Mango Paccha Movie Review: A new breed enters the sandalwood forest: Same color, flavor, taste, Kiccha Sudeep's counterpart

Mango Paccha Movie Review : ಚಂದನವನಕ್ಕೆ ಹೊಸ ತಳಿ ಪ್ರವೇಶ : ಅದೇ ಬಣ್ಣ, ಸ್ವಾದ, ರುಚಿ, ಕಿಚ್ಚ ಸುದೀಪ್ ಪ್ರತಿರೂಪ - CineNewsKannada.com

Mango Paccha Movie Review : ಚಂದನವನಕ್ಕೆ ಹೊಸ ತಳಿ ಪ್ರವೇಶ : ಅದೇ ಬಣ್ಣ, ಸ್ವಾದ, ರುಚಿ, ಕಿಚ್ಚ ಸುದೀಪ್ ಪ್ರತಿರೂಪ

ಚಿತ್ರ ; ಮ್ಯಾಂಗೋ ಪಚ್ಚ
ನಿರ್ದೇಶನ : ವಿವೇಕ ಪ್ರಕಾಶ್
ತಾರಾಗಣ : ಸಂಚಿತ್ ಸಂಜೀವ್, ಕಾಜಲ್ ಕುಂದರ್, ಮಯೂರ್ ಪಟೇಲ್, ಉಗ್ರಂ ಮಂಜು, ಹರಿಣಿ ಶ್ರೀಕಾಂತ್, ಹಂಸ, ರಾಕ್ ಲೈನ್ ವೆಂಕಟೇಶ್, ಭಾವನ ರಾಮಣ್ಣ, ಡಾಲಿ ಧನಂಜಯ, ಜೈ ಮತ್ತಿತರರು
ರೇಟಿಂಗ್ : * 3.5 / 5

ಕನ್ನಡ ಚಿತ್ರರಂಗಕ್ಲೆ ಹೊಸ ತಳಿಯೊಂದು ಪ್ರವೇಶ ಪಡೆದಿದೆ. ಅದೇ ಸ್ವಾದ, ರುಚಿ, ಬಣ್ಣ, ಪಕ್ಕಾ ರಗಡ್. ಅರಡಿ ಕಟೌಟು, ಕಣ್ಣಂಚಿನಲ್ಲಿಯೇ ಮೋಡಿ ಮಾಡುವ ಲುಕ್, ಕಿಚ್ಚ ಸುದೀಪ್ ಅವರನ್ಮೇ ಹೋಲುವ ಪ್ರತಿರೂಪ, ಮಾಸ್ ನಾಯಕರ ಸಾಲಿಗೆ ನಿಲ್ಲಬಹುದಾದ ಮತ್ತೊಬ್ಬ ಮಾಸ್ ನಾಯಕ. ಚಿತ್ರರಂಗದ ಭರವಸೆ ಮೂಡಿಸಿದ ಬೆಳ್ಳಿಕಿರಣ.

“ಮ್ಯಾಂಗೋ ಪಚ್ಚ ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಯುವ ನಟ ಸಂಚಿತ್ ಸಂಜೀವ್ ಪ್ರವೇಶವಾಗಿದೆ. ಮೊದಲ ಯತ್ನದಲ್ಲಿ ಭರವಸೆ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಬೆಟ್ಟದಷ್ಟು ಭರವಸೆ ಮೂಡಿಸಿದಾರೆ. ಕಿಚ್ಚ ಸುದೀಪ್ ಅವರ ಸಹೋದರಿಯ ಪುತ್ರ ಎನ್ನುವ ಹೆಗ್ಗಳಿಕೆ ಬೆನ್ನ ಹಿಂದೆ ಇರುವುÀರಿಂದ ಜವಾಬ್ದಾರಿ ಜೊತೆಗೆ ಉಡಾಫೆಯಾಗಿ ಮಾಡುವಂತಿಲ್ಲ ಎನ್ನುವ ಎಚ್ಚರಿಕೆ ಸಂದೇಶವೂ ಅವರ ಮುಂದೆ ಇದೆ.

ಸಿನಿಮಾ ಮಂದಿರಗಳಲ್ಲಿ ಡಿವಿಡಿ ಮಾಡಿ ಮಾರಿಕೊಂಡು ಬದುಕು ಸಾಗಿಸುತ್ತಿದ್ದ ಪ್ರಶಾಂತ್, ಮಾದಕ ದ್ರವ್ಯ ಮಾರಾಟ ಜಾಲದ ನೇತೃತ್ವ ವಹಿಸಿ ಪಚ್ಚ (ಸಂಚಿತ್ ಸಂಜೀವ್) ಆ ನಂತರ ಮ್ಯಾಂಗೋ ಪಚ್ಚನಾದ ಕಥೆ. ಟೀ ಅಂಗಡಿ ನಡೆಸುವ ಸುಜಿ (ಕಾಜಲ್ ಕುಂದರ್) ನಡುವೆ ಪ್ರೀತಿ. ಜೊತೆಗೆ ಸರಳ,ಸಸ್ಪೆನ್ಸ್ ಥ್ರಿಲ್ಲರ್ ಕಥೆ, ರಕ್ತ ಸಂಬಂಧ. ತಾಯಿ-ಮಕ್ಕಳ ಬಾಂಧವ್ಯ, ಪ್ರೇಮಕಥೆಯ ತಿರುಳು ಚಿತ್ರದಲ್ಲಿದೆ. ಜೊತೆಗೆ ರಾಜಕೀಯಕ್ಕಾಗಿ ಸಹೋದರನ್ನು ಬಳಸಿಕೊಳ್ಳುವ ರಾಜಕಾರಣಿಯ ತಂತ್ರಗಾರಿಕೆಯೂ ಇಲ್ಲಿದೆ.

ನಾಯಕ ಸಂಚಿತ್ ಸಂಜೀವ್, ಇಡೀ ಸಿನಿಮಾದ ಪ್ರತಿಫ್ರೇಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಮಾದಕ ವಸ್ತು ಮಾರಾಟ ಜಾಲ, ರಾಜಕಾರಣಿಯ ಕುತಂತ್ರ, ಅಣ್ಣ ತಮ್ಮಂದಿರ ನಡುವೆ ಭಿನ್ನಾಪ್ರಾಯ, ಜೊತೆಗೆ ಸ್ನೇಹ, ಪ್ರೀತಿ ಎಲ್ಲದುರ ಮಿಶ್ರಣ.

ಸಿನಿಮಾ ಆರಂಭ ಮತ್ತು ಅಂತ್ಯ ಅಪರಾಧದಿಂದ, ಕೊನೆಯಲ್ಲಿ ಡಾಲಿ ಧನಂಜಯ ಪ್ರವೇಶದೊಂದಿಗೆ ಸಿನಿಮಾ ಕುತೂಹಲದೊಂದಿಗೆ ಅಂತ್ಯಗೊಂಡಿದೆ, ಈ ಮೂಲಕ ಮುಂದೇನು ಎನ್ನುವ ಮತ್ತಷ್ಟು ತೀವ್ರತೆ ಹೆಚ್ಚಿಸಿದೆ, ಹೀಗಾಗಿ ಮುಂದಿನ ಭಾಗದಲ್ಲಿ ಏನೆಲ್ಲಾ ಆಗಬಹುದು ಎನ್ನುವ ಚರ್ಚೆ ಪ್ರೇಕ್ಷಕರಲ್ಲಿ ಮನೆ ಮಾಡಿದರೆ ಅಚ್ಚರಿ ಇಲ್ಲ

ಮೊದಲ ಪ್ರಯತ್ನದಲ್ಲಿ ಸಿಕ್ಕ ಅವಕಾಶವನ್ನು ನಾಯಕ ಸಂಚಿತ್ ಸದುಪಯೋಗಪಡಿಸಿಕೊಂಡಿದ್ದಾರೆ, ಸಂಚಿತ್ ಧ್ವನಿ,ಹಾವ,ಭಾವ, ನೋಟ ಎಲ್ಲವೂ ಕಿಚ್ಚ ಸುದೀಪ್ ಅವರನ್ನೇ ಹೋಲುತ್ತಿದೆ, ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ತಳಿಯ ಜೂನಿಯರ್ ಕಿಚ್ಚನ ಆಗಮನವಾಗಿದೆ

ಕಾಜಲ್ ಕುಂದರ್ ನಾಯಕಿ ಸಿಕ್ಕ ಅಲ್ಪ ಅವಕಾಶ ಬಳಿಸಿಕೊಂಡಿದ್ದಾರೆ. ಉಗ್ರಂ ಮಂಜು, ಮಯೂರ್ ಪಟೇಲ್, ಜೈ, ಹರಿಣಿ ಶ್ರೀಕಾಂತ್ ಮತ್ತಿತರರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಾವನಾ ರಾಮಣ್ಣ, ರಾಕ್ ಲೈನ್ ವೆಂಕಟೇಶ್, ಡಾಲಿ ಧನಂಜಯ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin