ದಳಪತಿ ವಿಜಯ್ ಅಭಿನಯದ ” ಜನ ನಾಯಗನ್ ” ಮೊದಲ ಗ್ಲಿಂಪ್ಸ್ ಬಿಡುಗಡೆ: ಜನವರಿ 9 ಕ್ಕೆ ಚಿತ್ರ ತೆರೆಗೆ
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ಕಡೆಯ ಚಿತ್ರ ಎಂದು ಹೇಳಲಾಗುತ್ತಿರುವ ” ಜನ ನಾಯಗನ್” ಚಿತ್ರದ ಮುಂದಿನ ವರ್ಷ ಜನವರಿ 9 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ

ಹೆಮ್ಮೆಯ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಅದ್ದೂರಿ ವೆಚ್ಚದಲ್ಲಿ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ನಿರ್ಮಾಣ ಮಾಡುತ್ತಿದೆ. ನಟ ದಳಪತಿ ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಮೊದಲ ನೋಟ ಬಿಡುಗಡೆ ಮಾಡಿದ್ದು ವಿಶ್ವದಾದ್ಯಂತ ಇರುವ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ತಮಿಳು ಚಿತ್ರರಂಗ ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ದಳಪತಿ ವಿಜಯ್ ಬೆಂಬಲಿಗರು, ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು ಅದಕ್ಕೆ ಮತ್ತಷ್ಟು ಇಂಬು ನೀಡುವಂತೆ ” ಜನ ನಾಯಗನ್ ” ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿರುವುದು ನಟ ವಿಜಯ್ ಅಭಿಮಾನಿಗಳ ಕಾತುರ, ಕುತೂಹಲ ಹೆಚ್ಚುವಂತೆ ಮಾಡಿದೆ.

ಅದ್ದೂರಿ ನಿರ್ಮಾಣ, ಶ್ರೀಮಂತಿಕೆಗೆ ಹೆಸರು ವಾಸಿಯಾಗಿರುವ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ ಎನ್ ಎನ್ ಮತ್ತು ಅದರ ರುವಾರಿ ಕೆ ವೆಂಕಟ್ ನಾರಾಯಣ್ ” ಜನ ನಾಯಗನ್ ” ಚಿತ್ರಕ್ಕೆ ಯಾವುದೇ ಕೊರೆತೆ ಇಲ್ಲದಂತೆ ನಿರ್ಮಾಣ ಮಾಡುತ್ತಿದ್ದಾರೆ. ಇದು ತಮಿಳುನಾಡು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ನಟ ದಳಪತಿ ವಿಜಯ್ ಅವರ ಅಭಿಮಾನಿಗಳಲ್ಲಿ ಕುತೂಹಲ ,ನಿರೀಕ್ಷೆ ಬಾನೆತ್ತರದಲ್ಲಿ ಹಾರಾಡುವಂತೆ ಮಾಡಿದೆ.
ದಳಪತಿ ವಿಜಯ್ ಅವರ ಕೊನೆಯ ಚಿತ್ರ ಎಂದು ಹೇಳಿರಿವ ಹಿನ್ನೆಲೆಯಲ್ಲಿ ” ಜನ ನಾಯಗನ್” ಚಿತ್ರವನ್ನು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮೆರೆಸಲು ಅಭಿಮಾನಿಗಳು ಸಜ್ಜಾಗಿದ್ಸಾರೆ.ಹಲವು ತಲೆಮಾರುಗಳ ಪ್ರೇಕ್ಷಕರನ್ನು ಹೊಂದಿರುವ ಪರಂಪರೆಯನ್ನು ಗೌರವಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಚಿತ್ರದ ಪ್ರತಿಯೊಂದು ಸನ್ನಿವೇಶವನ್ನು ಶ್ರೀಮಂತಿಕೆಯೊಂದಿಗೆ ನಿರ್ಮಾಣ ಮಾಡುತ್ತಿದ್ದು ಸಿನಿಮಾವನ್ನು ತನ್ನಬಹೆಗಲ ಮೇಲೆ ಹೊತ್ತುಕೊಂಡ ವ್ಯಕ್ತಿಯನ್ನು ಆಚರಿಸುವ, ನೆನಪಿಸಿಕೊಳ್ಳುವ ಮತ್ತು ಕೊನೆಯ ಬಾರಿಗೆ ಎದ್ದು ನಿಲ್ಲುವ ಉದ್ದೇಶದಿಂದ ನಿರ್ಮಿಸಲಾಗಿದೆ
ಚಿತ್ರವನ್ನುಬ ಹೆಚ್. ವಿನೋದ್ ಬರೆದು ನಿರ್ದೇಶಿಸಿದ್ದಾರೆ, ಗಟ್ಟಿ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಸತ್ಯನ್ ಸೂರ್ಯರ್ ಛಾಯಾಗ್ರಹಣ, ಪ್ರದೀಪ್ ಇ. ರಾಘವ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ನಟ ದಳಪತಿ ವಿಜಯ್ ಅವರನ್ನು ಕಡೆಯ ಬಾರಿಗೆ ತೆರೆಯ ಮೇಲೆ ನೋಡಲು ಇಡೀ ವಿಜಯ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

