"Kataka" sequel set for release: Curiosity increases

“ಕಟಕ” ಚಿತ್ರದ ಸೀಕ್ವೆಲ್ ಬಿಡುಗಡೆಗೆ ಸಜ್ಜು : ಕುತೂಹಲ ಹೆಚ್ಚಳ - CineNewsKannada.com

“ಕಟಕ” ಚಿತ್ರದ ಸೀಕ್ವೆಲ್ ಬಿಡುಗಡೆಗೆ ಸಜ್ಜು : ಕುತೂಹಲ ಹೆಚ್ಚಳ

ಸಂಗೀತ‌ ನಿರ್ದೇಶಕ ರವಿ ಬಸ್ರೂರು ನಿರ್ದೇಶಿಸಿದ ಮೊದಲ ಹಾರರ್ ಸಿನಿಮಾ “ಕಟಕ” . 2017ರಲ್ಲಿ ತೆರೆ ಕಂಡಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಮತ್ತೆ ಕಟಕ ಸಿನಿಮಾದ ಮುಂದುವರಿದ ಭಾಗ ರಿಲೀಸ್ ಗೆ ಸಜ್ಜಾಗಿದೆ

ಈ ಹಿನ್ನೆಲೆಯಲ್ಲಿ ರವಿ ಬಸ್ರೂರು ತಂಡ ಕಟಕ 2 ಸಿನಿಮಾದ ಹಾಡು ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ.

ಇದೊಂದು ತಂದೆ ಮಗಳ ಭಾವನಾತ್ಮಕ ಹಾಡಾಗಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಅಯಿರಾ ಉಡುಪಿ ಹಾಡಿದ್ದಾರೆ.‌ ಈ ಹಾಡಿಗೆ ಶಿವಕುಮಾರ್ ಜಯರಾಂ ಸಂಯೋಜನೆ ಮಾಡಿದ್ದಾರೆ.

ಕರಾವಳಿ ಭಾಗದಲ್ಲಿ ನಡೆದಿದ್ದ ನೈಜ ಕಥೆ ಹೊಂದಿದೆ ಕಟಕ ಸಿನಿಮಾ.. ಈಗಾಗಲೇ ಮೊದಲ ಭಾಗದಲ್ಲಿ ಸಿನಿಮಾದಲ್ಲಿ ತಂದೆ ಮಗಳನ್ನ ಹೇಗೆ ಉಳಿಸಿಕೊಳ್ಳುತ್ತಾನೆ.. ಮಗಳಿಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾರೆ ಎಂಬುದನ್ನ ತೋರಿಸಲಾಗಿದೆ..

ಕಟಕ 2 ಸಿನಿಮಾದಲ್ಲಿ ಹೋಗಿದ್ದ ಆತ್ಮ ಮತ್ತೆ ಬಾಲಕಿ ಮೇಲೆ ಬರೋದು ಯಾಕೆ.. ಅನ್ನೋದೆ ಥ್ರಿಲ್ಲಿಂಗ್ ಆಗಿರೋ ಸ್ಟೋರಿ.. ವಿಶೇಷ ಅಂದ್ರೆ ಕಟಕ ಸಿನಿಮಾ 2017ರಲ್ಲಿ ತೆರೆಕಂಡಿದ್ದು, ಇಂಗ್ಲಿಷ್ ಭಾಷೆಗೆ ಡಬ್ ಆದ ಮೊದಲ ಸಿನಿಮಾ ವಾಗಿದೆ. 15 ಭಾಷೆಗಳಲ್ಲಿ ಕಟಕ ಕಟಕ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು.

ಅಶೋಕ್ ರಾಜ್, ಸ್ಪಂದನಾ ಪ್ರಸಾದ್, ಉಗ್ರ ಮಂಜು, ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin