ರಿಯಲ್ ಸ್ಟಾರ್ ಉಪೇಂದ್ರ ಈಗ “ನೆಕ್ಸ್ಟ್ ಲೆವೆಲ್” : ಕುತೂಹಲ ಹೆಚ್ಚಳ
ಕನ್ನಡ ಚಿತ್ರರಂಗದ ನಿರ್ದೇಶಕರ ನಿರ್ದೇಶಕ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ “ನೆಕ್ಸ್ಟ್ ಲೆವೆಲ್” ಸಿನಿಮಾ ಬೆನ್ನತ್ತಿದ್ದಾರೆ. ಉಪೇಂದ್ರ ನಟನೆಯ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಚಿತ್ರಕ್ಕೆ “ನೆಕ್ಸ್ಟ್ ಲೆವೆಲ್” ಎಂದು ಹೆಸರಿಡಲಾಗಿದ್ದು ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ

ಉಪೇಂದ್ರ ಅವರ ಸಿನಿಮಾಗಳು ಅಂದ್ರೆ ನೆಕ್ಸ್ಟ್ ಲೆವೆಲ್ ಇರುತ್ತದೆ. ಈಗ ನೆಕ್ಸ್ಟ್ ಲೆವೆಲ್ ಸಿನಿಮಾ ಮತ್ತೊಂದು ಲೆವೆಲ್‍ಗೆ ತಯಾರಿಸಲು ಚಿತ್ರತಂಡ ಸಜ್ಜಾಗಿದ್ದಾರೆ ನಿರ್ಮಾಪಕ ತರುಣ್ ಶಿವಪ್ಪ.
ನೆಕ್ಸ್ಟ್ ಲೆವೆಲ್ ಸಿನಿಮಾ ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ “ತರುಣ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್ ತೆಲುಗು, ತಮಿಳು ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ಎ, ಉಪೇಂದ್ರ ಸ್ಟೈಲ್‍ನಲ್ಲಿ ನೆಕ್ಸ್ಟ್ ಲೆವೆಲ್ ಸಿನಿಮಾ ಇರಲಿದೆ. ಸದ್ಯ ಪ್ರೀ ಪೆÇ್ರಡಕ್ಷನ್ ವರ್ಕ್‍ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ” ಎಂದು ತಿಳಿಸಿದ್ದಾರೆ.

ರೋಸ್, ಮಾಸ್ ಲೀಡರ್, ವಿಕ್ಟರಿ-2, ಖಾಕಿ, ಛೂ ಮಂತರ್ ಸಿನಿಮಾಗಳನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ತುಗ್ಲಕ್’, ‘ಹುಲಿರಾಯ’ ಹಾಗೂ ‘ಶಾರ್ದೂಲ ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜೊತೆ ಅರವಿಂದ್ ಕೌಶಿಕ್ ಹಾಗೂ ತರುಣ್ ಶಿವಪ್ಪ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

