Actor Yash's performance as Ravana in the film "Ramayana" is a huge success: Bollywood celebrities stand aside

“ರಾಮಾಯಣ” ಚಿತ್ರದಲ್ಲಿ ರಾವಣನಾಗಿ ನಟ ಯಶ್ ಆರ್ಭಟ: ಸೈಡ್ ಬಿಟ್ಟು ನಿಂತ ಬಾಲಿವುಡ್ ಮಂದಿ - CineNewsKannada.com

“ರಾಮಾಯಣ” ಚಿತ್ರದಲ್ಲಿ ರಾವಣನಾಗಿ ನಟ ಯಶ್ ಆರ್ಭಟ: ಸೈಡ್ ಬಿಟ್ಟು ನಿಂತ ಬಾಲಿವುಡ್ ಮಂದಿ

ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂಟಪದಲ್ಲಿ ಪ್ಯಾನ್ ಇಂಡಿಯಾ ಚಿತ್ರ “ ರಾಮಾಯಣ” ಸಿನಿಮಾದ ಟ್ರೈಲರ್ ಬಿಡುಗಡೆಯ ಪ್ರಥಮ ಸಂಕಲ್ಪ ಕಾರ್ಯಕ್ರಮ. ದೇಶದ ವಿವಿಧ ಭಾಷೆಯ ಚಲನಚಿತ್ರ ಪತ್ರಕರ್ತರು, ಬಾಲಿವುಡ್ ಸಿನಿಮಾ ಗಣ್ಯರು, ಹಲವು ಧರ್ಮಗಳು ಸ್ವಾಮೀಜಿಗಳು ಹಾಜರಿದ್ದರು, ಟ್ರೈಲರ್ ಬಿಡುಗಡೆ ನಂತರ ಇನ್ನೇನು ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿತ್ತು. ನಿರ್ಮಾಪಕ ನಮಿತ್ರ ಮಲ್ಹೋತ್ರ ನಿಮ್ಮೆದುರು ಒಂದು ಐಟಂ ಪ್ರದರ್ಶಿಸುತ್ತೇವೆ ಎಂದು ವೇದಿಕೆಯ ಎಲ್ಲಾ ಲೈಟ್‍ಆಫ್ ಮಾಡಿದರು. ವೇದಿಕೆ ಮೇಲಿದ್ದ ಚಿತ್ರದ ತಾರಾಬಳಗ, ತಂತ್ರಜ್ಞರು ಸೈಡ್‍ನಲ್ಲಿ ನಿಂತಿದ್ದರು.,

ಕತ್ತಲೆಯ ನಡುವೆ ಅಲ್ಲೊಂದು ನಕ್ಷತ್ರ ಎಂಟ್ರಿ ಆಗುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಜೋರು ಕರತಾಡನ, ಶಿಳ್ಳೆ, ಕೇಕೆಯ ಅಬ್ಬರ.. ವೇದಿಕೆ ಮೇಕಿದ್ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿದೇರ್ಶಕ ನಿತೇಶ್ ತಿವಾರಿ, ನಾಯಕಿಯರಾದ ಸಾಯಿ ಪಲ್ಲವಿ, ರಾಕುಲ್ ಪ್ರೀತ್ ಸಿಂಗ್, ಹಿರಿಯ ಕಲಾವಿದೆ ಶೋಭನಾ ಪಿಳ್ಳೈ, ಅರುಣ್ ಗೋವಿಲ್, ರವಿ ದುಬೆ, ಕುನಾಲ್ ಕಪೂರ್ ಕೂಡ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು.

ವೇದಿಕೆ ಮುಂಬಾಗದಲ್ಲಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ವಿವೇಕ್ ಒಬೆರಾಯ್,ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಧರ್ಮಗಳು . ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು,

ಅವರು ಯಾರು ಅಂತೀರಾ,, ಅವರೇ ರಾಕಿಂಗ್ ಸ್ಟಾರ್ ಯಶ್. ರಾಮಾಯಣ ಚಿತ್ರದಲ್ಲಿ ರಾವಣನಾಗಿ ಅಬ್ಬರಿಸಿದ್ದಾರೆ, ಚಿತ್ರ ಈ ವರ್ಷದ ದೀಪಾವಳಿಗೆ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆಯ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ನಟ ಯಶ್ ವೇದಿಕೆ ಮೇಲೆ ಬರುತ್ತಿದ್ದಂತೆ ಬಾಲಿವುಡ್ ಚಿತ್ರರಂಗ, ಜಾಗ ಮಾಡಿಕೊಟ್ಟು ಸೈಡ್‍ನಲ್ಲಿ ನಿಂತಿತ್ತು, ಇದಲ್ಲವೇ ಕನ್ನಡದ ನಟನೊಬ್ಬನ ತಾಕತ್ತು, ಮತ್ತು ಪ್ರತಿಭೆಗೆ ಸಿಕ್ಕ ಗೌರವ.

ನಟ ರಾಕಿಂಗ್ ಸ್ಟಾರ್ ಅಮೇರಿಕಾದಲ್ಲಿದ್ದಾರಂತೆ,, ಟ್ರೈಲರ್ ಬಿಡುಗಡೆಯ ಪೂರ್ವಬಾರಿ ಕಾರ್ಯಕ್ರಮಕ್ಕೆ ಬರುವುದಿಲ್ಲವಂತೆ ಎನ್ನುವುದು ಸೇರಿದಂತೆ ಹಲವು ಗುಸು ಗುಸು ನಡುವೆ “ರಾಮಾಯಣ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಮುಗಿಯುವ ವೇಳೆಗೆ ವೇದಿಕೆ ಮೇಲೆ ನಟ ಯಶ್ ಆಗಮನದಿಂದ ಹೊಸ ಸಂಚಲನ ಸೃಷ್ಠಿಯಾಗಿತ್ತು.

ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರ ಮಾಡಲು ನಿರ್ಮಾಪಕ ನಮಿತ್ ಮಹ್ಲೋತ್ರಾ ಅವಕಾಶ ಮಾಡಿಕೊಟ್ಟಿದ್ದಾರೆ, ನಿರ್ದೇಶಕ ನಿತೇಶ್ ತಿವಾರಿ ಪಾತ್ರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲು ಹಲವು ಸಲಹೆ ಸೂಚನೆ ನೀಡಿದ್ದಾರೆ. ಚಿತ್ರ ನಿರೀಕ್ಷೆಗೂ ಮೀರಿ ಮೂಡಿಬಂದಿದೆ. ನಟಿ ಸಾಯಿ ಪಲ್ಲವಿ ಸೀತೆಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ, ಶೂರ್ಪನಖಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಉತ್ತಮ ನಟನೆ ನೀಡಿದ್ದಾರೆ, ರಾಮನಾಗಿ ನಟ ರಣಬೀರ್ ಕಪೂರ್ ಮನೋಜ್ಞ ಅಭಿನಯ ನೀಡಿದ್ದಾರೆ. ಜೊತೆಗೆ ಚಿತ್ರದಲ್ಲಿ ವಿಶೇಷ ಆಕರ್ಷಣೆ ಎನ್ನುವಂತೆ ಲಕ್ಷಣನ ಪಾತ್ರದಲ್ಲಿ ರವಿ ದುಬೆ ಕಾಣಿಸಿಕೊಂಡಿದ್ದು ಚಿತ್ರರಂಗಕ್ಕೆ ಮತ್ತೊಬ್ಬ ಉತ್ತಮ ನಟ ಸಿಕ್ಕಿದ್ದಾರೆ ಎಂದರು

ಇನ್ನುಳಿದಂತೆ ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ಸೇರಿದಂತೆ ಶೋಭನಾ ಪಿಳ್ಳೈ ಸೇರಿದಂತೆ ಹಲವು ಕಲಾವಿದರ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅದ್ಬುತ ದೃಶ್ಯ ವೈಭವ ಮೂಡಿಬಂದಿದೆ, ಇದೇ ವರ್ಷದ ದೀಪಾವಳಿಯಲ್ಲಿ ಚಿತ್ರ ತೆರೆಗೆ ಬರಲಿದೆ,ಅದ್ಬುತ ದೃಶ್ಯ ವೈಭವ ಕಟ್ಟಿಕೊಡಲಿದೆ ಎಂದು ಹೇಳಿದರು

ಈ ವೇಳೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ, ಅವರು ಚಿತ್ರದಲ್ಲಿ ರಾವಣನಾಗಿ ಅಬ್ಬರಿಸಿದ್ದಾರೆ, ರಾಮಾಯಣ ಚಿತ್ರವನ್ನು ತೆರೆಯ ಮೇಲೆ ತರಬೇಕು ಎನ್ನುವುದು ಹತ್ತು ವರ್ಷಗಳ ಕನಸು, ಕಳೆದ ಮೂರು ವರ್ಷಗಳಿಂದ ಚಿತ್ರದ ತಾಂತ್ರಿಕ ಕೆಲಗಳಲ್ಲಿ 10 ಸಾವಿರಕ್ಕೂ ಅಧಿಕ ತಂತ್ರಜ್ಞರು ಕೆಲಸ ಮಾಡಿದ್ದಾರೆ. ನಮ್ಮ ಕುಟುಂಬ ಶ್ರೀರಾಮನ ಪರಮಭಕ್ತರು, ಹೀಗಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ, ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು

ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ ಮತ್ತು ನಟ ಯಶ್ ಒಡೆತನದ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin