ನಹೇಶ್ ಪೊಳ್ ಹೊಸ ಪ್ರಯತ್ನ “ಜಗತ್ತನ್ನು ಉಳಿಸಲು ಪ್ರಯತ್ನಿಸುತ್ತಿದೆ”…
ಮೈಸೂರು ಮೂಲದ ಆಟೋಬೊಬೈಲ್ ಇಂಜಿನಿಯರ್ ನಹೇಶ್ ಪೆÇಳ್ ಸಮಾಜಕ್ಕೆ ಉಪಯೋಗವಾಗುವ ‘Trying to Save the World’ ಹೆಸರಿನ ಮೂರನೇ ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡುವ ಜತೆಗೆ ರ್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ಬ್ಯಾನರ್ದಲ್ಲಿ ಬಂಡವಾಳ ಹೂಡುತ್ತಿದ್ದಾರೆ.

ಕೆಆರ್ ಪುರಂನ ಎಸ್.ಇ.ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಸಿನಿಮಾದ ಪರಿಕಲ್ಪನೆ ಸಾರುವ ಮಾದರಿಯನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿ ವಿವರಣೆ ನೀಡಿದರು.
ಇದಕ್ಕೆ ಬೆನ್ನಲುಬಾಗಿ ಕಾಲೇಜಿನ ಜಂಟಿ ಕಾರ್ಯದರ್ಶಿ ಕೆ.ಅನುಪಮ ಮತ್ತು ಹೆಚ್ಓಡಿ ಪಿ.ಆರ್.ಕೃಷ್ಣಕುಮಾರ್ ನಿರ್ದೇಶಕರ ಶ್ರಮಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ನೆಹೇಶ್ ಪೊಳ್, ಪ್ರಸಕ್ತ ಸತ್ಯಯುಗದಲ್ಲಿ ರಸ್ತೆ ಎನ್ನುವ ಪರಿಕಲ್ಪನೆಯಲ್ಲಿ ಇಂಜಿನಿಯರ್ಗಳಿಂದ ಸ್ಪರ್ಧೆ ಏರ್ಪಾಟು ಮಾಡಲಾಗಿ, ಇದು ಸಿನಿಮಾದ ಒಂದು ಭಾಗವಾಗಿದೆ. ಆರಂಭದಲ್ಲಿ ಏನಾದರೂ ಬರೆಯಲು ಶುರು ಮಾಡಿದಾಗ, ಮುಂದೆ ಅದು ನಿಜವಾಗುತ್ತಿತ್ತು. ಅಂತಹ ಸಂಗತಿಗಳು ರೀಲ್ಸ್ದಲ್ಲಿ ಬರುತ್ತಿರುವಂತೆ ರಿಯಲ್ದಲ್ಲಿ ಆಗುತ್ತಿತ್ತು. ಇಂದಿಗೆ 2217 ದಿನದ ಹಿಂದೆ ಚಿತ್ರ ಪ್ರಾರಂಭ ಮಾಡಲಾಗಿ, ಅಂತಹುದೇ ಪಾತ್ರ ನಿಭಾಯಿಸುತ್ತಿದ್ದೇನೆ. ಅಂದರೆ ಸ್ಪರ್ಧೆಯಲ್ಲಿ ನಾನೊಬ್ಬ ಇಂಜಿನಿಯರಿಂಗ್ ಹುಡುಗನಾಗಿ ಅಭಿನಯಿಸುತ್ತಿದ್ದೇನೆ. ಇಂದು ರಸ್ತೆಗಳು ಹದಗೆಟ್ಟು, ಪೆಟ್ರೋಲ್, ಡೀಸಲ್, ತೆರಿಗೆ, ಟೋಲ್ ಶುಲ್ಕ ಇತರೆ ಅಂತ ಜನರಿಂದ ಹಣ ವಸೂಲು ಮಾಡುತ್ತಿದ್ದಾರೆ ಎಂದರು

ಭಾರತದಲ್ಲಿ ಅತಿ ಹೆಚ್ಚು ರಸ್ತೆ ತೆರಿಗೆ ಶುಲ್ಕ ವಿದಿಸಿರುವುದು ಕರ್ನಾಟಕ ಎಂದು ಹೇಳಲು ಬೇಸರವಾಗುತ್ತದೆ. ಇದನ್ನು ಅರಿತು ಸಮಾಜಕ್ಕೆ ಒಳ್ಳೆಯ ರಸ್ತೆ ಕೊಡುವ ಪ್ರಯತ್ನ ಏಕೆ ಮಾಡಬಾರದು ಹಾಗೂ ಇದರಿಂದ ಜನರಿಗೆ ಯಾವ ರೀತಿ ಹಣ ವಾಪಸ್ಸು ಬರುತ್ತದೆ ಎಂಬ ಉದ್ದೇಶವನ್ನು ಚಿತ್ರದ ಮೂಲಕ ತೋರಿಸಿದರೆ ಎಲ್ಲರಿಗೂ ಬೇಗ ಅರ್ಥವಾಗುತ್ತದೆ. ನಾವು ಕಲಿಯುಗದಲ್ಲಿ ಇದ್ದೇವೆ. ಸತ್ಯಯುಗದಲ್ಲಿ ಹೋಗಬೇಕು. ನಾವೇ ರಸ್ತೆ ಸಿದ್ದಪಡಿಸಿ ಅದನ್ನು ಸಮಾಜಕ್ಕೆ ನೀಡದರೆ ಉಳಿತಾಯವಾಗುತ್ತದೆ. ಅದು ಹೇಗೆ ಎಂಬುದನ್ನು ಮಾಡಲ್ ಸಿದ್ದಪಡಿಸಿ, ಮಾಧ್ಯಮದ ಸಮ್ಮುಖದಲ್ಲಿ ಪ್ರದರ್ಶಿಸಿದ್ದೇನೆ. ಇದು ಒಬ್ಬರಿಂದ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಪ್ರತಿಭೆ, ಆಸಕ್ತಿ ಇರುವಂತಹ ಇಂಜಿನಿಯರ್ಗಳನ್ನು ಆಯ್ಕೆ ಮಾಡುವ ಸಲುವಾಗಿ ಸ್ಪರ್ಧೆ ನಡೆಸಲಾಗುತ್ತಿದೆ. ಇದು ಸಿನಿಮಾದ ಕ್ಲೈಮಾಕ್ಸ್ದಲ್ಲಿ ಬರುತ್ತದೆಂದು ನಹೇಶ್ ಪೆÇಳ್ ಮಾಹಿತಿ ನೀಡಿದರು

