30 years of "Ganayogi Panchakshari Gavai": Chindodi Bangaresh shares memories

“ಗಾನಯೋಗಿ ಪಂಚಾಕ್ಷರಿ ಗವಾಯಿ” ಚಿತ್ರಕ್ಕೆ 30 ವರ್ಷ: ನೆನಪು ಹಂಚಿಕೊಂಡ ಚಿಂದೋಡಿ ಬಂಗಾರೇಶ್ - CineNewsKannada.com

“ಗಾನಯೋಗಿ ಪಂಚಾಕ್ಷರಿ ಗವಾಯಿ” ಚಿತ್ರಕ್ಕೆ 30 ವರ್ಷ: ನೆನಪು ಹಂಚಿಕೊಂಡ ಚಿಂದೋಡಿ ಬಂಗಾರೇಶ್

“ಗಾನಯೋಗಿ ಪಂಚಾಕ್ಷರಿ ಗವಾಯಿ” ಚಿತ್ರ ಬಿಡುಗಡೆಯಾಗಿ 30 ವರ್ಷ ಸಂದಿದೆ. ಅಪೂರ್ವ ಚಿತ್ರವೆಂದು ಇಡೀ ನಾಡೇ ಸಂಭ್ರಮಿಸಿದೆ. ಚಿತ್ರದ ಹಾಡುಗಳು ಜನಮಾನಸದಲ್ಲಿ ಅಚ್ಚಳಿಯದೆ ಗುನುಗುತ್ತಿವೆ, ಅದರ ಸವಿನೆನಪನ್ನು ನಿರ್ದೇಶಕ ಚಿಂದೋಡಿ ಬಂಗಾರೇಶ್ ಮೆಲುಕು ಹಾಕಿದ್ದಾರೆ

ಕರ್ನಾಟಕದ ಎಲ್ಲಾ ದೇವಾಲಯಗಳಲ್ಲಿ ಮಠಮಾನ್ಯದಲ್ಲಿ ಚಿತ್ರದ “ ನೀಡು ಶಿವ ನೀಡದಿರು ಶಿವ” ಹಾಡು ಇಂದಿಗೂ ಜನಪ್ರಿಯವಾಗಿದೆ. ಪ್ರಥಮ ಬಾರಿಗೆ ಕನ್ನಡದಲ್ಲಿ ಎಸ್ ಪಿ ಬಾಲಸುಬ್ರಮಣ್ಯ ಅವರಿಗೆ ಹಾಗೂ ಪ್ರಥಮ ಬಾರಿಗೆ ಸಂಗೀತ ನಿರ್ದೇಶಕ ಹಂಸಲೇಖರವರೆಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಚಿತ್ರ ಎಂದು ನೆನಪು ಮಾಡಿಕೊಂಡಿದ್ದಾರೆ ನಿರ್ದೇಶಕ ಚಿಂದೋಡಿ ಬಂಗಾರೇಶ್

ನಿರ್ದೇಶನದ ಅಳಿಲುಸೇವೆಗೆ ರಾಜ್ಯ ಪ್ರಶಸ್ತಿಯೂ ಬಂತು. ಈ ಚಿತ್ರದ ಯಶಸ್ಸಿಗೆ ಹಂಸಲೇಖ ಅವರ ಸಂಗೀತ ಕನ್ನಡನಾಡೆ ಎಂದೂ ಮರೆಯದ ಸಂಗೀತ ಸೇವೆಯಾಗಿದೆ. ಸಮಯದಲ್ಲಿ ನಿರ್ಮಾಪಕಿ ಪದ್ಮಶ್ರೀ ಚಿಂದೊಡಿ ಲೀಲಾ ಅವರಿಗೂ , ನಟಿಸಿದ ಕಲಾವಿದರು, ತಂತ್ರಜ್ಞರಿಗೂ ಆಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ

30 ವರ್ಷದ ಸವಿ ನೆನಪಿಗಾಗಿ ಕನ್ನಡ ನಾಡಿನ ಕಣ್ಮಣಿಗಳಾದ ಎಸ್ ಪಿ ಬಾಲಸುಬ್ರಮಣ್ಯಂ, ಹಂಸಲೇಖರವರೆಗೂ ನೆನಪುಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಕನ್ನಡ ನಾಡಿನ ಎಲ್ಲಾ ಪ್ರೇಕ್ಷಕರಿಗೂ ವಂದಿಸುತ್ತೇನೆ ಎಂದು ಚಿಂದೋಡಿ ಬಂಗಾರೇಶ್ ಹೇಳಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin