"Sesha 2016" movie is all set to release in Kannada, Malayalam

ಕನ್ನಡ, ಮಲೆಯಾಳಂನಲ್ಲಿ ತೆರೆಗೆ ಬರಲು ಸಜ್ಜಾದ “ಶೇಷ 2016 ” ಚಿತ್ರ - CineNewsKannada.com

ಕನ್ನಡ, ಮಲೆಯಾಳಂನಲ್ಲಿ ತೆರೆಗೆ ಬರಲು ಸಜ್ಜಾದ “ಶೇಷ 2016 ” ಚಿತ್ರ

ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತೆ ಕಥೆಯನ್ನ “ಶೇಷ 2016” ಚಿತ್ರದ ಮೂಲಕ ತೆರೆಗೆ ತರಲಾಗುತ್ತಿದೆ, ಕನ್ನಡ ಮತ್ತು ಮಲೆಯಾಳಂ ಭಾಷೆಯಲ್ಲಿ ಚಿತ್ರ ರೆಡಿಯಾಗಿದ್ದು ಬಿಡುಗಡೆಗೆ ಸಜ್ಜಾಗಿದೆ.

ಮಹಿಳಾ ನಿರ್ಮಾಪಕಿರಾದ ಮಂಜುವಾಣಿ. ವಿ. ಎಸ್ ಹಾಗೂ ವೀಣಾ. ಎಸ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಪ್ರದೀಪ್ ಅರಸೀಕೆರೆ ಆಕ್ಷನ್ ಕಟ್ ಹೇಳಿದ್ದು ಎರಡು ಭಾಷೆಯಲ್ಲಿ ಚಿತ್ರ ಮೂಡಿಬಂದಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಮಲೆಯಾಂ ನಟರು ಇದ್ದಾರೆ. ಜೊತೆಗೆ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿರುವುದು ಚಿತ್ರ ಹೆಗ್ಗಳಿಕೆ

ಮಲಯಾಳಂನಲ್ಲಿ ಚಿತ್ರದ ಟೀಸರ್ ಬಿಡುಗಡೆಗೊಂಡು ಉತ್ತಮ ಪ್ರಶಂಸೆ ಪಡೆದಿದೆ, ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೂ ಟೀಸರ್ ಬಿಡುಗಡೆ ಮಾಡಿದ್ದು ನಟ ವಸಿಷ್ಟ ಸಿಂಹ ಹಿನ್ನೆಲೆ ಧ್ವನಿ ಕನ್ನಡದ ಟೀಸರ್ ಬಹಳ ವಿಶೇಷವಾಗಿದೆ. ಚಿತ್ರದ ಬಗೆಗಿನ ಕುತೂಹಲ ಹೆಚ್ಚು ಮಾಡಿದೆ

ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡಿ ಈ ಹಿಂದೆ ಕೆ.ಇ.ಬಿ ಯಲ್ಲಿ ಕೆಲಸ ಮಾಡುತ್ತಿದ್ದೆ , ಸಿನಿಮಾ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಚಿತ್ರ ನಿರ್ದೇಶನ ಮಾಡಿದ್ದೇನೆ. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿದ್ದೇನೆ. ನಿರ್ದೇಶನ ವಿಭಾಗದಲ್ಲಿ ಕನ್ನಡ ಹಾಗೂ ಮಲಯಾಳಂ ಭಾಷೆಯ ತಂಡಗಳನ್ನು ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟ ಚಟುವಟಿಕೆಗಳ ಹಿನ್ನೆಲೆಯಲ್ಲಿ ಚಿತ್ರದ ಕಥಾವಸ್ತು ಸಾಗಲಿದೆ ಎಂದರು

ಎಲ್ಲದಕ್ಕೂ ಒಂದೊಂದು ಪರ್ಯಾಯ ವ್ಯವಸ್ಥೆ ಇದ್ದೆ ಇರುತ್ತದೆ. ಸರ್ಕಾರಿ ಆಸ್ಪತ್ರೆ ಇಲ್ಲದಿದ್ದರೆ ಖಾಸಗೀ ಆಸ್ಪತ್ರೆ, ಸರ್ಕಾರಿ ಶಾಲೆ ಇಲ್ಲದಿದ್ದರೆ ಖಾಸಗಿ ಶಾಲೆ ಹೀಗೆ ಪರ್ಯಾಯ ವ್ಯವಸ್ಥೆ ಇದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಬದಲಿ ವ್ಯವಸ್ಥೆ ಇಲ್ಲ. ಇಂಥ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏನೆಲ್ಲಾ ಕಷ್ಟ , ಕಾರ್ಪಣ್ಯಗಳು ಎದುರಾಗುತ್ತದೆ. ಅದನ್ನ ಹೇಗೆ ನಿಭಾಯಿಸುತ್ತಾರೆ ಇದಕ್ಕೆ ಪರಿಹಾರ ಇದೆಯೇ ಇಲ್ಲವೇ.. ಎನ್ನು ಒಂದಷ್ಟು ವಿಚಾರಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ರಾತ್ರಿ ಚಿತ್ರೀಕರಣದ ಜೊತೆ ಮಳೆಯಲ್ಲಿ ಹೆಚ್ಚು ಚಿತ್ರೀಕರಣ ನಡೆದಿದೆ. ಹಗಲು ರಾತ್ರಿ ಎನ್ನದೆ ಸುಮಾರು 35 ದಿನ ಚಿತ್ರೀಕರಣ ಮಾಡಿದ್ದು , ಸಮಾಜದ ವ್ಯವಸ್ಥೆ ಹಾಗೂ ಜನರ ಕಿಚ್ಚಿನ ಬಗ್ಗೆ ಮಾಡಿರುವ ಈ ಚಿತ್ರ ಈಗ ಸೆನ್ಸಾರ್ ಕೆಲಸವನ್ನು ಮುಗಿಸಿಕೊಂಡು ಬಿಡುಗಡೆ ಹಂತ ತಲುಪಿದೆ. ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತುಂಬಾ ಸಹಕಾರ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ತೆರೆಗೆ ತರುವ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ನಿರ್ಮಾಪಕಿ ಮಂಜುವಾಣಿ .ವಿ. ಎಸ್. ಮಾತನಾಡಿ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ನಾವು ಈ ಸಿನಿಮಾ ಮಾಡಿದ್ದೇವೆ. ಕುಟುಂಬದಿಂದಲೂ ಸಹಕಾರ ದೊರೆಯಿತು. ಎರಡು ಭಾಷೆಗಳಲ್ಲಿ ನಾವು ಈ ಚಿತ್ರ ಮಾಡಿದ್ದು , ಬಜೆಟ್ ಲೆಕ್ಕ ಹಾಕಿಲ್ಲ , ಚಿತ್ರೀಕರಣಕ್ಕೆ ಏನು ಬೇಕು ಅದನ್ನು ಒದಗಿಸಿದ್ದೇವೆ. ಚಿತ್ರತಂಡದ ಕಲಾವಿದರು, ಛಾಯಾಗ್ರಹಣ , ಸಂಗೀತ , ಸಂಕಲನ ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇನ್ನು ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಮತ್ತೋರ್ವ ನಿರ್ಮಾಪಕಿ ವೀಣಾ .ಎಸ್ ಮಾತನಾಡಿ ಸಮಾಜಕ್ಕೆ ಒಂದು ಉತ್ತಮ ಚಿತ್ರ ಮಾಡಿದ್ದೇವೆ. ಚಿತ್ರವನ್ನ ನೋಡಿ ನಮ್ಮನ್ನು ಹರಸಿ ಎಂದು ಕೇಳಿಕೊಂಡರು.

ಪ್ರಮುಖ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಲಯಾಳಂನ ಪ್ರತಿಭೆ ಜಾನ್ ಕೈಪ್ಪಲ್ಲಿ 15 ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮೊದಲ ಕನ್ನಡ ಚಿತ್ರ. ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕ , ನಿರ್ಮಾಪಕರುಗಳಿಗೆ ಧನ್ಯವಾದ ತಿಳಿಸುತ್ತೇನೆ. ತಂದೆಯವರು ಕೂಡ ರಾಜಕುಮಾರ್ gಅಭಿಮಾನಿ , ಹಾಗೆಯೇ ಕೂಡ ಬಾಲ್ಯದಿಂದ ಕನ್ನಡ ಸಿನಿಮಾಗಳ ಬಗ್ಗೆ ತಿಳಿದುಕೊಂಡಿದ್ದೆ. ಪುನೀತ್ ರಾಜಕುಮಾರ್ ಬಗ್ಗೆ ಅಪಾರ ಗೌರವ. ಅವರ ಸ್ಮಾರಕಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡು ನಾನು ಬಂದೆ , ಅಪ್ಪು ಅಣ್ಣ ಸರಳ ವ್ಯಕ್ತಿತ್ವ , ಸ್ನೇಹಜೀವಿ ಅವರು ಸದಾ ನಮ್ಮ ಜೊತೆ ಇದ್ದೇ ಇರುತ್ತಾರೆ. ಕನ್ನಡದ ಮೊದಲ ಚಿತ್ರವಾದರೂ ಎಲ್ಲಿಯೂ ಬೇಸರವಾಗದಂತೆ ಇಡೀ ತಂಡ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಎರಡು ಭಾಷೆಯ ಚಿತ್ರೀಕರಣ ಸಮಯ ಮರೆಯುವುದಕ್ಕೆ ಕಷ್ಟ , ಸಿನಿಮಾ ಉತ್ತಮವಾಗಿ ಬಂದಿದೆ ಎಂದರು

ಕನ್ನಡದ ನಟ ಪ್ರಮೋದ್ ಶೆಟ್ಟಿ ಮಾತನಾಡಿ ನಿರ್ದೇಶಕರ ವಿಷನ್ ಚಿತ್ರದಲ್ಲಿ ಕಾಣುತ್ತೆ. ಮಲಯಾಳಂ ಭಾಷೆ ನನಗೆ ಬರೆದಿದ್ದರೂ, ಎರಡು ಭಾಷೆಯಲ್ಲಿ ಅಭಿನಯಿಸಿದ ಸಂತೋಷ ನನಗೆ ಇದೆ ಎಂದರು

ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಮಾತನಾಡಿ ಚಿತ್ರದಲ್ಲಿ ಯಾವುದೇ ಹಾಡಿಲ್ಲ , ಆದರೆ ಹಿನ್ನೆಲೆ ಸಂಗೀತ ಬಹಳ ಪ್ರಾಮುಖ್ಯತೆ ವಹಿಸುತ್ತಿದೆ. ನಿರ್ದೇಶಕರ ಮನಸಿನಲ್ಲಿ ಇರುವ ಗಾಢವಾದ ವಿಚಾರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಮಾಡಿದ್ದು , ಆರಂಭದಲ್ಲಿ ಕನ್ನಡ ಮಾತ್ರ ಅಂದುಕೊಂಡಿದ್ದೆ . ಚಿತ್ರೀಕರಣ ಮಾಡಿಕೊಂಡು ಎರಡು ಭಾಷೆಯಲ್ಲಿ ಮಾಡಿದ್ದೇನೆ ಎಂದಾಗ ಆಶ್ಚರ್ಯವಾಯಿತು.

ಛಾಯಾಗ್ರಹಕ ಆರ್. ಎಸ್. ಆನಂದ ಕುಮಾರ್ ಚಿತ್ರೀಕರಣದ ಅನುಭವ ಹಂಚಿಕೊಂಡರು. ಬರಹಗಾರ ರಾಘವೇಂದ್ರ ಮಯ್ಯ . ಕಾರ್ಯಕಾರಿ ನಿರ್ಮಾಪಕ ರಾಣಿ ಮಂಜುನಾಥ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಹಿರಿಯ ನಟ ಸಿದ್ಲಿಂಗು ಶ್ರೀಧರ್ , ನಟಿ ಅರ್ಚನಾ ಕೊಟ್ಟಿಗೆ , ಸಾಯಿ ಭೈರವ ಕೂಡ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin