"Madeva" movie song `Edeli Thangali' released: Cinema release on June 6th

“ಮಾದೇವ” ಚಿತ್ರದ `ಎದೇಲಿ ತಂಗಾಳಿ’ ಚಿತ್ರದ ಹಾಡು ಬಿಡುಗಡೆ : ಜೂನ್ 6ಕ್ಕೆ ಸಿನಿಮಾ ತೆರೆಗೆ - CineNewsKannada.com

“ಮಾದೇವ” ಚಿತ್ರದ `ಎದೇಲಿ ತಂಗಾಳಿ’ ಚಿತ್ರದ ಹಾಡು ಬಿಡುಗಡೆ : ಜೂನ್ 6ಕ್ಕೆ ಸಿನಿಮಾ ತೆರೆಗೆ

ಟೈಗರ್ ವಿನೋದ್ ಪ್ರಭಾಕರ್ – ಸೋನಾಲ್ ಮೊಂತೆರೊ ಅಭಿನಯದ ಮಾದೇಶ ಚಿತ್ರದ ‘ಎದೇಲಿ ತಂಗಾಳಿ” ಚಿತ್ರದ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಚಿತ್ರ ಜೂನ್ 6 ರಂದು ತೆರೆಗೆ ಬರಲಿದೆ

ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ(ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮೊಂತೆರೊ ನಾಯಕ – ನಾಯಕಿಯಾಗಿ ನಟಿಸಿದ್ದಾರೆ.ಪ್ರದ್ಯೋತನ್ ಸಂಗೀತ ನೀಡಿರುವ “ಎದೇಲಿ ತಂಗಾಳಿ” ಎಂಬ ಹಾಡಿನ ಬಿಡುಗಡೆ ಹಾಗೂ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು.

ನಾಯಕ ವಿನೋದ್ ಪ್ರಭಾಕರ್ ಮಾತನಾಡಿ ಸಿನಿಮಾ ನನ್ನ ವೃತ್ತಿಜೀವನದಲ್ಲಿ ವಿಭಿನ್ನ ಸಿನಿಮಾ. ಬೇರೆ ಹೆಸರು ತಂದುಕೊಡುತ್ತದೆ. ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಏನಾದರೂ ಬೇರೆ ಭಾಷೆಗಳಿಗೆ ಹೋದರೆ, ಮೊದಲು ಹೋಗೋದು ಸಂಗೀತ ನಿರ್ದೇಶಕ ಪ್ರದ್ಯೋತ್ತನ್. ಅಷ್ಟು ಪ್ರತಿಭಾವಂತ ಚಿತ್ರಕ್ಕೆ ಜೀವ ಕೊಟ್ಟಿದ್ದಾರೆ. ಮಾಲಾಶ್ರೀ ಜೊತೆಗೆ ನನ್ನ ದೃಶ್ಯಗಳಿಲ್ಲ. ಆದರೆ, ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೊಂದು ಅದ್ಭುತವಾದ ಡೈಲಾಗ್ ಇದೆ. ಸೋನಾಲ್, ಶ್ರೀನಗರ ಕಿಟ್ಟಿ, ಶೃತಿ ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಇದೊಂದು ಒಳ್ಳೆಯ ಸಿನಿಮಾ ಆಗುತ್ತದೆ. ಜೂನ್ 06ರಂದು ಚಿತ್ರ ತೆರೆಕಾಣಲಿದೆ. ಎಲ್ಲರೂ ನೋಡಿ ಆಶೀರ್ವಾದ ಮಾಡಿ ಎಂದರು

ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಚಿತ್ರ ನೋಡಿ ಹೊರ ಬಂದ ಮೇಲೆ, ವಿನೋದ್ ಪ್ರಭಾಕರ್ ಜೊತೆಗೆ ಶ್ರುತಿ ಸಹ ಮನಸ್ಸಲ್ಲಿ ಉಳಿಯುತ್ತಾರೆ.ಪಾತ್ರ ಭಯ ಹುಟ್ಟಿಸುತ್ತೆ.ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬ ನಂಬಿಕೆ ಇದೆ. ನಮಗೆ ಒಳ್ಳೆಯ ಪಾತ್ರಧಾರಿಗಳು ಸಿಕ್ಕರು. ಅವರು ಅಭಿನಯಿಸುತ್ತಿದ್ದರೆ ಕರೆಕ್ಷನ್ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿನೋದ್ ಪ್ರಭಾಕರ್ ಮೊದಲ ಶಾಟ್‍ನಲ್ಲೇ ಅದ್ಭುತವಾದ ಅಭಿನಯ ನೀಡಿದರು. ಇದೊಂದು ಎಮೋಷನಲ್ ಜರ್ನಿ. ಚಿತ್ರ ನೋಡಿ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ನಾಯಕಿ ಸೋನಾಲ್ ಮೊಂತೆರೊ ಮಾತನಾಡಿ “ರಾಬರ್ಟ್” ಚಿತ್ರದ ನಂತರ ನಾನು ಹಾಗೂ ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಹಿರಿಯ ಕಲಾವಿದರ ಜೊತೆಗೆ ನಟಿಸಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು

ಹಿರಿಯ ನಟಿ ಶೃತಿ ಮಾತನಾಡಿ ಚಿತ್ರರಂಗಕ್ಕೆ ಬಂದು 35 ವರ್ಷಗಳಾಗಿವೆ. 130 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೂ ಆ ಸಿನಿಮಾಗಳಲ್ಲಿ ಸಿಕ್ಕ ತೃಪ್ತಿ, ಇದರಲ್ಲಿ ಜಾಸ್ತಿಯೇ ಸಿಕ್ಕಿದೆ.ತರಹದ ಪಾತ್ರಗಳಿಗೆ ನನ್ನನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದೇ ಸಂತೋಷ. ಕಲಾವಿದೆಯಾಗಿ ನಾನು ಗೆದ್ದೆ ಎಂದು ನನಗೆ ಅನಿಸುವುದೇ ಆಗ. ಏಕತಾನತೆಯ ಪಾತ್ರಗಳಿದ್ದರೆ ಕಲಿಕೆ ಸಾಧ್ಯವಿರುವುದಿಲ್ಲ. ಈ ತರಹದ ಪಾತ್ರ ಕೊಟ್ಟಾಗ ಮೊದಲು ನಿರ್ದೇಶಕರಿಗೆ ಸವಾಲಿರುತ್ತದೆ. ಅವರ ಧೈರ್ಯವನ್ನು ಮೆಚ್ಚಬೇಕು. ನಾಯಕಿಯಾಗಿದ್ದಾಗ ಈ ತರಹದ ವಿಭಿನ್ನ ಪಾತ್ರ ಮಾಡುವುದಕ್ಕೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಆ ಸವಾಲು ತೆಗೆದುಕೊಂಡೆ. ಅವರ ನಿರೀಕ್ಷೆಗೆ ತಕ್ಕಂತೆ ನಟಿಸಿದ್ದೀನಿ ಎಂದು ತಿಳಿಸಿದರು.

ನಿರ್ಮಾಪಕ ಆರ್ ಕೇಶವ್ ಮಾತನಾಡಿ ಚಿತ್ರ ಜೂನ್ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡಿ ಎಂದರು.

ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು. .

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin