Pracāra ārambha Shooting of "Kamal Sridevi" movie completes: Promotion begins

“ಕಮಲ್ ಶ್ರೀದೇವಿ” ಚಿತ್ರದ ಚಿತ್ರೀಕರಣ ಮುಕ್ತಾಯ : ಪ್ರಚಾರ ಆರಂಭ - CineNewsKannada.com

“ಕಮಲ್ ಶ್ರೀದೇವಿ” ಚಿತ್ರದ ಚಿತ್ರೀಕರಣ ಮುಕ್ತಾಯ : ಪ್ರಚಾರ ಆರಂಭ

ಹ್ಯಾಪಿ ಬರ್ತ್ ಡೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ನಟ ಸಚಿನ್ ಚೆಲುವರಾಯಸ್ವಾಮಿ‌ ನಟನೆಯ ಮೂರನೇ ಚಿತ್ರ ” ಕಮಲ್‌ ಶ್ರೀದೇವಿ ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.

ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಿತ್ರತಂಡದಿಂದ ಚಾಲನೆ ನೀಡಿದ್ದು ಈ ವೇಳೆ ನಾಯಕ ನಟ ಸಚಿನ್ ಚಲುವರಾಯ ಸ್ವಾಮಿ ಹಾಗೂ ಅವರ ಪತ್ನಿ ಆಕಾಂಕ್ಷ ಪಟಮಕ್ಕಿ ಸಹ ನಿರ್ಮಾಪಕ ರಾಜವರ್ಧನ್ , ನಿರ್ದೇಶಕ,ಸುನೀಲ್ ಹಾಗೂ ಚಿತ್ರತಂಡ ಈ ವೇಳೆ ಹಾಜರಿದ್ದರು

ಕಮಲ್ ಶ್ರೀದೇವಿ ಚಿತ್ರಕ್ಕೆ ಎನ್ ಚಲುವರಾಯ ಸ್ವಾಮಿ ಅರ್ಪಿಸಿದ್ದು ಬಿ.ಕೆ ಧನಲಕ್ಷ್ಮೀ* ನಿರ್ಮಾಣ ಮಾಡಿದ್ದಾರೆ. ರಾಜವರ್ಧನ್ ಸಹ ನಿರ್ಮಾಣವಿದೆ.

63ದಿನಗಳ ಚಿತ್ರೀಕರಣ ಮುಗಿಸಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನು ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

ಟೈಟಲ್ ಜತೆ ಕ್ರಿಯೇಟೀವ್ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಿ ಸುದ್ದಿಯಾಗಿದ್ದ ಚಿತ್ರತಂಡ ಇದೀಗ ಚಿತ್ರೀಕರಣ ಮುಗಿಸಿ ನಾವು ರಿಲೀಸ್ಗೆ ರೆಡಿ ಅಂತಿದೆ.ಎಲ್ಲವೂ ನಾವಂದುಕೊಂಡಂತೆ ಆಗಿದೆ.. ಆಗಸ್ಟ್ ಸೆಪ್ಟೆಂಬರ್ ವೇಳೆಗೆ ಪ್ರೇಕ್ಷಕರೆದುರಿಗೆ ಬರಲಿದ್ದೇವೆ.. ಇಲ್ಲಿಂದ ಒಂದೊಂದಾಗಿ ಸಿನಿಮಾದ ವಿಶೇಷತೆಗಳನ್ನ ಮಧ್ಯಮದೊಂದಿಗೆ ಹಂಚಿಕೊಂಡು ಬರಲಿದ್ದೇವೆ ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin