” ಐ ಆಮ್ ಗಾಡ್” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದ ನಟ ಉಪೇಂದ್ರ
ಕನ್ನಡ ಚಿತ್ರರಂಗದ ಭವರಸೆಯ ನಾಯಕ ನಟ ರವಿ ಗೌಡ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ” ಐ ಆಮ್ ಗಾಡ್” ಚಿತ್ರದ ಟ್ರೈಲರ್ ಅನ್ನು ನಟ,ನಿರ್ದೇಶಕ ಉಪೇಂದ್ರ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

ಉಪೇಂದ್ರ ಅವರ ಜನಪ್ರಿಯ ಡೈಲಾಗ್ ನ ಸಾಲಿನಲ್ಲಿ ಒಂದಾದ ” ಐ ಆಮ್ ಗಾಡ್” ಇಟ್ಟುಕೊಂಡು ರವಿಗೌಡ ಸಿನಿಮಾ ಮಾಡಿದ್ದಾರೆ. ಈ ಮೂಲಕ ಗುರುಗಳ ಹಾದಿಯಲ್ಲಿಯೇ ಹೆಜ್ಜೆ ಹಾಕುವ ಭರವಸೆ ಮೂಡಿಸಿದ್ದಾರೆ.
” ಐ ಆಮ್ ಗಾಡ್” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ .ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರ ಗಮನ ಸೆಳೆದಿವೆ. ತಮ್ಮ ಶಿಷ್ಯನ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಲು ಉಪೇಂದ್ರ ಬೆಂಗಳೂರಿನಿಂದ ಮೈಸೂರಿಗೆ ಬಂದದ್ದು ವಿಶೇಷವಾಗಿತ್ತು.
ನಟ ರವಿ ಗೌಡ ಕೂಡ ಉಪೇಂದ್ರ ಗರಡಿಯಲ್ಲಿ ಪಳಗಿರುವ ಪ್ರತಿಭೆ. ಉಪೇದ್ರ. ಅವರ ಜೊತೆ ಉಪ್ಪಿ 2 ಸಿನಿಮಾದಲ್ಲಿ ಕೆಲಸ ಮಾಡಿ ನಂತರ ತಾವೇ ನಿರ್ದೇಶನ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಇದೀಗ ಐ ಆಮ್ ಗಾಡ್ ಸಿನಿಮಾ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡುವ ಮೂಲಕ ಕನಸು ನನಸು ಮಾಡಿಕೊಂಡಿದ್ದಾರೆ.

ಶಿಷ್ಯನ ಚಿತ್ರಕ್ಕೆ ಮನಸಾರೆ ಪ್ರಶಂಸೆ
ಶಿಷ್ಯ ರವಿಗೌಡ ನಟಿಸಿ, ನಿರ್ದೇಶಿರುವ ” ಐ ಆಮ್ ಗಾಡ್” ಚಿತ್ರದ ಟ್ರೇಲರ್ ನೋಡಿ ರಿಯಲ್ ಸ್ಟಾರ್ ಉಪೇಂದ್ರ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಯಕ ರವಿ ಗೌಡ ಮಾತನಾಡಿ ಉಪೇಂದ್ರ ಸರ್ ಅವರನ್ನು ಮೊದಲು ಭೇಟಿ ಮಾಡಿದ ಸಂದರ್ಭ ವಿವರಿಸಿ ‘ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಾಗ ಯಾವುದೇ ಸಿನಿಮಾ ಯೂನಿವರ್ಸಿಟಿ ಬೇಡ. ಬದಲಾಹಿ ಉಪೇಂದ್ರ ಹತ್ತಿರ ಹೋಗೋದು ಬೆಸ್ಟ್ ಅಂತ ಹೋಗಿ ಮನವಿ ಮಾಡಿ ಸೇರಿಕೊಂಡೆ’ ಎಂದರು..
ಜೊತೆಗೆ ಐ ಆಮ್ ಗಾಡ್ ಸಿನಿಮಾ ಕಷ್ಟ ಪಟ್ಟು ಮಾಡಿದ್ದೇವೆ ಬಂದು ನೋಡಿ ಅಂತ ನಾವು ಹೇಳಲ್ಲ.. ಆದರೆ ನಿಮ್ಮ ಗುಂಪಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಅಂತು ಇದ್ದೇ ಇರ್ತಾರೆ ಅವರಿಗೆ ಕಾಲ್ ಮಾಡಿ ಕೇಳಿ ಸಿನಿಮಾ ಹೇಗಿದೆ ಅಂತ ಅಷ್ಟೇ ಸಾಕು ನಮಗೆ’ ಅಂದರು.
ಸದ್ಯ ಬಿಡುಗಡೆ ಆಗಿರುವ ಚಿತ್ರದ ಟ್ರೇಲರ್ ನೋಡಿದರೆ ಇದೊಂದು ಪಕ್ಕ ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿ ಎನ್ನುವ ಹಿಂಟ್ ಕೊಡ್ತಿದೆ.. ಉಪೇಂದ್ರ ಅವರ ಶಿಷ್ಯ ಆಗಿರೋದ್ರಿಂದ ಉಪೇಂದ್ರ ಶೈಲಿಯಲ್ಲಿ ಸಿನಿಮಾ ಮೇಕಿಂಗ್ ಮಾಡಿದ್ದಾರೆ ಎನ್ನುವುದು ಖಚಿತವಾಗಿದೆ
ರವಿಗೌಡಗೆ ನಾಯಕಿಯಾಗಿ ವಿಜೇತಾ ಕಾಣಿಸಿಕೂಂಡಿದ್ದಾರೆ. ಜೂತೆಗೆ ರವಿಶಂಕರ್ , ಅವಿನಾಶ್ , ಅರುಣ ಬಾಲರಾಜ್ ಹಾಗೂ ನಿರಂಜನ್ ಕುಮಾರ್ ಅಭಿನಯ ಮಾಡಿಸಿನಿಮಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ , ಜಿತಿನ್ ದಾಸ್ ಕ್ಯಾಮೆರಾವರ್ಕ್ ಮಾಡಿದ್ದಾರೆ. ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ

