ಕನ್ನಡ “ಬಿಗ್ ಬಾಸ್” ಆಡಿಷನ್ ಪ್ರಕ್ರಿಯೆ ಆರಂಭ: ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ
ಕನ್ನಡಿಗರ ಹೆಮ್ಮೆಯ ವಾಹಿನಿ ‘ಕಲರ್ಸ್ ಕನ್ನಡ’ದ ಬಿಗ್ ಬಾಸ್ ನೂತನ ಸೀಸನ್‍ನ ಆಡಿಷನ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಡಿಜಿಟಲ್ ಜಗತ್ತಿನ ಕಣ್ಮಣಿಗಳಾದ ಸೋಶಿಯಲ್ ಮೀಡಿಯಾ ಇನ್‍ಫ್ಲುಯೆನ್ಸರ್‍ಗಳು ಬಿಗ್ ಬಾಸ್ ಮನೆಗೆ ಬರಲು ಭಾರಿ ಉತ್ಸಾಹ ತೋರುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಈಗಾಗಲೇ ನೂರಾರು ಇನ್‍ಫ್ಲುಯೆನ್ಸರ್‍ಗಳು ತಮ್ಮ ವಿಡಿಯೋಗಳನ್ನು ಅಪ್‍ಲೋಡ್ ಮಾಡಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡುತ್ತಿದ್ದಾರೆ.
ಸುವರ್ಣಾವಕಾಶ ನಿಮ್ಮ ಕೈತಪ್ಪಬಾರದು ಎಂದರೆ ನೀವು ಆಡಿಷನ್ ಪ್ರಕ್ರಿಯೆಯನ್ನು ಅಧಿಕೃತ ಚಾನೆಲ್ ಮೂಲಕವೇ ಪೂರ್ಣಗೊಳಿಸಬೇಕು. ಇನ್‍ಸ್ಟಾಗ್ರಾಮ್‍ನಲ್ಲಿ ಕೇವಲ ಟ್ಯಾಗ್ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್ ಪರಿಶೀಲನೆಗೆ ಒಳಪಡುವುದಿಲ್ಲ. ನಿಮ್ಮ ವಿಡಿಯೋಗಳು ಮತ್ತು ವಿವರಗಳು ನೇರವಾಗಿ ಬಿಗ್ ಬಾಸ್ ಆಯ್ಕೆ ಸಮಿತಿಗೆ ತಲುಪಲು ಕೆಳಗಿನ ಅಧಿಕೃತ ವೆಬ್‍ಸೈಟ್ ಲಿಂಕ್ ಮಾತ್ರ ಏಕೈಕ ಮಾರ್ಗವಾಗಿದೆ
ಬಿಗ್ ಬಾಸ್ ಆಡಿಷನ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಡಿಷನ್ ವಿಡಿಯೋ ಮಾಡಲು, ಪ್ರವೇಶ ನೀಡಲು ಅಥವಾ ನಿಮ್ಮನ್ನು ಶೋಗೆ ಆಯ್ಕೆ ಮಾಡಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹಣವನ್ನು ಕೇಳಿದರೆ ದಯವಿಟ್ಟು ನಂಬಬೇಡಿ. ವಂಚಕರ ಜಾಲಕ್ಕೆ ಬಲಿಯಾಗಬೇಡಿ ಎಂದು ಮಾನವಿ ಮಾಡಿದೆ
ನಿಮ್ಮಲ್ಲಿರುವ ಅಪ್ಪಟ ಪ್ರತಿಭೆ, ನಿಮ್ಮ ಕಥೆ ಮತ್ತು ನಿಮ್ಮ ನೈಜ ವ್ಯಕ್ತಿತ್ವವನ್ನು ಜಗತ್ತಿಗೆ ತೋರಿಸಲು ಇದುವೇ ಸಕಾಲ. ತಡ ಮಾಡಬೇಡಿ, ತಕ್ಷಣವೇ ಅಧಿಕೃತ ಲಿಂಕ್‍ಗೆ ಭೇಟಿ ನೀಡಿ, ನಿಮ್ಮ ವಿಡಿಯೋ ಅಪ್‍ಲೋಡ್ ಮಾಡಿ. ಬಿಗ್ ಬಾಸ್ ತಂಡ ಮನವಿ ಮಾಡಿದೆ.
👉 ಅಧಿಕೃತ ಆಡಿಷನ್ ಲಿಂಕ್: https://colorskannada.jiostar.com/ ಸಂಪರ್ಕಿಸಬಹುದು

