“Bigg Boss Kannada” is a popular reality show in Karnataka.

ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಆಗಿ “ಬಿಗ್ ಬಾಸ್ ಕನ್ನಡ” - CineNewsKannada.com

ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಆಗಿ “ಬಿಗ್ ಬಾಸ್ ಕನ್ನಡ”

ಕನ್ನಡ ಕಿರುತೆರೆಯಲ್ಲಿ ಮೂಡಿಬಂದ ಅತಿದೊಡ್ಡ ರಿಯಾಲಿಟಿ ಶೋ “ಬಿಗ್ ಬಾಸ್” ಕನ್ನಡ 11ನೇ ಸೀಸನ್‍ನಲ್ಲಿ ಕರ್ನಾಟಕದ ಶೇಕಡಾ 82 ರಷ್ಟು ಟಿವಿ ಪ್ರೇಕ್ಷಕರಿಗೆ ತಲುಪಿ, ರಾಜ್ಯದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂಬ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿಕೊಂಡಿದೆ.

ದಶಕಕ್ಕಿಂತ ಹೆಚ್ಚು ಕಾಲದಿಂದ ಪ್ರಸಾರವಾಗುತ್ತಿರುವ ಶೋ, ಸಾಂಸ್ಕೃತಿಕ ಪ್ರಾಮಾಣಿಕತೆಯೊಂದಿಗೆ ಮನರಂಜನೆಯನ್ನು ಒಗ್ಗೂಡಿಸಿ, ಪೀಳಿಗೆಯನ್ನು ಮೀರಿದ ಪ್ರೇಕ್ಷಕರನ್ನು ತಲುಪುತ್ತಿದೆ.

ಸೂಪರ್‍ಸ್ಟಾರ್ ಕಿಚ್ಚ ಸುದೀಪ ನಿರೂಪಕರಾಗಿರುವ ಬಿಗ್ ಬಾಸ್ ಕನ್ನಡ, ಕೇವಲ ರಿಯಾಲಿಟಿ ಶೋ ಅಷ್ಟೇ ಅಲ್ಲ, ಒಂದು ಸಾಂಸ್ಕೃತಿಕ ಸಂಭಾಷಣೆ ಆಗಿದೆ. ಪ್ರತಿ ವರ್ಷ ಹೊಸ ಆಟದ ವಿಧಾನಗಳು, ವೈವಿಧ್ಯಮಯ ಸ್ಪರ್ಧಿಗಳು ಮತ್ತು ತಂತ್ರಜ್ಞಾನ ಆಧಾರಿತ ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಮೂಲಕ ಈ ಶೋ ಹೊಸತನ್ನು ನೀಡುತ್ತಾ ಬಂದಿದೆ ಎಂದು ಜಿಯೋಸ್ಟಾರ್ ದಕ್ಷಿಣ ವಿಭಾಗದ ಎಂಟರ್ಟೇನ್‍ಮೆಂಟ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಹೇಳಿದ್ದಾರೆ.

“ಬಿಗ್ ಬಾಸ್ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ.ಸಮಾಜದ ವೈವಿಧ್ಯಮಯ ಸಂಕೀರ್ಣತೆ ಪ್ರತಿಬಿಂಬಿಸುವುದರಿಂದ ಪ್ರೇಕ್ಷಕರೊಂದಿಗೆ ಆಳವಾದ ಸಂಪರ್ಕ ಸಾಧಿಸುತ್ತದೆ. ಅಪ್ರತೀಕ್ಷಿತ, ತೀವ್ರ ಮತ್ತು ತೊಡಗಿಸಿಕೊಂಡ ಅನುಭವವನ್ನು ನೀಡುವ ಶೋ ಇದಾಗಿದೆ. ಪ್ರತೀ ಸೀಸನ್ ತನ್ನನ್ನು ಹೊಸ ರೂಪದಲ್ಲಿ ಮರುಪರಿಚಯಿಸಿಕೊಂಡಿರುವುದರಿಂದಲೇ ಪ್ರೇಕ್ಷಕರ ನಿಷ್ಠೆ ಇಷ್ಟು ವರ್ಷಗಳಿಂದ ಮುಂದುವರಿದಿದೆ. ಬಿಗ್ ಬಾಸ್ ಕನ್ನಡ ಕೇವಲ ಟಿವಿಯಲ್ಲ ಇದು ಪೀಳಿಗೆಗಳನ್ನೂ, ಸಮುದಾಯಗಳನ್ನೂ ಸಂಪರ್ಕಿಸುವ ಒಂದು ಸಾಂಸ್ಕೃತಿಕ ಸಂಭಾಷಣೆ.”ತಾರೆಗಳಿಗೂ ಬ್ರ್ಯಾಂಡ್‍ಗಳಿಗೂ ವೇದಿಕೆಯಾಗಿದೆ

ಬಿಗ್ ಬಾಸ್ ಸೌತ್ ಪ್ರತಿ ಆವೃತ್ತಿಯೂ ಸ್ಥಳೀಯ ಮೌಲ್ಯ ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ ಸ್ಪರ್ಧಿಗಳ ಆಯ್ಕೆಗಳಿಂದ ಹಿಡಿದು ಕಾರ್ಯಗಳ ವಿನ್ಯಾಸದವರೆಗೆ. ಜೊತೆಗೆ, ಸಂಬಂಧಗಳು, ಸವಾಲುಗಳು, ಮಾನವೀಯ ಕಥೆಗಳು ಎಂಬ ವಿಶ್ವವ್ಯಾಪಿ ಅಂಶಗಳು ಎಲ್ಲ ವಯೋಮಾನದವರಿಗೂ ಆಕರ್ಷಕವಾಗಿವೆ. ಅನೇಕ ಮನೆಗಳಲ್ಲಿ ಅಜ್ಜ-ಅಜ್ಜಿ, ಮೊಮ್ಮಕ್ಕಳೊಂದಿಗೆ ಕುಳಿತು ಚರ್ಚಿಸುತ್ತಾ ನೋಡಬಹುದಾದ ಕುಟುಂಬ ಒಗ್ಗಟ್ಟಿನ ಶೋ ಆಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin