ಯೋಗರಾಜ್ ಭಟ್- ವಿ ಹರಿಕೃಷ್ಣ ಜೋಡಿಯ ಚಿತ್ರದ ಮೂಲಕ ಭುವನ್ ಪೊನ್ನಣ್ಣ ಚಿತ್ರರಂಗಕ್ಕೆ ರೀ ಎಂಟ್ರಿ - CineNewsKannada.com

ಯೋಗರಾಜ್ ಭಟ್- ವಿ ಹರಿಕೃಷ್ಣ ಜೋಡಿಯ ಚಿತ್ರದ ಮೂಲಕ ಭುವನ್ ಪೊನ್ನಣ್ಣ ಚಿತ್ರರಂಗಕ್ಕೆ ರೀ ಎಂಟ್ರಿ

ನಿರ್ದೇಶಕ ಯೋಗರಾಜ್ ಭಟ್ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಜೋಡಿಯ ಚಿತ್ರದ ಮೂಲಕ ನಟ ಭುವನ್ ಪೊನ್ನಣ್ಣ ಚಿತ್ರರಂಗಕ್ಕೆ ಮರಳಿ ಬಂದಿದ್ಧಾರೆ. ಅದಕ್ಕಾಗಿ “ ಹಲೋ 123” ಎಂದು ಹೆಸರಿಡಲಾಗಿದೆ

ವಿಜಯ್ ತಾತಾ ಹಾಗೂ ಅಮೃತಾ ವಿಜಯ್ ತಾತಾ ನಿರ್ಮಾಣದಲ್ಲಿ “ಹಲೋ 123” ತಾರಾ ದಂಪತಿ ಹರ್ಷಿಕಾ ಭುವನ್ ಪುತ್ರಿ ತ್ರಿದೇವಿಯ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ರಾಂಧವ ಮೂಲಕ ಉದ್ಯಮದಲ್ಲಿ ದೊಡ್ಡದಾಗಿ ನಿಲ್ಲುವ ಭರವಸೆ ಹುಟ್ಟಿಸಿದ್ದ ನಟ ಭುವನ್ ಪೆÇನ್ನಣ್ಣ . ಈ ಬಾರಿ ಗೆಲ್ಲುವ ಗುರಿಹೊಂದಿದ್ದರೆ ಭುವನ್ ಪೊನ್ನಣ್ಣ ಜತೆಗೆ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ವಿಭಿನ್ನ ಕಥೆಯನ್ನು ಚಿತ್ರರೂಪದಲ್ಲಿ ತರಲು ಮುಂದಾಗಿದ್ಧಾರೆ

ಒಳ್ಳೆ ದಿನ ಘಳಿಗೆ ಅನ್ನೋ ಕಾರಣಕ್ಕೆ ಸಿನಿಮಾ ಮಾತುಕತೆ ಮಾಡಿದ ಮರುದಿನವೇ ಚಿತ್ರಕ್ಕೆ ಚಾಲನೆ ನೀಡಿದ್ದು, ಉಳಿದ ಕೆಲಸಗಳು ಇಲ್ಲಿಂದ ಆರಂಭವಾಗ್ತಿವೆ. ಯೋಗರಾಜ್ ಭಟ್ ಅಮೇರಿಕಾ ಪ್ರವಾಸ ಹೊರಟಿದ್ದು, ವಾಪಸ್ ಬಂದ ಕೂಡ್ಲೇ ಚಿತ್ರದ ಉಳಿದ ಕೆಲಸಗಳು ಶುರುವಾಗಲಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ. ಎಲ್ಲಾ ಅಂದುಕೊಂಡಂಗೆ ಆದ್ರೆ ಹಲೋ 123 ಮುಂದಿನ ವರ್ಷ ಮಾರ್ಚ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin