Shivanna releases character teaser for the movie “Dilmar”

“ದಿಲ್ಮಾರ್” ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ಶಿವಣ್ಣ - CineNewsKannada.com

“ದಿಲ್ಮಾರ್” ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ಶಿವಣ್ಣ

“ದಿಲ್ಮಾರ್”ಚಿತ್ರ ಇದೇ ತಿಂಗಳ 24 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದೆ, ನಟ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಚಂದ್ರಮೌಳಿ ನಿರ್ದೇಶನ ಮಾಡಿರುವ ಚಿತ್ರದಲ್ಲಿ ರಾಮ್ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಮಾತಿಗಿಳಿದ ನಟ ಶಿವರಾಜ್ ಕುಮಾರ್ ಮಾತನಾಡಿ, ರಾಮ್ ಹಾರ್ಡ್ ವರ್ಕ್ ಮಾಡಿ ಮುಂದಿದ್ದಾರೆ. ಎಷ್ಟೋ ಏರುಪೇರು ನೋಡಿ ಬಂದವರು. ಕಳೆದ 15 ವರ್ಷಗಳಿಂದ ನೋಡ್ತಾ ಇದ್ದೇನೆ. ಗಂಡ ಹೆಂಡ್ತಿ ಇಬ್ಬರು ಹೃದಯವಂತರು. ಹಾರ್ಟ್ ಚೆನ್ನಾಗಿ ಇದ್ದರೆ ನಮ್ಮ ಹಾರ್ಟ್ ಕನೆಕ್ಟ್ ಆಗುತ್ತದೆ ಎಂದರು

ಟ್ರೇಲರ್ ನೋಡಿದರೆ ಅರ್ಜುನ್ ರೆಡ್ಡಿ ಫೀಲ್ ಕೊಡುತ್ತದೆ. ಅಕ್ಟೋಬರ್ 24 ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗುತ್ತಿದೆ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು

ನಟಿ ಅದಿತಿ ಪ್ರಭುದೇವ ಮಾತನಾಡಿ, ಸೈಕ್ ಪ್ರೀತಿ. ಈ ಲವ್ ಸ್ಟೋರಿಯಿಂದ ಇಡೀ ಸ್ಯಾಂಡಲ್ ವುಡ್ ಲವ್ ಸ್ಟೋರಿ ಕಡೆ ಮುಖ ಮಾಡುವ ರೀತಿ ಆಗಲಿದೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದರು.

ನಟ ರಾಮ್ ಮಾತನಾಡಿ, ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟಪಟ್ಟಿದ್ದಾನೆ. ಶಿವಣ್ಣ ಗೀತಾಕ್ಕ ಶಿವ ಪಾರ್ವತಿ ರೀತಿ ಜೊತೆಯಲ್ಲಿ ನಿಂತಿದ್ದಾರೆ. ತಂದೆ ತಾಯಿ ಜನ್ಮ ಕೊಟ್ಟಿದ್ದಾರೆ. ಶಿವಣ್ಣ ಗೀತಾಕ್ಕ ಜೀವನ ಕೊಟ್ಟಿದ್ದಾರೆ. ದೊಡ್ಮನೆ ಯಾವತ್ತಿದ್ದರೂ ದೊಡ್ಮನೆನೇ. ನನಗೆ ಮಗನಗಿಂತ ಹೆಚ್ಚಾಗಿ ಜೊತೆಯಾಗಿ ನಿಂತಿದ್ದಾರೆ.ಅವರ ಪಕ್ಕದಲ್ಲಿ ನಿಂತಿದ್ದೇನೆ ಎಂದರೆ ನಾನು ಗೆದ್ದಿದ್ದೇನೆ ಎಂದರ್ಥ. ಪ್ರತಿಯೊಬ್ಬರಿಗೂ ಈ ಸಿನಿಮಾ ಇಷ್ಟವಾಗುತ್ತದೆ ಎಂದರು.

ನಿರ್ದೇಶಕ ಚಂದ್ರಮೌಳಿ ಮಾತನಾಡಿ, ಚಿತ್ರದಲ್ಲಿ ಕಂಟೆಂಟ್ ಇದೆ ಅನ್ನೋದನ್ನು ಟ್ರೇಲರ್ , ಟೀಸರ್ ಮೂಲಕ ತೋರಿಸಿಕೊಟ್ಟಿದ್ದೇವೆ. ಹೊಸ ಹೀರೋಗೆ ಯಾಕೆ ಮಾಡ್ದೆ ಎಂದು ಎಲ್ಲರೂ ಕೇಳುತ್ತಿದ್ದಾರೆ ಹೀರೋ ರಾಮ್ ಹಾರ್ಡ್ ವರ್ಕ್ ಮಾಡಿ ಚಿತ್ರರಂಗಕ್ಕೆ ಬಂದವರು ಎಂದರು

ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್ ತಾರಾಬಳಗ ಚಿತ್ರದಲ್ಲಿದೆ. ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ.

ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಗೆ ಸಂಗೀತ ನೀಡಿದ್ದು, ತನ್ವಿಕ್ ಛಾಯಾಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ನಿರ್ಮಾಣ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin