ್ಣ) ಜತೆಯಾಗುತ್ತಾರೆ. ಜೊತೆಗೆ ಶಾಸಕನ ಬೆಂಬಲವೂ ಸಿಗುತ್ತದೆ, ಚುನಾವಣೆ ಅಲ್ಲಿನ ರಾಜಕೀಯ ಜೊತೆಗೆ ಸೀನಾ ಮತ್ತು ಕುಸುಮಾಳ ಮುದ್ದಾದ ಪ್ರೇಮಕತೆ ಕುತೂಹಲಕಾರಿಯಾಗಿದೆ. ಅವರ ಪ್ರೀತಿ ದಕ್ಕುತ್ತಾ ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ,

ನಿರ್ದೇಶಕ ದೇವನೂರು ಚಂದ್ರು ದೇಸೀ ಸೊಗಡನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಯಶಸ್ಸು ಕಂಡಿದದಾರೆ. ಈ ಮೂಲಕ ಸುಂದರವಾದ ಕಲಾಕೃತಿಯನ್ನು ಗ್ರಾಮಾಯಣದ ಮೂಲಕ ಜನರ ಮುಂದಿಟ್ಟಿದ್ದಾರೆ.

ನಟ ವಿನಯ್ ರಾಜ್‍ಕುಮಾರ್, ಸೀನನ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ, ಇತ್ತೀಚಿನ ದಿನಗಳಲ್ಲಿ ತಾವೊಬ್ಬ ಪಕ್ವ ಕಲಾವಿದ ಎನ್ನುವುದನ್ನು ನಿರೂಪಿಸುತ್ತಿದ್ದಾರೆ,
ನಟಿ ಮೇಘಾ ಶೆಟ್ಟಿ ಕೂಡ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ನಟಿ, ನಿರೂಪಕಿ ಅಪರ್ಣ ಪಾತ್ರವೂ ಸುಂದರವಾಗಿ ಮೂಡಿಬಂದಿದೆ, ಜೊತೆಗೆ ಲೂಸ್ ಮಾದ ಯೋಗಿ, ಅರುಣ್ ಸಾಗರ್, ಗೋಪಾಲ ಕೃಷ್ಣ ದೇಶಪಾಂಡೆ, ಹೀಗೆ ಹಲವು ಕಲಾವಿದರು ಚಿತ್ರಕ್ಕೆ ಮತ್ತಷ್ಟು ಜೀವಕಳೆ ತಂದುಕೊಟ್ಟಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin