Rakky Movie Review: The rise of a promising hero for Kannada cinema, “Rakky",

Rakky Movie Review : ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕ “ರಕ್ಕಿ” ಉದಯ - CineNewsKannada.com

Rakky Movie Review : ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕ “ರಕ್ಕಿ” ಉದಯ

ಚಿತ್ರ :ರಕ್ಕಿ
ನಿರ್ದೇಶನ: ವೆಂಕಟ್ ಭಾರಧ್ವಜ್
ತಾರಾಗಣ: ರಕ್ಕಿ ಸುರೇಶ್, ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್, ಸಂಪತ್ ಮೈತ್ರೇಯಾ, ಬಿ, ಸುರೇಶ್, ಬಾಲರಾಜವಾಡಿ, ರಮೇಶ್ ಪಂಡಿತ್, ಹರಣಿ, ಗೋವಿಂದೇಗೌಡ, ರೇಖಾ ಮತ್ತಿತರರು
ರೇಟಿಂಗ್: *** 3.5 / 5

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ನಟರು ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ. ಕಲೆ ಎಲ್ಲರನ್ನು ಆಹ್ವಾನಿಸಿದರೂ ಕಲಾ ಸರಸ್ವತಿ ಕೆಲವರನ್ನು ತಮ್ಮ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಆ ಸಾಲಿಗೆ ನಿಲ್ಲಬಹುದಾದ ಮತ್ತೊಂದು ಯುವ ಪ್ರತಿಭೆ, ಯುವನಾಯಕ ನಟ ರಕ್ಕಿ ಸುರೇಶ್ ಸಿಕ್ಕಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣ ಮೂಡಿಸಿದ್ದಾರೆ.

ನಿರ್ದೇಶಕ ವೆಂಕಟ್ ಭಾರಧ್ವಜ್ “ರಕ್ಕಿ” ಚಿತ್ರದ ಮೂಲಕ ಆಕ್ಷನ್, ಥ್ರಿಲ್ಲರ್, ಎಮೋಷನ್, ಅಪರಾಧ ಹಾಗು ಕೌಟಂಬಿಕ ಅಂಶಗಳೊಂದಿಗೆ ಯುವನಟ ರಕ್ಕಿ ಸುರೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹೊಸ ಹುಡುಗನಿಗೆ ಎಲ್ಲಿಯೂ ಅನಗತ್ಯವಾಗಿ ರಿಸ್ಕ್ ಕೊಡದ ರೀತಿ ರಕ್ಕಿಯನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದಾರೆ, ಅದರಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ, ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಯುವ ನಟನ ಆಗಮನವಾಗಿದೆ,

ರಕ್ಕಿ (ರಕ್ಕಿ ಸುರೇಶ್) ಡಾನ್ ( ಬಿ, ಸುರೇಶ್) ಜೊತೆ ಕೆಲಸ ಮಾಡುವ ಹುಡುಗ.ತನಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು, ಪ್ರೀ ಇದ್ದಾಗ ಡ್ಯಾನ್ಸ್ ಮಾಡಿ ಹಣ ಸಂಪಾದನೆ ಮಾಡುವುದು ಕಾಯಕ. ಡಾನ್ ಮಗಳು ಸಿರಿ (ಪಲ್ಲವಿ ಮಂಜುನಾಥ್)ಗೆ ರಕ್ಕಿ ಕಂಡರೆ ಇನ್ನಿಲ್ಲದ ಆಸೆ ಅದಕ್ಕಾಗಿ ಆಕೆ ಅಪ್ಪನಿಗೆ ಸುಳ್ಳುಹೇಳಿ ರಕ್ಕಿಯನ್ನು ತನ್ನ ಬಳಿಗೆ ಕರೆಸಿಕೊಳ್ಳುತ್ತಾಳೆ.

ಅನಿರೀಕ್ಷಿತವಾಗಿ ಸಿಕ್ಕ ಸುಪಾರಿಯನ್ನು ನಂಬಿಕೆಯ ಶಿಷ್ಯ ರಕ್ಕಿಗೆ ವಹಿಸುವ ಡಾನ್‍ಗೆ ವಹಿಸುತ್ತಾರೆ, ಅದಕ್ಕೆ ಪ್ರಕಾಶ್ (ಸಂಪತ್ ಮೈತ್ರೈಯಾ) ಜೊತೆಯಾಗುತ್ತಾರೆ, ಗುರಿ ಬೆನ್ನಟ್ಟಿ ಸಾಗುವಾಗ ಪ್ರೀತಿಸಿ ಮೋಸ ಮಾಡಿದ ಚಾಂದಿನಿ (ಆಶಿಕಾ ಸೋಮಶೇಖರ್) ಅಚಾನಕ್ ಆಗಿ ಕಂಡು ದಂಗಾತ್ತಾನೆ, ಅಷ್ಟಕ್ಕೂ ರಕ್ಕಿ ಹ್ಯಾಗ್ಯಾಕೆ ಮಾಡಿದ, ಡಾನ್ ಕೊಟ್ಟ ಗುರಿಯನ್ನು ಈಡೇರಿಸುತ್ತಾನಾ, ಇಲ್ಲಾ ಚಾಂದಿನಿ ಮಾಡಿದ್ದಾರು ಏನು ಎನ್ನುವುದು ಕುತೂಹಲದ ಸಂಗತಿ.

ನಿರ್ದೇಶಕ ವೆಂಕಟ್ ಭಾರಧ್ವಜ್ ಅವರು ಕ್ರೈಮ್ ಹಿನ್ನೆಲೆಯ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದರೂ ಎಲ್ಲಿಯೂ ರಕ್ತಪಾತ ತೋರಿಸಿದೆ ಜಾಣ್ಮೆ ಮತ್ತು ನಾಜೂಕಾಗಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಮನೆ ಮಂದಿಯಲ್ಲಾ ಕುಳಿತು ನೋಡಬಹುದಾದ ಆಕ್ಷನ್, ಥ್ರಿಲ್ಲರ್ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ.

ಯುವ ನಟ ರಕ್ಕಿ ಸುರೇಶ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾನ್ವಿತ ನಟ, ಆಕ್ಷನ್ ಸನ್ನಿವೇಶಗಳು, ಡ್ಯಾನ್ಸ್, ಪೈmನಲ್ಲಿ ಗಮನ ಸೆಳೆದಿದ್ದಾರೆ. ಇನ್ನೊಂದಿಷ್ಟು ನಟನೆಯಲ್ಲಿ ತರಬೇತಿ ಪಡದರೆ ಒಳ್ಳೆಯದು. ಜೊತೆಗ ಸಂಭಾಷಣೆಯ ಹೇಳುವ ವಿಧಾನ ಬದಲಾಯಿಸಿಕೊಂಡರೆ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಆಕ್ಷನ್ ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ.

ನಾಯಕಿಯರ ಪೈಕಿ ಆಶಿಕಾ ಸೋಮಶೇಖರ್ ಎರಡು ಶೇಡ್‍ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಪಲ್ಲವಿ ಮಂಜುನಾಥ್ ಸಿಕ್ಕ ಅವಕಾಶ ಸುದುಪಯೋಗ ಪಡಿಸಿಕೊಂಡಿದ್ದಾರೆ

ಇನ್ನು ಹಿರಿಯ ಕಲಾವಿದರಾದ ಬಿ,ಸುರೇಶ್, ಸಂಪತ್ ಮೈತ್ರೇಯಾ, ಬಲರಾಜ ವಾಡಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಉಳಿದಂತೆ ಗೋವಿಂದೇ ಗೌಡ, ಹರಿಣಿ, ರೇಖಾ, ರಮೇಶ್ ಪಂಡಿತ್ ಹರ್ಷ್ ಅರ್ಜುನ್ ಮತ್ತಿತರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸ ನಟ ಎನ್ನುವುದನ್ನು ಪಕ್ಕಟ್ಟರೆ ಚಿತ್ರದ ಹಾಡುಗಳು, ಪೈಟು, ಆಕ್ಷನ್ ಸನ್ನಿವೇಶಗಳು ಇಷ್ಟಪಡುವ ಮಂದಿಗೆ ಚಿತ್ರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ

ಲೋಕಿ ತವಸ್ಯ ಸಂಗೀತ, ಐಸಾಕ್ ಪ್ರಭಾಕರ್ ಛಾಯಾಗ್ರಾಹಣ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin