ಜಮಾನದಲ್ಲಿ ಜನಪ್ರಿಯತೆ ಪಡೆದಿದ್ದ “ಕ್ಯಾಸೆಟ್” : ಫುಲ್ ಮೀಲ್ಸ್ ಮೂಲಕ ಪುನರಾಗಮನ - CineNewsKannada.com

ಜಮಾನದಲ್ಲಿ ಜನಪ್ರಿಯತೆ ಪಡೆದಿದ್ದ “ಕ್ಯಾಸೆಟ್” : ಫುಲ್ ಮೀಲ್ಸ್ ಮೂಲಕ ಪುನರಾಗಮನ

ಒಂದು ಕಾಲದಲ್ಲಿ ಚಿತ್ರದ ಆಡಿಯೊ ಹಿಟ್ ಆಯಿತೊ ಇಲ್ಲವೋ ಎಂದು ನಿರ್ಧಾರವಾಗುತ್ತಿದ್ದದ್ದು ಎಷ್ಟು ಕ್ಯಾಸೆಟ್‍ಗಳು ಮಾರಾಟವಾಯಿತು ಎನ್ನುವುದರ ಮೇಲೆ ನಿಂತಿತ್ತು. ಕಾಲ ಬದಲಾದಂತೆ ಡಿಜಿಟಲ್ ಯುಗ ಬಂದ ನಂತರ ಕ್ಯಾಸೆಟ್ ಯುಗ ತೆರೆ ಮರೆಗೆ ಸರಿದಿತ್ತು.

ಇದೀಗ “ಫುಲ್ ಮೀಲ್ಸ್” ಚಿತ್ರದ ಮೂಲಕ ಜಮಾನದಲ್ಲಿ ಜನಪ್ರಿಯತೆ ಪಡೆದಿದ್ದ ಕ್ಯಾಸೆಟ್ ಅನ್ನು ಮತ್ತೆ ಪರಿಚಯಿಸಲಾಗಿದೆ, ಅಂದರೆ ಫುಲ್ ಮೀಲ್ಸ್ ಚಿತ್ರದ ಹಾಡುಗಳನ್ನು ಕ್ಯಾಸೆಟ್ ಮೂಲಕ ಬಿಡುಗಡೆ ಮಾಡುವ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡಿದೆ’

ಫುಲ್ ಮೀಲ್ಸ್’ ಚಿತ್ರತಂಡ ಚಿತ್ರದ `ವಾಹ್ ಏನೋ ಹವಾ’ ಹಾಡನ್ನು ಕ್ಯಾಸೆಟ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲರನ್ನೂ ಹಳೆಯ ನೆನಪುಗಳಿಗೆ ದೂಡುವುದರೊಂದಿಗೆ ಕ್ರಿಯಾತ್ಮಕ ಪ್ರಯತ್ನದ ಮೂಲಕ ಗಮನ ಸೆಳೆದಿದೆ.

ಫುಲ್ ಮೀಲ್ಸ್ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಗಿತ ನಿರ್ದೇಶಕ ಗುರುಕಿರಣ್, ನಾಯಕ ಲಿಖಿತ್ ಶೆಟ್ಟಿ, ನಿರ್ದೇಶಕ ಎನ್ ವಿನಾಯಕ ನಾಯಕಿಯರಾದ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ ಹಾಡಿನ ಕ್ಯಾಸೆಟ್ ಅನ್ನು ಪ್ರದರ್ಶಿಸಿ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುರುರಣ್ ಟೇಪ್ ರೆಕಾರ್ಡರ್ ನಲ್ಲಿ ಹಾಡನ್ನು ಹಾಕುವ ಮುಖಾಂತರ ಹಾಡನ್ನು ಲೋಕಾರ್ಪಣೆ ಮಾಡಿ, ನೆರೆದಿದ್ದ ಎಲ್ಲರೂ ಕೆಲಕಾಲ ಹಳೆಯ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿದರು.. ಬಿಡುಗಡೆಯಾದ `ವಾಹ್ ಏನೋ ಹವಾ’ ಮೆಲೋಡಿ ಪ್ರೇಮಗೀತೆ ಎಲ್ಲರ ಗಮನ ಸೆಳೆಯಿತು..

ಕವಿರಾಜ್ ಸಾಹಿತ್ಯವಿರುವ ಹಾಡು ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.. ವಿಜೇತ್ ಅರಸ್ ಮತ್ತು ಸುನಿಧಿ ಗಣೇಶ್ ಹಾಡಿಗೆ ಧ್ವನಿಯಾಗಿದ್ದಾರೆ..

ಬಳಿಕ ಮಾಹಿತಿ ಹಂಚಿಕೊಂಡ ಸಂಗೀತ ನಿರ್ದೇಶಕ ಗುರುಕಿರಣ್ ,ರೀತಿ ಬದಲಾಗಬಹುದು ಆದರೆ ಸಂಗೀತ ಎಂದಿಗೂ ಬದಲಾಗುವುದಿಲ್ಲ, ಈಗಿನ ಪೀಳಿಗೆಯ ಟ್ರೆಂಡ್ ಗೆ ತಕ್ಕಂತೆ ಮಾಡಿರುವ ಫುಲ್ ಮೀಲ್ಸ್ ನ ಹಾಡುಗಳನ್ನು ಪ್ರೆಕ್ಷಕರು ಮೆಚ್ಚುಕೊಳ್ಳುತ್ತಾರೆ ಎಂದರು.

ಫುಲ್ಸ್ ಮೀಲ್ಸ್ ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರ ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನೆಮಾ. ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.

ನವೆಂಬರ್ ಇಪ್ಪತ್ತೊಂದಕ್ಕೆ ಸಿನೆಮಾ ಬಿಡುಗಡೆ ದಿನಾಂಕ ನಿಗದಿ ಮಾಡಿಕೊಂಡಿರುವ ಚಿತ್ರತಂಡ ಮುಂದಿನ ಹಂತಗಳಲ್ಲಿ ಚಿತ್ರದ ಉಳಿದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯೊಂದಿಗೆ ಮತ್ತಷ್ಟು ಪ್ರಚಾರ ಮಾಡುತ್ತಾ ನವೆಂಬರ್ ಇಪ್ಪತ್ತೊಂದಕ್ಕೆ `ಫುಲ್ ಮೀಲ್ಸ್’ ಸವಿಯಲು ಜನರನ್ನು ಚಿತ್ರಮಂದಿರದತ್ತ ಬರುವಂತೆ ಮಾಡುವ ಗುರಿ ಹೊಂದಿದೆ.

ಒಂದು ಸಮಯದಲ್ಲಿ ಉದಯ ಮ್ಯೂಸಿಕ್‍ನಲ್ಲಿ ಜನಪ್ರಿಯ ನಿರೂಪಕರಾಗಿದ್ದ ಲಿಖಿತ್ ಶೆಟ್ಟಿ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಪಿ. ಆರ್. ಕೆ ಪ್ರೊಡಕ್ಷನ್ಸ್ ನಲ್ಲಿ ಮೂಡಿಬಂದ `ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ಕಳೆದ ವರ್ಷ ತೆರೆಕಂಡ ಕೆ. ಎಮ್. ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದಲ್ಲಿ ಕೂಡ ನಾಯಕನಾಗಿ ಗಮನ ಸೆಳೆದಿದ್ದರು. `ಫುಲ್ ಮೀಲ್ಸ್’ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ಲಿಖಿತ್ ಶೆಟ್ಟಿ ತಮ್ಮ ಹಿಂದಿನ ಸಿನೆಮಾಗಳಿಗಿಂತ ಹೆಚ್ಚಿನ ಯಶಸ್ಸನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, , ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ,

ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin