ಕಮಾಲ್ ಮಾಡಿದ “ಕಮಲ್ ಶ್ರೀದೇವಿ” ಚಿತ್ರದ ಟೀಸರ್: ಚಿತ್ರದ ಬಗ್ಗೆ ಕುತೂಹಲ ಹೆಚ್ಚಳ
ಯುವ ನಟ ಸಚಿನವ ಚಲುವರಾಯಸ್ವಾಮಿ ಮತ್ತು ಪ್ರತಿಭಾನ್ವಿತ ನಟಿ ಸಂಗೀತ ಭಟ್ ಜೋಡಿ ಜೊತೆಯಾಗಿ ಕಾಣಿಸಿಕೊಂಡಿರುವ “ ಕಮಲ್ ಶ್ರೀದೇವಿ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕಮಾಲ್ ಮಾಡಿದೆ, ಹೀಗಾಗಿ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆಯನ್ನು ಸಹಜವಾಗಿ ದುಪ್ಪಟ್ಟು ಮಾಡಿದೆ.
ಟೀಸರ್ ಬಿಡುಗಡೆಯಲ್ಲಿ ಹಿರಿಯ ಕಲಾವಿದ ಎಂ,ಎಸ್ ಉಮೇಶ್, ನಟರಾದ ಕಿಶೋರ್, ಸಂಗೀತ ನಿರ್ದೇಶಕರು, ಕಲಾವಿದರೂ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು ತಂತ್ರಜ್ಞರ ದಂಡು ಭಾಗವಹಿಸಿತ್ತು.
ಈ ವೇಳೆ ಮಾತಿಗಿಳಿದ ನಟಿ ಸಂಗೀತ ಭಟ್ ಮಾತನಾಡಿ, ಶ್ರೀದೇವಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ನಿರ್ದೇಶಕರಿಂದಲೂ ಮೆಚ್ಚುಗೆ ಸಿಕ್ಕಿರುವುದು ಕಲಾವಿದರಿಗೆ ಪ್ರಶಸ್ತಿ ಬಂದಂತೆ, ಸಹ ನಿರ್ಮಾಪಕ ರಾಜ್‍ವರ್ದನ್ ಪ್ರತಿಯೊಂದು ಸಣ್ಣ ಸಣ್ಣ ವಿಷಯವನ್ನು ಅದ್ಬುತವಾಗಿ ಮೂಡಿ ಬರಲು ಕಾರಣರಾಗಿದ್ಧಾರೆ. ಕಮಲ್ ಶ್ರೀದೇವಿ ಒಳ್ಳೆಯ ಚಿತ್ರವಾಗಲಿದೆ, ನಟ ಸಚಿನ್ ಚಿತ್ರದಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ಒಳ್ಳೆಯಾದಗಲಿ, ಹಿರಿಯ ನಟ ಕಿಶೋರ್ ಸೇರಿದಂತೆ ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಟೀಸರ್ ಅದ್ಬುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ನಟ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದವೆ, ಅದನ್ನು ಮತ್ತಷ್ಟು ವಿಸ್ತರಿಸಿ ಚಿತ್ರ ಮಾಡಿದ್ದೇವೆ, ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ,ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರು
ಸಹ ನಿರ್ಮಾಪಕ ರಾಜವರ್ಧನ್ ಮಾತನಾಡಿ, ಕಮಲ್‍ಗೆ ಆಸೆಯೂ ಅಲ್ಲ ಆಕರ್ಷಣೆಯೂ ಅಲ್ಲ, ಶ್ರೀದೇವಿ ಬಗ್ಗೆ ಅವನ ಮನದಲ್ಲಿ ಮೂಡಿದ ಮಧುರ ಭಾವನೆ. ಚಿತ್ರವನ್ನು ಅಂದುಕೊಂಡತೆ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಚಿತ್ರಗಳು ಚೆನ್ನಾಗಿ ಓಡುತ್ತಿರುವುದು ಉತ್ತಮ ಸಂಗತಿ, ಆಷಾಡ ಮುಗಿದು ಸುಗ್ಗಿ ಕಾಲಕ್ಕೆ ಬಂದಿದ್ದೇವೆ, ಅದಕ್ಕೆ ಓಂಕಾರ ಹಾಕಿದ್ದ “ಎಕ್ಕ” ಚಿತ್ರಕ್ಕೆ ಧನ್ಯವಾದಗಳು ಅದರ ಮುಂದುವರಿದ ಭಾಗವಾಗಿ “ಸು ಫ್ರಮ್ ಸೋ” ಕೂಡ ಉತ್ತಮವಾಗಿ ಓಡುತ್ತಿದೆ, ಚಿತ್ರ ಚೆನ್ನಾಗಿ ಓಡಿದರೆ ಎಲ್ಲರಿಗೂ ಖುಷಿ. ಕಥೆಯ ಬಗ್ಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ ಎಲ್ಲಾ ಕಲಾವಿದರು ಅವರ ಪಾತ್ರಕ್ಕೆ ಜೀವ ತುಂಬಿದಿದ್ದಾರೆ, ಕಮಲ್ ಶ್ರೀದೇವಿ ಚಿತ್ರದಲ್ಲಿ ಎಲ್ಲರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದರು
ಹಿರಿಯ ನಟ ಕಿಶೋರ್ ಮಾತನಾಡಿ ಈಗ ಎಲ್ಲಾ ಕಡೆ ಅತ್ಯಾಚಾರ, ಕೊಲೆಯದ್ದೇ ವಿಷಯ ಮತ್ತು ವಿಚಾರ. ಸಹಜವಾದ ವಿಷಯ ಎಲ್ಲೋ ಹೋದರೆ ಅದರ ಪರಿಣಾಮ ಬೀರಲ್ಲ, ಸುತ್ತ ಮತ್ತಲ ನಡೆದಾಗ ಮಾತ್ರ ಅದರ ಗಂಭೀರತೆ ತಿಳಿಯೋದು ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದು ತಿಳಿಸಿದರು

ಚಿತ್ರದಲ್ಲಿ ಕೆಲಸ ಮಾಡಿದ ರಾಘು ಶಿವಮೊಗ್ಗ, ಎಂಸಿ ಬಿಜ್ಜು ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಎಲ್ಲರೂ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಚಿತ್ರದಲ್ಲಿ ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿದೆ. ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.


