Kite Brothers: No glamour, just the grammar of life - Director Viren Sagar Bagade

ಕೈಟ್ ಬ್ರದರ್ಸ್: ಗ್ಲಾಮರ್ ಇಲ್ಲ ಬದುಕಿನ ಗ್ರಾಮರ್ ಇದೆ- ನಿರ್ದೇಶಕ ವಿರೇನ್ ಸಾಗರ್ ಬಗಾಡೆ - CineNewsKannada.com

ಕೈಟ್ ಬ್ರದರ್ಸ್: ಗ್ಲಾಮರ್ ಇಲ್ಲ ಬದುಕಿನ ಗ್ರಾಮರ್ ಇದೆ- ನಿರ್ದೇಶಕ ವಿರೇನ್ ಸಾಗರ್ ಬಗಾಡೆ

ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಕಾಯದೆ ಸಮಾಜ ಕೈ ಜೋಡಿಸಬೇಕು ಎನ್ನುವ ಸಂದೇಶದ ಜೊತೆಗೆ ಇಬ್ಬರು ಹುಡುಗರೂ ಯಾವೆಲ್ಲಾ ಪ್ರಯತ್ನ ಮಾಡಲಿದ್ದಾರೆ ಎನ್ನುವ ತಿರುಳು ಆಧರಿಸಿದ ಚಿತ್ರ” ಕೈಟ್ ಬ್ರದರ್” ನವಂಬರ್ 14ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ

ಚಿತ್ರದ ಹಾಡುಗಳು, ಟ್ರೈಲರ್ ಮತ್ತು ಟೀಸರ್ ಬಿಡುಗಡೆ ಇತ್ತು, ಈ ವೇಳೆ ಚಿತ್ರತಂಡ ಮಾತಿಗಿಳಿಯಿತು. ಆರಂಭದಲ್ಲಿ
ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಮಾತನಾಡಿ 9 ವರ್ಷದ ಸುದೀರ್ಘ ಹೋರಾಟದಲ್ಲಿ ಅನೇಕ ಸವಾಲು ಸಂಕಷ್ಡ ಎದುರಿಸಿದೆ. ಅಂತಹ ಸಮಯದಲ್ಲಿ ಸಹೋದರ ವಿನೋದ್ ಬಗಾಡೆ ನಿರ್ಮಾಣದಲ್ಲಿ ಸಹಕಾರಿಯಾದರು. ಅಶೋಕ್ ಕಶ್ಯಪ್ ಛಾಯಾಗ್ರಹಣ ನೀಡಿದ್ದಾರೆ. ಒಳ್ಳೆಯಸಿನಿಮಾ ಮಾಡೋಣ ಎಂದು ಕೈಜೋಡಿಸಿದರು. ಜೊತೆಗೆ ನಿರ್ಮಾಪಕರು ಜೊತೆ ಸೇರಿದ್ದರಿಂದ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ.

ಗ್ಲಾಮರ್ ಇಲ್ಲ ಆದರೆ ಬದುಕಿನ ಗ್ರಾಮರ್ ಇರುವ ಸಿನಿಮಾ. ಮಕ್ಕಳ ಸಿನಿಮಾ, ಮಕ್ಕಳಿಗೆ ಮನರಂಜನೆಯೂ ಜೊತೆಗೆ ಬಾಲ್ಯದ ಜೀವನವನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಸೆನ್ಸಾರ್ ಮಂಡಳಿ ಮಕ್ಕಳ ಚಿತ್ರ ಎಂದು ಪ್ರಮಾಣಿಕರಿಸಿದೆ. ಇದೊಂದು ಕಥನದ ಚಿತ್ರ,ದೊಡ್ಡವರಿಗೂ ಇಷ್ಠ ಆಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಸರ್ಕಾರಿ ಶಾಲೆ ಉಳಿಯಬೇಕು ಎನ್ನುವುದು ಸಿನಿಮಾ ಆಶಯವೂ ಕೂಡ ಆಗಿದೆ. 2017 ಮತ್ತು 18 ರಲ್ಲಿ ಚಿತ್ರೀಕರಣ ಆರಂಭ ಮಾಡಿತ್ತು, ಕೋವಿಡ್ ಸೇರಿದಂತೆ ನಾನಾ ಕಾರಣದಿಂದ ತಡ ಆಯಿತು. ಈಗ ಬಿಡುಗಡೆಗೆ ಸಜ್ಜಾಗಿದ್ದು ನವಂಬರ್ 14 ರಂದು ಚಿತ್ರ ಬಿಡುಗಡೆ ಆಗುತ್ತಿದೆ, ಸದ್ಯಕ್ಕೆ ನಾವೇ ವಿತರಣೆಯ ಜವಾಬ್ದಾರಿ ಹೊತ್ತಿದ್ದೇವೆ ಸರ್ಕಾರಿ ಶಾಲೆ ಉಳಿಸಲು ಇಬ್ಬರು ಹುಡುಗರು ನಡೆಸುವ ಕಥೆಯೇ ಕೈಟ್ ಬದ್ರರ್ಸ್ ಎಂದರು

ಶಾಲೆಯಲ್ಲಿ ಕಲಿತವರು ಸಶಕ್ತರಾಗಿ ಬದುಕು ರೂಪಿಸಿಕೊಂಡಾಗ ಶಾಲೆಯ ನಿಸ್ಸಹಾಯಕ ಉಪಾಧ್ಯಯರ ಬೆಂಬಲಕ್ಕೆ ನಿಂತು ಆ ಶಾಲೆಯನ್ನು ಸರಿಪಡಿಸಿ ಮುಂದಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಈ ರೀತಿ ಮನಸ್ಸಿನ ಜನರು ನಮ್ಮ ಸುತ್ತ ಸಾಕಷ್ಟು ಜನರು ಇದ್ದಾರೆ. ಇದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಮತ್ತು ಇತರ ಧಾರವಾಡದ ಹೊಸ ಪ್ರತಿಭೆಗಳೆ ಅಭಿನಯಿಸಿದ್ದಾರೆ. ಮೂರು ಹಾಡುಗಳಿದ್ದು, ವಿಜಯ್ ಭರಮಸಾಗರ, ಸಿಂಪಲ್ ಸುನಿ ಹಾಗೂ ಹಾಡುಗಳನ್ನು ಬರೆದಿದ್ದೇವೆ. ಅನೀಶ್ ಚೆರಿಯನ್ ಸಂಗೀತ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು

ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮಾತನಾಡಿ , ಈವರೆಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದೇನೆ. ಅದರಲ್ಲಿ ಮೊದಲ ನಿರ್ದೇಶಕರ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡಿರುವುದು ವಿರೇನ್ ಸಾಗರ್ ಬಗಾಡೆ ಉತ್ತಮ ನಿರ್ದೇಶಕರು. ಒಳ್ಳೆಯ ಕಥೆ ಮಾಡಿದ್ದಾರೆ. ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿಯಾಗಿದೆ .ಅನ್ಯ ಭಾಷಿಕರು ರಾಜ್ಯದಲ್ಲಿ ತುಂಬಿಕೊಂಡು ಕನ್ನಡ ಕೊಲೆ ಮಾಡ್ತಾ ಇದ್ದಾರೆ. ಅಪ್ಪಟ ಕನ್ನಡ ಭಾಷೆಯ ಬಗೆಗಿನ ಸಿನಿಮಾ, ಮಕ್ಕಳು ಪಾತ್ರದಲ್ಲಿ ಜೀವಿಸಿದ್ದಾರೆ. ಗಾಳಿಪಟ ಹಳ್ಳಿ ಮಕ್ಕಳಿಗೆ ಇರುವ ವಿಶೇಷ ಪ್ರತಿಬೆ. ಬೇರೆ ರಾಜ್ಯಕ್ಕೆ ಹೋಗಿ ಗೆಲ್ತಾರಾ ಅನ್ನುವುದು ಚಿತ್ರದ ತಿರುಳು ಎಂದು ಮಾಹಿತಿ ನೀಡಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin