Ragini is now the queen of Indraloka in the movie "Madanika".

“ ಮದನಿಕ’ ಚಿತ್ರದಲ್ಲಿ ಇಂದ್ರಲೋಕಕ್ಕೆ ರಾಗಿಣಿ ಈಗ ಪಟ್ಟದರಸಿ - CineNewsKannada.com

“ ಮದನಿಕ’ ಚಿತ್ರದಲ್ಲಿ ಇಂದ್ರಲೋಕಕ್ಕೆ ರಾಗಿಣಿ ಈಗ ಪಟ್ಟದರಸಿ

ಹಾಡುಗಳನ್ನು ಕೇಳ್ತಾ ಇದ್ದರೆ ಮನಸ್ಸಿಗೆ ಮುದ ನೀಡಬೇಕು, ಕಿವಿಗೆ ಹಿತ ವೆನಿಸಬೇಕು. ಆ ರೀತಿ ಇರಬೇಕು ಸಾಹಿತ್ಯ. ಅಷ್ಟು ಇಂಪಾದ ಸಾಹಿತ್ಯ ನೀಡಿರೋದು ಮದನಿಕ ಚಿತ್ರತಂಡ. ಮದನಿಕ ಸಿನಿಮಾದಿಂದ ಕಾನನಗಳ ಕನ್ನಿಕಾ, ಇಂದ್ರಲೋಕ ಚಂದ್ರಿಕಾ, ಪಟ್ಟದರಸಿಯಾದಳೀಗಾ ಮದನಿಕ ಎಂಬ ಹಾಡು ಬಿಡುಗಡೆ ಆಗಿದೆ.

ಹಾಡಲ್ಲಿ ರಾಗಿಣಿ ದ್ವಿವೇದಿ ಅಪ್ಸರೆಯಂತೆ ಕಾಣಿಸ್ತಾ ಇದ್ದಾರೆ. ಗೊಂಬೆಗಳಂತೆ ಈ ಹಾಡಿನಲ್ಲಿ ರಾಜ-ರಾಣಿ, ಸೇವಕಿಯರನ್ನ ಸೃಷ್ಟಿ ಮಾಡಲಾಗಿದೆ. ರಾಜನಂತೆ ದೇವ್ ಗಿಲ್ ಕಾಣಿಸಿಕೊಂಡಿದ್ದಾರೆ. ಅರಮನೆಯ ಬ್ಯಾಕ್ ಡ್ರಾಪ್ ನಲ್ಲಿ ಹಾಡನ್ನ ಶೂಟ್ ಮಾಡಲಾಗಿದೆ. ದೇವಲೋಕದ ಸೃಷ್ಟಿಯಂತೆ ಕಣ್ಣಿಗೆ ಸುಂದರವಾಗಿ ಈ ಹಾಡಿನ ದೃಶ್ಯ ಮೂಡಿ ಬಂದಿದೆ.

ಈ ಹಾಡಿನ ಸಾಹಿತ್ಯವನ್ನು ಬರೆದವರು ಕೆ ಕಲ್ಯಾಣ್ ಅವರು. ಅದ್ಭುತ ಮ್ಯೂಸಿಕ್ ನೀಡಿದವರು ಸಲಾಮ್ ವಿರೋಲಿ. ಹಾಗೇ ಇಷ್ಟು ಸುಂದರ ಪದಗಳಿಗೆ ಧ್ವನಿಯಾದವರು ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್. ಹಾಡು ಇಷ್ಟು ಅದ್ಭುತವಾಗಿ ನಾಟುವುದಕ್ಕೆ ಈ ಧ್ವನಿಯೂ ಕಾರಣವಾಗಿದೆ. ಡಿಬೀಟ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಹಾಡು ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.

ಎಸ್.ಪಿ.ಆರ್ ಪ್ರೊಡಕ್ಷನ್ಸ್ ಮತ್ತು ಸಖರ್ಥ್ ಡಿಜಿಟಲ್ ಹೌಸ್’ ಬ್ಯಾನರಿನಲ್ಲಿ ಸುಜಾತ ಲಕ್ಷ್ಮೀ, ಕುಮಾರಸ್ವಾಮಿ `ಮದನಿಕ’ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಬಿ. ಎಸ್. ಸಂಜಯ್ ನಿರ್ದೇಶನವಿದ್ದು, ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ, ಶಶಿಕುಮಾರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್. ಗಿರಿ ಛಾಯಾಗ್ರಹಣ, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಶಾಸ್ತ್ರೀಯ ಶೈಲಿಯಲ್ಲಿರುವ ಈ ಹಾಡುಗಳಿಗೆ ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್, ಡಾ. ದೇವಾನಂದ್ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಮದನ್ ಹರಿಣಿ, ತ್ರಿಭುವನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin