Love Seasons Movie Review: “Love Seasons” is a confluence of three different love stories.

Love Seasons Movie Review: ಮೂರು ವಿಭಿನ್ನ ಪ್ರೇಮಕಥೆಗಳ ಸಂಗಮ “ ಲವ್ ಸೀಸನ್ಸ್” - CineNewsKannada.com

Love Seasons Movie Review: ಮೂರು ವಿಭಿನ್ನ ಪ್ರೇಮಕಥೆಗಳ ಸಂಗಮ “ ಲವ್ ಸೀಸನ್ಸ್”

ಚಿತ್ರ : ಲವ್ ಸೀಸನ್ಸ್
ನಿರ್ದೇಶನ: ಕೃತ್ವಿಕ್
ತಾರಾಗಣ: ಮುಕುಂದ ರಾಮಸ್ವಾಮಿ, ಚಂದನಗೌಡ, ದಿಯಾ ಕೀರ್ತಿ, ಶ್ವೇತ ಕೋಗ್‍ಲೂರ್, ರಾಜೇಶ್ ನಟರಂಗ, ಸಂಗೀತ ಅನಿಲ್, ಮಂಡ್ಯ ರಮೇಶ್, ಚೇತನ್ ದುರ್ಗ, ಹುಲಿ ಕಾರ್ತಿಕ್, ಜಯತೀರ್ಥ, ರೀತು ಸಿಂಗ್ ಮತ್ತಿತರರು
ರೇಟಿಂಗ್ : *** 3.5/5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಬಗೆಯ ಕಥೆಗಳು ಕಂಟೆಂಟುಗಳು ಇರುವ ಸಿನಿಮಾ ತೆರೆಗೆ ಬರುತ್ತಿವೆ, ಆ ಸಾಲಿಗೆ ಸೇರಬಹುದಾದ ಚಿತ್ರ “ಲವ್ ಸೀಸನ್ಸ್”. ಯುವ ಕಲಾವಿದರ ತಂಡ ಹಿರಿಯರನ್ನು ಜೊತೆಗಿಟ್ಟುಕೊಂಡು ಪ್ರೇಕ್ಷಕರ ಮುಂದಿಟ್ಟಿರುವ ಸಿನಿಮಾ ಇದು.

ನಾಯಕ ಮುಕುಂದ ರಾಮಸ್ವಾಮಿ, ಮೂರು ನಾಯಕಿಯರು ಹಾಗು ಇನ್ನೊಂದಿಷ್ಟು ಮಂದಿ ಹೊಸಬರನ್ನು ಕಟ್ಟಿಕೊಂಡು ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ ನಿರ್ದೇಶಕ ಕೃತ್ವಿಕ್. ಪ್ರೀತಿಯ ಮೂರು ಕಾಲ ಘಟ್ಟಗಳನ್ನು ಅರ್ತಾಥ್ ಮೂರು ಪ್ರೇಮಕಥೆ ಒಳಗೊಂಡಿರುವ ಸಿನಿಮಾ ಇದು, ಇದರ ಜೊತೆಗೆ ತಂದೆ-ತಾಯಿಯ ಪ್ರೀತಿ ವಾತ್ಸಲ್ಸ, ಅನಾಥ ಮಕ್ಕಳಿಗಾಗಿ ಮಿಡಿಯುವ ಹೃದಯ, ವೇಶ್ಯೆಯ ಬಗ್ಗೆ ಇರುವ ಸಹಾನುಭೂತಿ ಸೇರಿ ಹಲವು ವಿಷಯಗಳನ್ನು ಚಿತ್ರದ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಯುವ ಪ್ರತಿಭೆ ಮುಕುಂದ ರಾಮಸ್ವಾಮಿ ಮೊದಲ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ, ಚಿತ್ರದುದ್ದಕ್ಕೂ ಅನುಭವಿ ಕಲಾವಿದರ ರೀತಿ ನಟಿಸಿದ್ದಾರೆ, ಮೊದಲ ಚಿತ್ರ ಅನ್ನುವುದು ಎಲ್ಲಿಯೂ ಗೊತ್ತಾಗದ ಹಾಗೆ ನಟಿಸಿದ್ದಾರೆ, ಚಿತ್ರಕ್ಕಾಗಿ ಮಾಡಿಕೊಂಡಿರುವ ತಯಾರಿ ಮತ್ತು ಸಿದ್ದತೆಯೂ ಪರದೆಯ ಮೇಲೆ ಗೋಚರಿಸುತ್ತದೆ.

ನಿರ್ದೇಶಕ ಕೃತ್ವಿಕ್ ಆಯ್ಕೆ ಮಾಡಿಕೊಂಡ ಕಥೆಗೆ ನ್ಯಾಯ ಒದಗಿಸಿದ್ದಾರೆ, ಅದನ್ನು ಈಗ ಪ್ರೇಕ್ಷಕರ ಮುಂದಿಟ್ಟಿದ್ದಾರೆ, ಪ್ರೇಕ್ಷಕರು ಅಪ್ಪಿ, ಒಪ್ಪಿಕೊಳ್ಳಬೇಕಾಗಿದೆ. ಯುವ ಕಲಾವಿದರ ಜೊತೆಗೆ ಹಿರಿಯ ಕಲಾವಿದರಾದ ರಾಜೇಶ್ ನಟರಂಗ, ಮಂಡ್ಯ ರಮೇಶ್ ಮತ್ತು ಸಂಗೀತಾ ಅನೀಲ್ ಚಿತ್ರಕ್ಕೆ ಪೂರಕವಾಗಿದ್ದಾರೆ.

ಚಿತ್ರದ ಹಾಡುಗಳು ಕಿವಿಗೆ ಹಿಂಪು ನೀಡುತ್ತವೆ, ಹೊಸಬರ ಚಿತ್ರವನ್ನು ಚಿತ್ರಮಂದರಿದತ್ತ ಸೆಳೆಯುವ ಪ್ರಯತ್ನ ಇದಾಗಿದೆ. ಸಿನಿಮಾ ನೋಡಿದ ಒಂದಷ್ಟು ಮಂದಿ ಹುಡುಗ- ಹುಡುಗಿಯರು ತಮ್ಮ ಜೀವನದಲ್ಲಿ ಹೀಗೆ ಆಗಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬಹುದು, ಅಥವಾ ನಾವು ಅಲ್ಲಿಂದಲೇ ಬಂದಿದೇವಲ್ಲವೇ ಎನ್ನುವ ವಾಸ್ತವವನ್ನು ಕಣ್ಣಮುಂದೆಕಟ್ಟಿಕೊಡುವ ಚಿತ್ರವೂ ಇದು.

ಡಿಲವರಿ ಬಾಯ್ ರಾಮ್ ( ಮುಕುಂದ ರಾಮಸ್ವಾಮಿ) ಕಷ್ಟದಲ್ಲಿದ್ದ ಹುಡುಗಿ ಪವಿತ್ರಾ (ಚಂದನಾ ಗೌಡ)ಳನ್ನು ಅಲ್ಲಿಂದ ಪಾರು ಮಾಡುತ್ತಾನೆ, ಆಕೆ ಮಾಡುವ ಕೆಲಸ ಕೇಳಿ ದಂಗಾಗಿ ಹೋಗ್ತಾನೆ. ಬ್ಲಾಗರ್ ರಶಿಕಾ ( ಶ್ವೇತಾ ಕೋಗ್‍ಲೂರ್) ಪ್ರೀತಿಯ ಹೆಸರಲ್ಲಿ ಕೈಕೊಡುತ್ತಾಳೆ, ಇದರಿಂದ ಆಕಾಶವೇ ಕಳಚಿ ಬಿದ್ದಂತಾಗುತ್ತದೆ, ಪ್ರೀತಿಯ ಬಗ್ಗೆ ತಿಳಿದಿದ್ದ ಮೇರಿ (ದಿಯಾ ಕೀರ್ತಿ) ರಾಮ್‍ನನ್ನು ಮನಸಾರೆ ಇಷ್ಟಪಡಲು ಆರಂಭಿಸುತ್ತಾಳೆ,

ಮೊದಲೆರಡು ಪ್ರೀತಿ ಕೈಕೊಟ್ಟಿದ್ದರಿಂದ ಮೂರನೇ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನಾ.
ಇಲ್ಲ ಪವಿತ್ರಾ ಮಾಡುವ ಅಪವಿತ್ರಾ ಕೆಲಸ ಗೊತ್ತಿದ್ದರೂ ಆಕೆಯನ್ನು ಮದುವೆಯಾಗುವ ರಾಮ್ ಜೀವನದಲ್ಲಿ ಏನೆಲ್ಲಾ ನಡೆಯಲಿದೆ, ಆಕೆ ಮಾಡುವ ಕೆಲಸ ಆದರೂ ಏನು ಎನ್ನುವುದು ಗೊತ್ತಾಗಬೇಕಾದರೆ ಲವ್ ಸಿನನ್ಸ್ ಸಿನಿಮಾ ನೋಡಬೇಕು.

ನಿರ್ದೇಶಕ ಕೃತಿಕ್ ವಿಭಿನ್ನ ಬಗೆಯ ಪ್ರೇಮಕಥೆ ಸಿನಿಮಾವನ್ನು ಜನರ ಮುಂದಿಟ್ಟಿದ್ಧಾರೆ,ನಾಯಕ ಮುಕುಂದ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ. ಇನ್ನೂ ನಾಯಕಿಯರಾದ ಚಂದನಾ ಗೌಡ, ಶ್ವೇತಾ ಕೋಗ್ ಲೂರ್, ದಿಯಾ ಕೀರ್ತಿ ಸಿಕ್ಕ ಅವಕಾಶ ಬಳಿಸಿಕೊಂಡಿದ್ದಾರೆ.

ಜಯತೀರ್ಥ ಹಾಗು ಹುಲಿ ಕಾರ್ತಿಕ್, ಚೇತನ್ ದುರ್ಗಾ ಸೇರಿದಂತೆ ಹಲವು ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ. ವೀರ್ ಸಮರ್ಥ್ ಸಂಗೀತ ಮತ್ತು ಬೆಳ್ಳಿ ತಿಮ್ಮ ಛಾಯಾಗ್ರಾಹಣ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin