“ದಿ ಟಾಸ್ಕ್” ಚಿತ್ರದ ಟೀಸರ್ ಬಿಡುಗಡೆ : ಹಲವು ನಿರ್ದೇಶಕರ ಮೆಚ್ಚುಗೆ
ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ “ದಿ ಟಾಸ್ಕ್ “ ಚಿತ್ರ ನವೆಂಬರ್ 21ಕ್ಕೆ ತೆರೆಗೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡಯಗಡೆಯಾಗಿದ್ದು ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್ , ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಭಾಗಿಯಾಗಿ ತಂಡಕ್ಕೆ ಶುಭ ಹಾರೈಸಿದರು
ಎಂ.ಚಂದ್ರಶೇಖರ್ ಮಾತನಾಡಿ ಟಾಸ್ಕ್ ಅಂದರೆ ಆಪರೇಷನ್ , ಮಿಷನ್ ಎಂದರ್ಥ. ಯಾವುದೇ ಸಿನಿಮಾದಲ್ಲಿ ಮೆಸೇಜ್ ಇರಬೇಕು. ಇದರಿಂದ ಸಮಾಜದಲ್ಲಿ ಪ್ರಭಾವ ಜಾಸ್ತಿ ಇರುತ್ತದೆ. ಇಬ್ಬರು ನಾಯಕರಿಗೆ ಒಳ್ಳೆಯದಾಗಲಿ ಎಂದರು
ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಚಿತ್ರರಂಗಕ್ಕೆ ಮಕ್ಕಳು ಹೋಗ್ತಾರೆ ಎಂದರು ತಂದೆ ತಾಯಿ ಬೇಡ ಎನ್ನುತ್ತಾರೆ. ಈ ವಿಚಾರದಲ್ಲಿ ರಾಜೇಶ್ ಅವರ ಮಗ ಅದೃಷ್ಟ ಮಾಡಿದ್ದಾರೆ. ಅವರ ತಂದೆ ಮಗನ ಸಿನಿಮಾ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು

ಮತ್ತೋರ್ವ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ನಿರ್ದೇಶಕಕ ರಾಘು ಶಿವಮೊಗ್ಗ ಅಭಿನಯ ಎಷ್ಟೋ ನೈಜವಾಗಿ ಇರುತ್ತದೆಯೋ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಕೂಡ ನೈಜವಾಗಿ ಇರುತ್ತದೆ. ಕಥೆ ಮೇಲೆ ನಿರೀಕ್ಷೆ ಇದೆ ಎಂದರು
ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ರಾಘು ಅವರ ಶಾರ್ಟ್ ಮೂವೀ ಸ್ಟೇಟ್ ಅವಾರ್ಡ್ ತೆಗೆದುಕೊಂಡವರು. ಚೂರಿ ಕಟ್ಟೆ ಮೂವೀ ಒಳ್ಳೆ ಕಲ್ಟ್ ಸಿನಿಮಾ. ಇದೀಗ ಟಾಸ್ಕ್ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ದಿ ಟಾಸ್ಕ್ ಚಿತ್ರವಾಗಲು ನಿರ್ಮಾಪಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಟೆಕ್ನಿಷಿಯನ್ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ದಿ ಟಾಸ್ಕ್ ಆಕ್ಷನ್ ಥ್ರಿಲ್ಲರ್ ಜಾನರ್. ಹಲವು ನೈಜ ಘಟನೆ ಇಟ್ಕೊಂಡು ಕಥೆ ಎಣೆದಿದ್ದೇನೆ ಎಂದು ಮಾಹಿತಿ ನೀಡಿದರು.
ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್, ಸಂಪತ್ ಮೈತ್ರಿಯಾ, ಬಿ ಎಂ ಗಿರಿರಾಜ್, ಭರತ್ ಜಿಬಿ, ಪಿಡಿ ಸತೀಶ್ ಚಂದ್ರ,ಕಿರಣ್ ನಾಯ್ಕ್, ಅಶ್ವಿನ್ ಹಾಸನ್ ಸೇರಿದಂತೆ ನಿರ್ದೇಶಕ ರಾಘು ಶಿವಮೊಗ್ಗ ಕೂಡಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ದಿ ಟಾಸ್ಕ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಪ್ರಕಾಶ್ ಕಾರಿಂಜ ಸಂಕಲನ ಚಿತ್ರಕ್ಕಿದೆ.

