ಗಮನ ಸೆಳೆದ “ಜುಗಾರಿ ಕ್ರಾಸ್” ಚಿತ್ರದ ಟೀಸರ್
“ಕರಾವಳಿ” ಸಿನಿಮಾ ಮೂಲಕ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ಗುರುದತ್ ಇದೀಗ “ಜುಗಾರಿ ಕ್ರಾಸ್” ಅನ್ನು ದೊಡ್ಡ ಪರದೆ ಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸುಪ್ರಸಿದ್ಧ ಜುಗಾರಿ ಕ್ರಾಸ್ ತೆರೆಮೇಲೆ ಬರುತ್ತಿದೆ.
ಇತ್ತೀಚಿಗೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆಯಾಗಿವೆ. ಜನಪ್ರಿಯ ಕಾದಂಬರಿಗಳನ್ನು ತೆರೆಮೇಲೆ ತರುವ ಸಾಹಸಕ್ಕೆ ಯಾರು ಕೈ ಹಾಕುತ್ತಿಲ್ಲ. ಅಂತಹ ಸಾಹಸಕ್ಕೆ ಗುರುದತ್ ಗಾಣಿಗ ಕೈ ಹಾಕಿದ್ದಾರೆ

ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ, ಜುಗಾರಿ ಕ್ರಾಸ್ಗೆ ನಾಯಕನಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆ ಆಗಿರುವ ಟೀಸರ್ ನಲ್ಲಿ ತಲೆಬುರಡೆ, ಹರಿಯುತ್ತಿರುವ ರಕ್ತ, ಕೆಂಪು ರತ್ನ ಜೊತೆಗೆ ಕುತೂಹಲ ಮತ್ತಷ್ಟು ದುಪ್ಪಟ್ಟು ಮಾಡುವಂತೆ ಇರುವ ಬ್ಯಾಗ್ರೌಂಡ್ ಮ್ಯೂಸಿಕ್.. ಪವರ್ ಪ್ಯಾಕ್ಡ್ ಟೀಸರ್ ನೋಡುತ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.
ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಕರಾವಳಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಗುರುದತ್ ಮತ್ತು ರಾಜ್ ಬಿ ಶೆಟ್ಟಿ ಇದೀಗ ಜುಗಾರಿ ಕ್ರಾಸ್ ಮೂಲಕ ಮತ್ತೆ ಕೈಜೋಡಿಸಿರುವುದು ಕುತೂಹಲ ಹೆಚ್ಚಿಸಿದೆ. ಕರಾವಳಿ ಸಿನಿಮಾ ರಿಲೀಸ್ಗೂ ಮೊದಲೇ ರಾಜ್ ಬಿ ಶೆಟ್ಟಿ ಮತ್ತು ನಿರ್ದೇಶಕ ಗುರುದತ್ ಜುಗಾರಿ ಕ್ರಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ಕರಾವಳಿ ಸಿನಿಮಾದ ಕಾಂಬಿನೇಷನ್ ಮತ್ತೆ ಜುಗಾರಿ ಕ್ರಾಸ್ನಲ್ಲೂ ಮುಂದುವರೆದಿದೆ ಅಂದರೆ ಗುರುದತ್ ಗಾಣಿಗ ಕೆಲಸ ಮತ್ತು ಟೀಂ ಮೇಲೆ ರಾಜ್ ಬಿ ಶೆಟ್ಟಿ ಇವರಿಗೆ ಇರುವ ನಂಬಿಕೆ ಮತ್ತು ಶ್ರದ್ಧೆ ಗೊತ್ತಾಗುತ್ತಿದೆ. ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಕರಾವಳಿ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿಸಿರುವ ಗುರುದತ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳ ಜೊತೆಗೆ ಜುಗಾರಿ ಕ್ರಾಸ್ ನಲ್ಲೂ ತೊಡಗಿಕೊಳ್ಳಲಿದ್ದಾರೆ. ಸಿನಿಮಾ ನಿರ್ದೇಶನದ ಜೊತೆಗೆ ಗುರುದತ್ತ ಗಾಣಿಗ ಫಿಲ್ಮಂಸ್ ಅಡಿಯಲ್ಲಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ ಗುರುದತ್ತ ಗಾಣಿಗ .
ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದನ್ ಸಿನಿಮಾಗೂ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.

