Shooting of the film "Mr. Jack" completes
“ಮಿಸ್ಟರ್ ಜಾಕ್” ಚಿತ್ರದ ಚಿತ್ರೀಕರಣ ಪೂರ್ಣ
ರಾಂಕ್ ಸರಣಿಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ರಾಂಕ್ ಸ್ಟಾರ್ ಗುರುನಂದನ್ ನಟಿಸಿ ನಿರ್ಮಿಸಿರುವ “ಮಿಸ್ಟರ್ ಜಾಕ್” ಚಿತ್ರದ ಚಿತ್ರೀಕಣರ ಪೂರ್ಣಗೊಂಡಿದೆ.

ಮಂಡಿ ಮನೆ ಟಾಕೀಸ್ ಬ್ಯಾನರ್ ಅಡಿ “ ಮಿಸ್ಟರ್ ಜಾಕ್ “ ಚಿತ್ರ ನಿರ್ಮಾಣ ಮಾಡಿದ್ದು ಸುಮಂತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಮಿಸ್ಟರ್ ಜಾಕ್ ಚಿತ್ರದಲ್ಲಿ ನಟಿ ತಪಸ್ವಿನಿ ಪೂಣಚ್ಚ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ, ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಚಿತ್ರೀಕರಣದ ನಂತರದ ಕೆಲಸ ಕಾರ್ಯಗಳಲ್ಲಿ ನಿರತವಾಗಿದೆ.
ನಟ ಗುರುನಂದನ್ ಅವರ ಈ ಹಿಂದಿನ ರಾಂಕ್ ಸರಣಿಯ ಎಲ್ಲಾ ಚಿತ್ರಗಳು ಮನರಂಜನೆಗೆ ಒತ್ತು ನೀಡಲಾಗಿತ್ತು, ಈ ಕಾರಣದಿಂದ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗಿತ್ತು, ಮಿಸ್ಟರ್ ಜಾಕ್ ಕೂಡ ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ಮಾಡಲಾಗಿದೆ ಎನ್ನುತ್ತಿದೆ ಚಿತ್ರತಂಡ.

