Deadly Killer Movie Review: "Deadly Killer" is an action-packed movie that revolves around the hustle and bustle of the city.

Deadly Killer Movie Review: ಹೊಡಿ, ಬಡಿ ಸುತ್ತ ಸಾಗುವ ಆಕ್ಷನ್ ಪ್ರಧಾನ ಚಿತ್ರ “ಡೆಡ್ಲಿ ಕಿಲ್ಲರ್” - CineNewsKannada.com

Deadly Killer Movie Review: ಹೊಡಿ, ಬಡಿ ಸುತ್ತ ಸಾಗುವ ಆಕ್ಷನ್ ಪ್ರಧಾನ ಚಿತ್ರ “ಡೆಡ್ಲಿ ಕಿಲ್ಲರ್”

ಚಿತ್ರ: ಡೆಡ್ಲಿ ಕಿಲ್ಲರ್
ನಿರ್ದೇಶನ : ಥ್ರಿಲ್ಲರ್ ಮಂಜು
ತಾರಾಗಣ: ಅಭಯ್ ವೀರ್, ನಿವೀಕ್ಷಾ, ಲೋಕೇಂದ್ರ ಸೂರ್ಯ, sಸುನೀಲ್ ಬಾಲ್ದರ್,
ರೇಟಿಂಗ್ :*** 3/5

ಹೊಡಿ ಬಡಿ, ಆಕ್ಷನ್, ಥ್ರಿಲ್ಲರ್ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಿರ್ದೇಶಕನಾಗಿಯೂ ಸೈ ಎನಿಸಿಕೊಂಡವರು, ಅವರ ನಿರ್ದೇಶನದ ಪೊಲೀಸ್ ಸ್ಟೋರಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಜೊತೆಗೆ ಒಂದಷ್ಟು ಚಿತ್ರಗಳಿಗೂ ಸ್ಪೂರ್ತಿಯಾಗಿದೆ.

ಆಕ್ಷನ್, ಥ್ರಿಲರ್ ಅಂಶಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಥ್ರಿಲ್ಲರ್ ಮಂಜು ಪವರ್‍ಫುಲ್ ಆಕ್ಷನ್ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ. ಚಿತ್ರದ ಪ್ರತಿ ಫ್ರೇಮ್‍ನಲ್ಲಿ ಆಕ್ಷನ್ ಮಯವಾಗಿದೆ, ಅದಕ್ಕೆ ಕಾರಣ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ತಾವೇ ಸಿನಿಮಾ ನಿರ್ದೇಶನ ಮಾಡಿರುವ ಹಿನ್ನೆಲೆಯಲ್ಲಿ ಪವರ್ ಪುಲ್ ಆಕ್ಷನ್ ಸಂಯೋಜಿಸಿದ್ದಾರೆ,

ಯುವ ನಾಯಕ ನಟ ಅಭಯ್ ವೀರ್, ಎರಡು ಶೇಡ್‍ನಲ್ಲಿ ಗಮನ ಸೆಳೆದಿದ್ದಾರೆ ಮುಗ್ದೆಯಿಂದಲೇ ಮೃಗದಂತೆ ವರ್ತಿಸುವ ರೀತಿ ಮೆಚ್ಚುಗೆ ಪಡೆದಿದ್ದಾರೆ. ಚಿತ್ರರಂಗದಲ್ಲಿ ಉತ್ತಮ ನಟನಾಗುವ ಎಲ್ಲಾ ಭರವಸೆ ಮೂಡಿಸಿದ್ದಾರೆ

ಕ್ರಿಮಿನಲ್ ಗ್ಯಾಂಗ್ ಡಾನ್ ( ಥ್ರಿಲ್ಲರ್ ಮಂಜು) ಮತ್ತವರ ತಂಡವನ್ನು ರಾಜ್ಯದಿಂದ ತಪ್ಪಿಸಿಕೊಂಡು ಒಡಿಶಾದ ಕಾಡಿನಲ್ಲಿ ಬಚ್ಚಿಟ್ಟುಕೊಂಡಿರುತ್ತದೆ, ದಕ್ಷತೆಗೆ ಹೆಸರಾದ ಕರ್ನಾಟಕ ಪೊಲೀಸರು ಅವರನ್ನು ಪತ್ತೆ ಹಚ್ಚಿ ಕರ್ನಾಟಕಕ್ಕೆ ಕರೆ ತರುವ ಮಾರ್ಗಮದ್ಯೆ ತೆಲಂಗಾಣದ ಕಾಡಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಅಲ್ಲಿಂದ ಜೈ (ಅಭಯ್ ವೀರ್) ಇರುವ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೆಂಡತಿ ಕಾವೇರಿ ( ನಿವಿಷ್ಕಾ) ಜೊತೆ ಇಬ್ಬರೇ ಮನೆಯಲ್ಲಿದ್ದವರು.

ಡೆಡ್ಲಿ ಕಿಲ್ಲರ್ ತಂಡ ಮನೆ ಹೊಕ್ಕ ನಂತರ ಅವರ ರಕ್ಷಣೆಗಾಗಿ ಈ ದಂಪತಿಯನ್ನು ಗುರಾಣಿಯನ್ನಾಗಿ ಬಳಿಸಿಕೊಳ್ತಾರೆ. ಹೊರಗಡೆ ಪೊಲೀಸರ ಭಯ, ಹೀಗಾಗಿ ಸುರಕ್ಷಿತ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಜೈ ಮತ್ತು ಕಾವೇರಿ ಮನೆಯಲ್ಲಿ ಇವರ ಜೊತೆ ಏನೆಲ್ಲಾ ಅನುಭವಿಸುತ್ತಾರೆ, ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಕುತೂಹಲದ ಸಂಗತಿ.

ನಿರ್ದೇಶಕ ಥ್ರಿಲ್ಲರ್ ಮಂಜು, ಸ್ವತಃ ಸಾಹಸ ನಿರ್ದೇಶಕರಾಗಿರುವ ಹಿನ್ನೆಲೆಯಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳನ್ನು ಜನರ ಮುಂದಿಟ್ಟಿದ್ದಾರೆ. ಆದರೆ ಇಡೀ ಚಿತ್ರದಲ್ಲಿ ಅರಚಾಟವೇ ಹೆಚ್ಚಾಗಿದೆ, ಜೊತೆಗೆ ಶಬ್ದ ಪ್ರೇಕ್ಷಕರನ್ನು ಹೊಡಿ ಬಡಿ ಮೂಡಿನಲ್ಲಿರಿಸಿದೆ, ಪೊಲೀಸರು ಮತ್ತು ಕ್ರಿಮಿನಲ್‍ಗಳ ಸುತ್ತ ಇಡೀ ಸಿನಿಮಾ ಸಾಗಿದೆ.

ನಾಯಕ ಅಭಯ್ ವೀರ್ ಒಂದೇ ಚಿತ್ರದಲ್ಲಿ ಎರಡು ಶೇಡ್‍ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,ಒಂದು ಮುಗ್ದ ಮತ್ತೊಂದು ಭರ್ಜರಿ ಆಕ್ಷನ್ ಹೀರೋ ಆಗಿ ಮುಂಚಿದ್ದಾರೆ, ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಕಲಾವಿದನಾಗುವುದರಲ್ಲಿ ಅನುಮಾನವಿಲ್ಲ

ನಾಯಕಿ ನಿವಿಷ್ಕಾ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಉಳಿದಂತೆ ಥ್ರಿಲ್ಲರ್ ಮಂಜು. ಲೋಕೇಂದ್ರ ಸೂರ್ಯ, ಸುನೀಲ್ ಸೇರಿದಂತೆ ಹಲವು ಕಲಾವಿದರು ಪಾತ್ರಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಸಿನಿಮಾ ನೋಡುವ ಮಂದಿಗೆ ಭರ್ಜರಿ ಊಟ ಉಣಬಡಿಸಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin