ಕಮಲ್ -ಶ್ರೀದೇವಿ ಚಿತ್ರದಿಂದ ಹಿರಿಯ ಕಲಾವಿದರಿಗೆ ಗೌರವ: ಸೆಪ್ಟಂಬರ್ 19ಕ್ಕೆ ಸಿನಿಮಾ ಬಿಡುಗಡೆ
ಯುವ ನಟ ಸಚಿನ್ ಚಲುವರಾಯಸ್ವಾಮಿ- ಪ್ರತಿಭಾನ್ವಿತ ನಟಿ ಸಂಗೀತ ಭಟ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಕಮಲ್ -ಶ್ರೀದೇವಿ” ಚಿತ್ರ ಸೆಪ್ಟಂಬರ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಹಿರಿಯ ಕಲಾವಿದರನ್ನು ಗೌರವಿಸುವ ಮೂಲಕ ಮಾನವೀಯತೆ ಮೆರೆದಿದೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿರುವ ನಟ ರಾಜವರ್ಧನ್, ತಂದೆ, ಹಾಗು ಪೋಷಕ ಕಲಾವಿದ ಪೋಷಕ ಕಲಾವಿದ ಡಿಂಗರಿ ನಾಗರಾಜ್ ಸಮಕಾಲಿನ, ಹಾಘು ಕಷ್ಟದಲ್ಲಿರುವ ಹಿರಿಯ ಕಲಾವಿದರಾದ ಬೆಂಗಳೂರು ನಾಗೇಶ್, ಎಮ್.ಎನ್ ಲಕ್ಷ್ಮೀದೇವಮ್ಮ, ಬೀರದಾರ್, ಉಮೇಶ್, ಹೊನ್ನವಳ್ಳಿ ಕೃಷ್ಣ ಅವರನ್ನು ಗೌರವಿಸಿದ ಆರ್ಥಿಕ ಸಹಾಯ ನೀಡಿದರು
ಈ ಸಂದರ್ಭದಲ್ಲಿ ನಿರ್ದೇಶಕ ತರುಣ್ ಸುಧೀರ್, ನಟಿ ರಾಗಿಣಿ ದ್ವಿವೇದಿ ಚಿತ್ರತಂಡಕ್ಕೆ ಶುಭಹಾರೈಸಿದರು. ಈ ವೇಳೆ ನಟ ಸಚಿನ್ ಚಲುವರಾಯಸ್ವಾಮಿ, ನಟಿ ಸಂಗೀತ ಭಟ್, ಸೇರಿದಂತೆ ಇಡೀ ತಂಡ ಹಾಜರಿತ್ತು.
ಈ ವೇಳೆ ಮಾತಿಗಿಳಿದ ರಾಜವರ್ಧನ್, ಪೋಷಕ ನಟನ ಮಗನಾಗಿ ನಾಯಕನಾಗಿದ್ದೇವೆ. ಹೀಗಾಗಿ ಹಿರಿಯ ಜೀವಗಳಿಗೆ ಸನ್ಮಾನ ಮಾಡಿದ್ದೇವೆ. ಕಮಲ್ ಶ್ರೀದೇವಿ ತುಂಬು ಸಿನಿಮೋತ್ಸಾಹದಲ್ಲಿ ಮಾಡಿರುವಕೆಲಸ . ಇದು ಕಂಡಿತ ವರ್ಕೌಟ್ ಆಗಲಿದೆ.ಈವರೆಗೂ ಪ್ರೇಕ್ಷಕರು ಸಿನಿಮಾ ಮೇಲೆ ತೋರಿಸುತ್ತಿರುವ ಕುತೂಹಲಕ್ಕೆ, ಮೂಖವಿಸ್ಮಿತರಾಗಿದ್ದೇವೆ ಇದೇ 19ರಂದು ಸಇನಿಮಾ ಬಿಡುಗಡೆಯಾಗುತ್ತಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು

ನಟಿ ಸಂಗೀತ ಭಟ್ ಮಾತನಾಡಿ ಸಿನಿಮಾ ಚಿತ್ರ ಬಿಡುಗಡೆಯಾದ ಮೇಲೆ ಈ ಕುರಿತು ಮಾತಾಡೋದು ತುಂಬಾ ಇದೆ ಎಂದು 19ಕ್ಕೆ ತಪ್ಪದೇ ನೋಡಿ ಎಂದರು.
ಈ ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ನಾಯಕನಟನಾಗಿ ಅಭಿನಯಿಸಿದ್ದಾರೆ.ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು,

ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ. ಕೀರ್ತನ್ ಸಂಗೀತ ಸಂಯೋಜನೆ ಮಾಡಿದ್ದು, ನಾಗೇಶ್ ಆಚಾರ್ಯ ಛಾಯಾಗ್ರಹಣ, ಕೆವಿನ್ ಸಂಕಲನ ಚಿತ್ರಕ್ಕಿದೆ.


