"Love Matru", a two-part story, releases on August 1st

ಎರಡು ಕಾಲಘಟ್ಟದ ಕಥಾನಕದ ಚಿತ್ರ “ಲವ್ ಮ್ಯಾಟ್ರು” ಆಗಸ್ಟ್ 1 ರಂದು ಬಿಡುಗಡೆ - CineNewsKannada.com

ಎರಡು ಕಾಲಘಟ್ಟದ ಕಥಾನಕದ ಚಿತ್ರ “ಲವ್ ಮ್ಯಾಟ್ರು” ಆಗಸ್ಟ್ 1 ರಂದು ಬಿಡುಗಡೆ

ಕಲಾವಿದರಾದ ಬಿಲ್ವ ವಿರಾಟ್- ಸೋನಲ್ ಮಾಂಥೆರೋ ಹಾಗು ಅಚ್ಚುತ್ ಕುಮಾರ್- ಅನಿತಾ ಭಟ್ ನಡುವಿನ “ಲವ್ ಮ್ಯಾಟ್ರು” ಸಂಗತಿ ಒಳಗೊಂಡ ಚಿತ್ರ “ ಲವ್ ಮ್ಯಾಟ್ರು” ಆಗಸ್ಟ್ 1ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟ ಅಭಿಜಿತ್ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಎರಡು ಕಾಲಘಟ್ಟಗಳ ಕಥಾನಕ ಒಳಗೊಂಡಿರುವ “ಲವ್ ಮ್ಯಾಟ್ರು” ಚಿತ್ರ ಇದೆ ಆಗಸ್ಟ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಟ್ರೈಲರ್ ಬಿಡುಗಡೆ ವೇಳೆ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ನಟ ಅಭಿಜಿತ್, ಯುವ ಪ್ರತಿಭೆಗಳ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯುತ್ತಿದೆ. ಅದರಲ್ಲೂ ಮಹಿಳಾ ನಿರ್ಮಾಪಕಿ ನಿರ್ಮಿಸಿ , ಯುವ ನಟ ಅಭಿನಯಿಸಿ ಜೊತೆಗೆ ನಿರ್ದೇಶನ ಮಾಡಿರುವ ಲವ್ ಮ್ಯಾಟ್ರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಖುಷಿಯಿದೆ. ಪ್ರೀತಿಯ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ಮನದುಂಬಿ ಹಾರೈಸಿದರು

ನಟ ಹಾಗೂ ನಿರ್ದೇಶಕ ವಿರಾಟ ಬಿಲ್ವ ಮಾತನಾಡಿ, ವಿಭಿನ್ನ ಪ್ರೇಮ ಕಥೆಯನ್ನು ತೆರೆಯ ಮೇಲೆ ತೋರಿಸುವುದು ನಮ್ಮ ಉದ್ದೇಶ , ಗೆಸ್ ಮಾಡಿದಂತೆ ಚಿತ್ರ ಇರುವುದಿಲ್ಲ.ಈ ಮುಂಚೆ ರಂಗಭೂಮಿ , ಸೀರಿಯಲ್ , ಕಿರುಚಿತ್ರ ಹಾಗೂ ಸಹಾಯಕ ನಿರ್ದೇಶಕನಾಗಿ ಕೆ .ಎಂ. ಚೈತನ್ಯ , ಸುಕ್ಕಾ ಸೂರಿ, ಪ್ರಶಾಂತ್ ನೀಲ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಕಡ್ಡಿಪುಡಿ ಚಿತ್ರದಲ್ಲಿ ನಟನೆ ಮಾಡಿ, ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡು ಒಂದು ಪ್ರೇಮ ಕಥೆಯನ್ನು ಸಿದ್ಧಪಡಿಸಿಕೊಂಡು ನಟನೆ ಹಾಗೂ ನಿರ್ದೇಶನ ಮಾಡುವ ಮೂಲಕ ಲವ್ ಮ್ಯಾಟ್ರು ಚಿತ್ರವನ್ನ ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ ಚಿತ್ರವನ್ನು ಬೆಂಗಳೂರು ಹಾಗೂ ಕುದುರೆಮುಖದಲ್ಲಿ ಚಿತ್ರೀಕರಣ ಮಾಡಲಾಗಿದೆ.ಆಗಸ್ಟ್ 1ರಂದು ಬಿಡುಗಡೆಯಾಗಲಿದೆ ಎಂದರು.

ನಿರ್ಮಾಪಕಿ ವಂದನಾ ಪ್ರಿಯ ಮಾತನಾಡಿ, ಕಥೆಯನ್ನು ನಿರ್ದೇಶಕರು ಸೇರಿ ಮಾಡಿದ್ದು ಸುತ್ತಮುತ್ತ ಗಮನಿಸಿದÀ ಕೆಲವು ಪ್ರೇಮ ಪ್ರಕರಣಗಳ ಕಂಟೆಂಟ್ ಒಳಗೊಂಡಿದೆ. ಲವ್ ಕಂಟೆಂಟ್ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ. ಒಂದಷ್ಟು ಸಮಸ್ಯೆ ಇದ್ದರೂ ಅದನ್ನ ನಿಭಾಯಿಸಿ ಮುಂದೆ ಬಂದಿದ್ದೇವೆ. ಅದೇ ರೀತಿ ಕಲಾವಿದರು , ಟೆಕ್ನಿಕಲ್ ಟೀಂ ಕೂಡ ತುಂಬ ಸಹಕಾರ ನೀಡಿದ್ದಾರೆ. ನಮ್ಮ ಚಿತ್ರಕ್ಕೆ ಮಾಧ್ಯಮದವರ ಪ್ರೊತ್ಸಾಹ ಬೆಂಬಲ ಇರಲಿ ಎಂದು ಕೇಳಿಕೊಂಡರು.

ನಟಿ ಸೋನಾಲ್ ಮಂಟೆರೋ ಮಾತನಾಡಿ ಚಿತ್ರದ ನಿರ್ಮಾಪಕಿ ಬಹಳ ಧೈರ್ಯವಂತೆ, ಅದಕ್ಕೆ ನಿರ್ದೇಶಕರ ಸಪೋರ್ಟ್ ಕೂಡ ಚೆನ್ನಾಗಿತ್ತು, ನನ್ನ ಪಾತ್ರ ಕೂಡ ಬಹಳ ಸೊಗಸಾಗಿದೆ. ಲವ್ ಮ್ಯಾಟ್ರು ಟೈಟಲ್ಲೇ ಹೇಳುವಂತೆ ಲವ್ ಕಂಟೆಂಟ್ ಬಹಳ ಕುತೂಹಲಕಾರಿ ಯಾಗಿದೆ. ನಿಮ್ಮ ಬೆಂಬಲ ಈ ಚಿತ್ರಕ್ಕೆ ಇರಲಿ ಎಂದರು.

ಅಚ್ಚುತ್ ಕುಮಾರ್ ಮಾತನಾಡಿ ಪ್ರೀತಿಯ ಕಂಟೆಂಟ್ ಇರುವ ಚಿತ್ರಗಳು ಪ್ರೇಕ್ಷಕರನ್ನ ಬೇಗ ಸೆಳೆಯುತ್ತದೆ. ಈ ಸಿನಿಮಾದಲ್ಲೂ ಎರಡು ಟ್ರ್ಯಾಕ್ ವಿಭಿನ್ನವಾಗಿದೆ ಎಂದರು.

ನಟಿ ಅನಿತಾ ಭಟ್ ಮಾಹಿತಿ ನೀಡಿ ಇದು ಎರಡು ಕಾಲಘಟ್ಟಗಳ ಪಯಣ ಇರುವ ಚಿತ್ರ. ಅಚ್ಚುತ್ ಕುಮಾರ್ , ಸುಮನ್ ರಂಗನಾಥ್ ಹಾಗೂ ಕಾಂಬಿನೇಷನ್ ಬಹಳ ವಿಭಿನ್ನವಾಗಿದೆ. ಹೆಚ್ಚು ಹೇಳುವಂತಿಲ್ಲ ಸಿನಿಮಾ ನೋಡಿ ಎಂದರು.

ಮತ್ತೊಬ್ಬ ನಟಿ ಸುಶ್ಮಿತಾ ಗೋಪಿನಾಥ್ ಗೈರು ಹಾಜರಾಗಿದ್ದರು ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಟ್ರ್ಯಾಕ್ ಸೋಲಮಾನ್ ಸಂಗೀತ ನೀಡಿದ್ದು, ಛಾಯಾಗ್ರಹಕ ಪರಮ್ ವೇದಿಕೆ ಮೇಲಿದ್ದು ಅನುಭವಗಳನ್ನು ಹಂಚಿಕೊಂಡರು.ಈ ಚಿತ್ರಕ್ಕೆ ರಮಿತ್ ಎಲಕ್ಕಿ ಸಿನಿಮಾ ಪ್ರಚಾರಕರ್ತರಾಗಿದ್ದಾರೆ.

#AnitaBhat

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin