“ಲೈಫ್ ಟು ಡೇ” ಚಿತ್ರದ ಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ. ಗೀತೆಗೆ ಜೋಗಿ ಪ್ರೇಮ್ ಗಾಯನ
“ಲೈಫ್ ಟು ಡೇ..” ಚಿತ್ರದ ಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ… ಗೀತೆಗೆ ನಿರ್ದೇಶಕ ಜೋಗಿ ಪ್ರೇಮ್ ಧ್ವನಿಯಾಗಿದ್ದು ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಹಾಡು ಮೂಡಿ ಬಂದಿದೆ.
ಪಕ್ಕಾ ಪ್ರೇಮಕಥೆಯ ಚಿತ್ರ ಇದು. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶ ಜೀವಿ ಪ್ರಕಾಶ್ ಧನಿಯಾಗಿದ್ದು ಇದೀಗ ಅದೇ ಹಾಡಿನ ಕನ್ನಡ ಅವತರಣಿಕೆಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ… ಜೋಗಿ ಪ್ರೇಮ್ ದನಿಗೂಡಿಸಿದ್ದಾರೆ.
ರಾಮ್ ನಾರಾಯಣ್ ಸಾಹಿತ್ಯವಿರುವ ಈ ಹಾಡನ್ನು ಪ್ರೇಮ್ಸ್ ಅನುಭವಿಸಿ ಹಾಡಿದ್ದಾರೆ. ಈ ಹಾಡು ಕೇಳಿದಾಗ್ಲೇ ಇದು ಸೂಪರ್ ಹಿಟ್ ಆಗುತ್ತೆ ಎಂದ ಪ್ರೇಮ್, ಪ್ರೀತಿಯಿಂದ ಬಂದು ಹೊಸಬರ ಈ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.

ಇತ್ತೀಚೆಗೆ ಪ್ರೇಮ್ ಒಂದು ಹಾಡು ಹಾಡೋದಕ್ಕೆ 5ಲಕ್ಷ ತಗೋತಾರೆ ಅನ್ನೋ ವಿಷ್ಯ ಸುದ್ದಿಯಾಗಿತ್ತು..ಅದರ ಬೆನ್ನಿಗೆ ಲೈಫ್ ಟುಡೇ ಚಿತ್ರಕ್ಕೆ ಹಾಡಿರೋ ಪ್ರೇಮ್, ಇದೇ ರೀತಿಯ ಪ್ರಶ್ನೆಯೊಂದಕ್ಕೆ 10ಲಕ್ಷ ಕೇಳ್ತೀನಿ.. ಮುಂಬೈಯವರಿಗೆ ಆದ್ರೆ ಕೊಡ್ತೀರಾ.. ಕನ್ನಡಿಗರಿಗೆ ಯಾಕೆ ಕೊಡಬಾರ್ದು ಅಂತ ಪ್ರಶ್ನೆ ಮುಂದಿಟ್ಟರು. ಜೊತೆಗೆ ನಾನು ಹಾಡೋ ಹಾಡಿನ ಸಂಭಾವನೆ ಟ್ರಸ್ಟ್ ಸೇರುತ್ತೆ. ಅಮ್ಮನ ಟ್ರಸ್ಟ್ ಮೂಲಕ ಅನೇಕ ಸಮಾಜಿಕ ಸೇವೆಗೆ ಬಳಕೆಯಾಗುತ್ತೆ ಎಂದರು.
ಶ್ರೀಧರ್ ವಿ ಸಂಭ್ರಮ್ ಮಾತನಾಡಿ ಪ್ರೇಮ್ ಸಾರ್ ಹಾಡೋದಕ್ಕೆ ಸಿಕ್ಕೋರೋದೇ ನಮ್ ಪುಣ್ಯ ಅವರ ಬಹುದೊಡ್ಡ ಅಭಿಮಾನಿ.. ಅವ್ರ ದನಿಯಲ್ಲಿರೋ ಮುಗ್ಧತೆ ಮತ್ತು ನೋವಿನ ಗಾಢತೆ. ಈಹಾಡಿಗೆ ಬೇಕಿತ್ತು ಅದು ಸಿಕ್ಕಿದೆ. ಖಂಡಿತ ಲೈಫ್ ಟುಡೇ ಆಲ್ಪಂ ದೊಡ್ಡ ಹಿಟ್ ಆಗುತ್ತೆ ಅನ್ನೋ ಭರವಸೆ ಇದೆ ಎಂದರು.
ನಿರ್ದೇಶಕ ಕಾಂತ ಕನ್ನಲ್ಲಿ, ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಮಾತಾಡಿ, ಪ್ರೇಮ್ ಪೆÇ್ರೀತ್ಸಾಹಕ್ಕೆ ಧನ್ಯವಾದ ಹೇಳಿದ್ರು.. ಹಾಗೇ ಈ ಸಿನಿಮಾ ಈ ಜನರೇಷನ್ ಮೆಚ್ಚುವಂತಹ ಕಂಟೆಂಟ್ ಮತ್ತು ಎಂಟ್ರಟೈನ್ಮೆಂಟ್ ನ ಒಳಗೊಂಡಿದೆ ಎಂದರು.

ಲೈಫ್ ಟು ಡೇ ಚಿತ್ರದಲ್ಲಿ ಕಿರಣ್ ಆದಿತ್ಯರಿಗೆ ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ರಥರ್ವ,ತಬಲನಾಣಿ, ಅಪೂರ್ವ , ಕಾಕ್ರೋಚ್ ಸುಧಿ ಮತ್ತು ಜಗ್ಗಪ್ಪ ತಾರಾಗಣದಲ್ಲಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ.

