“ರೈತರ ಮಕ್ಕಳಿಗೆ ಹೆಣ್ಣು ಕೊಡಿ” ಚಿತ್ರದ ಟ್ರೇಲರ್,ಹಾಡುಗಳು ಬಿಡುಗಡೆ
‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’ ಚಿತ್ರದ ಟ್ರೇಲರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆಯಾಗಿದೆ. ಕೆಂಪರಾಮ್ ಹೆಡಿಯಾಲ ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮೆಲ್ಲುಲಿಗಾನ ಪೆÇ್ರಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ನಿರ್ದೇಶಕ ಕೆಂಪರಾಮ್ ಹೆಡಿಯಾಲ ಮಾತನಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತೇನೆ. ಮುಂದೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ರೈತರ ಕಾಳಜಿ ಬಗ್ಗೆ ಯೋಚಿಸಿದ್ದೆ ಚಿತ್ರವು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಇಲ್ಲಿನ ನೆಲದ ಮಣ್ಣಿನ ಜೀವನಗಾಥೆ ಎಳೆಎಳೆಯಾಗಿ ಹಳ್ಳಿಸೊಗಡಿನ ಸನ್ನಿವೇಶಗಳನ್ನು ತೋರಿಸಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುವುದಿಲ್ಲ ರಾಜ್ಯವ್ಯಾಪ್ತಿ ಮಾರ್ದನಿಸಿ ಅವರ ಬದುಕಿನಲ್ಲಿ ತಲ್ಲಣವನ್ನು ಉಂಟು ಮಾಡುತ್ತಿದೆ. ಚಿತ್ರವು ವಿಭಿನ್ನ ಹಾಗೂ ವಿಶಿಷ್ಟವಾದ ಅನುಭವಗಳನ್ನು ತೋರಿಸಿಕೊಡುತ್ತದೆ. ಅವರ ಬದುಕಿನ ಸೂಕ್ಷತೆಗಳು, ಅಲ್ಲಿನ ಗಂಭೀರ ಅಂಶಗಳು ಗಮನ ಸೆಳೆದು, ಬುದ್ದಿ, ಭಾವ ಚಿತ್ತ ಜಾಗೃತಗೊಳ್ಳುವಂತೆ ಮಾಡುತ್ತಾ, ನೋಡುಗರ ಮನಸ್ಸನ್ನು ಒಳಹೊಕ್ಕಿಸಿ, ಸನ್ನಿವೇಶಗಳಲ್ಲಿ ಕಾಣುವ ಪಾತ್ರಗಳು ನಮ್ಮ ಜೀವನದ ಪ್ರತಿಬಿಂಬವಾಗುವಂತೆ ಮಾಡುತ್ತದೆ. ಗೆಲ್ಲುತ್ತಾ ಹೋಗುವವರು ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಸೋತು ಗೆಲ್ಲುವವರು ಇತಿಹಾಸವನ್ನು ಬದಲಾಯಿಸುತ್ತಾರೆ ಎನ್ನುವಂತ ತೂಕದ ಸಂದೇಶವನ್ನು ಹೇಳಲಾಗಿದೆ ಎಂದರು
ಜಗದೀಶ್ ಮುಕಿ ನಾಯಕ. ದಿವ್ಯಾಶ್ರೀ ನಾಯಕಿ. ಉಳಿದಂತೆ ಜೈ ಅಮೋಘ್ದಾಸ್, ಅಗಸ್ತ್ಯ ಪ್ರೇಮ್, ಸಂಗನಗೌಡ, ಸಂತೋಷ್ ಜೋಗುಳ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ.

ಸಂಗೀತ-ಛಾಯಾಗ್ರಹಣ-ಸಂಕಲನ ರೋಹನ್.ಎಸ್.ದೇಸಾಯಿ, ಸಾಹಸ ಸಂತೋಷ್ ರಾಥೋಡ್, ನೃತ್ಯ ಅಕುಲ್ ಮಾಸ್ಟರ್-ಅಜಯ್ ಜೈಕೃಷ್ಣ-ಸಾಕ್ಷಿ ಅವರದಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಂದ ಹಾಗೆ ಚಿತ್ರವು ಇದೇ ತಿಂಗಳು ತೆರೆ ಕಾಣಲಿದೆ.

