Actors Sharan and Naveen Sajju, who lent their voices to the song from the film “Chandrahasa”,

“ಚಂದ್ರಹಾಸ” ಚಿತ್ರದ ಹಾಡಿಗೆ ಧ್ವನಿಯಾದ ನಟರಾದ ಶರಣ್- ನವೀನ್ ಸಜ್ಜು - CineNewsKannada.com

“ಚಂದ್ರಹಾಸ” ಚಿತ್ರದ ಹಾಡಿಗೆ ಧ್ವನಿಯಾದ ನಟರಾದ ಶರಣ್- ನವೀನ್ ಸಜ್ಜು

“ಕಾಮಿಡಿ ಕಿಲಾಡಿ” ವಿಜೇತ ಹರೀಶ್ ಹಿರಿಯೂರು ಅಭಿನಯದ ಚಿತ್ರ “ಚಂದ್ರಹಾಸ” ವಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ನಿರ್ಮಾಪಕಿ ಶೈಲಜಾ ನಾಗ್ ಚಂದ್ರಹಾಸ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆಹೊಸ ಕಲಾವಿದರೇ ಸೇರಿ ಮಾಡಿರುವ ಚಂದ್ರಹಾಸ ಸಿನಿಮಾವನ್ನು ಆನಂದ್ ಎಸ್ ಕಲಕಬಂಡಿ ನಿರ್ದೇಶನ ಮಾಡಿದ್ದಾರೆ

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಮೊದಲ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.. ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ,ಈ ಚಡ್ಡಿ ಬಡ್ಡಿ ಹಾಡನ್ನು ನಟ ಶರಣ್ ಹಾಗೂ ಗಾಯಕ ನವೀನ್ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡಿದ್ದಾರೆ .

ಚಂದ್ರಹಾಸ ಸಿನಿಮಾವನ್ನ ಬಸವಂತಗೌಡ ಪಾಟೀಲ್ ನಿರ್ಮಾಣ ಮಾಡಿದ್ದು ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದಾರೆ. ಡಿಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಚಂದ್ರಹಾಸ ಚಿತ್ರದ ಚಡ್ಡಿಬಡ್ಡಿ ಹಾಡು ಬಿಡುಗಡೆ ಆಗಿದೆ.

ಚಂದ್ರಹಾಸ ಚಿತ್ರದಲ್ಲಿ ಹರೀಶ ಹಿರಿಯೂರು ನಾಯಕನಾಗಿ ಅಭಿನಯ ಮಾಡಿದ್ದು , ಛಾಯಾಶ್ರೀ ಉಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಸ್ನೇಹಿತನ ಪಾತ್ರಗಳಲ್ಲಿ ನಿಂಗರಾಜು ಮಂಡ್ಯ ಅಭಿನಯಿಸಿದ್ದು ಸಂತೋಶ್ ಕೆರಿ , ಸೂರ್ಯಕಲ, ಜ್ಯೂತಿ ಮಂಗಳೂರು, ಕಳಕಪ್ಪ ತಲವಾರ್ ಇನ್ನು ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ

ಕಾಮಿಡಿ ಕಿಲಾಡಿ ಶೋ ನ ಕಲಾವಿದರಾದ ಅಪ್ಪಣ್ಣ, ಜಗಪ್ಪ, ಸುಷ್ಮಿತಾ, ನಯನಾ, ಇನ್ನೂ ಅನೇಕರು ಬಂದು ಸ್ನೇಹಿತನಿಗೆ ಸಾಥ್ ನೀಡಿದ್ದು .ಚೇತನ್ ಶರ್ಮ ಛಾಯಾಗ್ರಾಹಣ ವಿ ಗಿರೀಶ್ ಎಂ ಸಿ ಹಳ್ಳಿ ಸಂಕಲನವಿದ್ದು ಚಿತ್ರವನ್ನು ಶೀಘ್ರದಲ್ಲಿಯೇ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin