ಜೂನಿಯರ್ ಟೋಸ್ ರಾಜಾಜಿನಗರನಲ್ಲಿ ಶುಭಾರಂಭ
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಬೆಂಗಳೂರಿನ ರಾಜಾಜಿನಗರನಲ್ಲಿ ಶುಭಾರಂಭಗೊಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಶಿಕ್ಷಣದ ಕನಸಿಗೆ ಆಂಕರ್ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್ ಕೊಟ್ಟರು.

ಜೂನಿಯರ್ ಟೋಸ್ ಬ್ರ್ಯಾಂಚ್ ಉದ್ಘಾಟನೆ ಬಳಿಕ ಆಂಕರ್ ಅನುಶ್ರೀ ಮಾತನಾಡಿ, ಜೂನಿಯರ್ ಟೋಸ್ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ದೊಡ್ಡ ಕನಸು. ಅಪ್ಪು ಸರ್ಗೆ ಕ್ವಾಲಿಟಿ ಎಜುಕೇಶನ್ ಕೊಡಬೇಕು ಬಹಳ ಇಷ್ಟವಿತ್ತು. ಪ್ರತಿಭೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲಿಯೂ ಇರುತ್ತದೆ. ಸರಿಯಾದ ರೀತಿಯಲ್ಲಿ ಕಂಡು ಹಿಡಿದು, ಅದಕ್ಕೊಂದು ಮಾರ್ಗ ಕಂಡುಹಿಡಿದು, ವೇದಿಕೆ ಕಲ್ಪಿಸಿಕೊಡಲು ಜೂನಿಯರ್ ಟೋಸ್ ಎಂಬ ಹೊಸದೊಂದು ಸಂಸ್ಥೆ ಶುರುವಾಗಿದೆ. ಕಿರಣ್ ಹಾಗೂ ದೀಪ್ತಿ ನೇತೃತ್ವದಲ್ಲಿ ನಡೆಯುತ್ತಿದ್ದೆ ಇಲ್ಲಿ ಕಲಿಯುವ ಮಗು ಅಪ್ಪು ಸರ್ ಅವರಂತಹ ಗುಣಗಳನ್ನು ಕಲಿತು. ದೊಡ್ಡ ಹೆಸರು ಮಾಡಲಿ ಎಂದು ಹಾರೈಸಿದರು.
ಅಶ್ವಿನಿ ಜೊತೆ ನಾಯಕತ್ವ ತರಬೇತಿದಾರರು ಸ್ಪೂರ್ತಿ ವಿಶ್ವಾಸ್, ಸುನಿತಾ ಗೌಡ ಮತ್ತು ಶೃತಿ ಕಿರಣ್ ಕೈಜೋಡಿಸಿ ಶುರು ಮಾಡಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.

ಅಶ್ವಿನಿ ಪುನೀತ್ ರಾಜ್ಕುಮಾರ್, ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶೃತಿ ಕಿರಣ್ ಸಂಸ್ಥಾಪಿಸಿರುವ ಈ ಶಾಲೆಯೂ ಡಾ. ಬಿಂದು ರಾಣಾ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತಿದೆ.
ಜೂನಿಯರ್ ಟೋಸ್ ಕಲಿಕಾ ಕೇಂದ್ರ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮ ಇರಲಿವೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ, ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುವ ಸ್ಥಳಗಳಾಗಿ ರೂಪುಗೊಳ್ಳುತ್ತಿವೆ.

