"Love You Muddu" is a heart-warming story - Director Kumar

“ಲವ್ ಯು ಮುದ್ದು ” ಚಿತ್ರ ಮನಸ್ಸಿಗೆ ಮುಟ್ಟುವ ಕಥೆ- ನಿರ್ದೇಶಕ ಕುಮಾರ್ - CineNewsKannada.com

“ಲವ್ ಯು ಮುದ್ದು ” ಚಿತ್ರ ಮನಸ್ಸಿಗೆ ಮುಟ್ಟುವ ಕಥೆ- ನಿರ್ದೇಶಕ ಕುಮಾರ್

“ಮಹಾರಾಷ್ಟ್ರದಲ್ಲಿ ನಡೆದ ಘಟನೆ ಆಧರಿಸಿ ಸಿನಿಮಾ ಮಾಡಲಾಗಿದೆ. ಮನಸ್ಸಿಗೆ ಮುಟ್ಟುವ ಕಥೆ..” ಇದುವರೆಗೂ ಈ ಜಾನರ್ ಸಿನಿಮಾ ಎಲ್ಲಿಯೂ ಬಂದಿಲ್ಲ.. ಎಂದರು ನಿರ್ದೇಶಕ ಕುಮಾರ್.

ನನ್ನ ಐದನೇ ಚಿತ್ರ, ನಿರ್ಮಾಪಕರು ಮೊದಲ ಸಿನಿಮಾದಿಂದ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಇದೀಗ ಲವ್ ಯು ಮುದ್ದು ಚಿತ್ರಕ್ಕೆ ಹಣ ಹಾಕಿದ್ದಾರೆ. ಒಳ್ಳೆ ತಾರಾ ಬಳಗ ಚಿತ್ರದಲ್ಲಿದೆ ಚಿತ್ರ ನವಂಬರ್ 7ರಂದು ಬಿಡುಗಡೆಯಾಗುತ್ತಿದ್ದು ಎಲ್ಲರೂ ನೋಡಿ ಹರಸಿ ಎಂದು ಕೇಳಿಕೊಂಡರು

ಪ್ರೀತಿ ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು ಎಂಬ ಎಳೆ ಇಟ್ಕೊಂಡು ಮಾಡಿರುವ ಚಿತ್ರ “ಲವ್ ಯು ಮುದ್ದು” ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್ ಅವರ ಹೊಸ ಪ್ರಯತ್ನದ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ.ಸಿದ್ದು ಮೂಲಿಮನಿ ಮತ್ತು ರೇಷ್ಮಾ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿರುವ “ಲವ್ ಯು ಮುದ್ದು” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ನಿರ್ದೇಶಕರು ಮಾಹಿತಿ ನೀಡಿದರು ನಿರ್ದೇಶಕ ಕುಮಾರ್.

ಖ್ಯಾತ ಛಾಯಾಗ್ರಹಕ ಜೆ ಜಿ ಕೃಷ್ಣ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭಾಕೋರಿದರು. ಈ ವೇಳೆ ಮಾತಿಗಿಳಿದ ಜೆಜಿ ಕೃಷ್ಣ, ಟ್ರೇಲರ್ ನೋಡಿದಾಗ ಹೀರೋ, ಹೀರೋಯಿನ್ ಚೆನ್ನಾಗಿ ನಟಿಸಿದ್ದಾರೆ. ನಿರ್ದೇಶಕ ಹಾಗೂ ಛಾಯಾಗ್ರಾಹಕ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ಸಿನಿಮಾ ಅದ್ಭುತವಾಗಿ ಇರಲಿದೆ ಎಂಬ ನಂಬಿಕೆ ಇದೆ ನಿರ್ಮಾಪಕರು ಗೆಲ್ಲಬೇಕು ಎಂದರು

ನಟಿ ಸಂಜನಾ ಆನಂದ್ ಮಾತನಾಡಿ, ಚಿತ್ರರಂಗಕ್ಕೆ ಪರಿಚಯಿಸಿದ್ದು ಕುಮಾರ್. ಅವರ ಬರವಣಿಗೆ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಎಷ್ಟು ಸಕ್ಸಸ್ ಕೊಟ್ಟಿತ್ತೋ ಅದರ ನೂರಷ್ಟು ಸಕ್ಸಸ್ ಈ ಚಿತ್ರ ಕೊಡಲಿ ಎಂದು ಹಾರೈಸಿದರು

ಪ್ರೀತಿಯೇ ಸಕಲವು, ಸರ್ವಸ್ವ ಎಂದು ನಂಬಿದ್ದ ಜೋಡಿಯ ಬಾಳಲ್ಲಿ ನಡೆದ ತಿರುವನ್ನು ಕಾಡುವಂತೆ ನಿರ್ದೇಶಕ ಕುಮಾರ್ ಸೊಗಸಾಗಿ ಎಣೆದಿದ್ದಾರೆ. ಸಿನಿಮಾದಲ್ಲಿ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ನಟಿಸಿದ್ದಾರೆ.

ಕಿಶನ್ ಟಿ.ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್. ಇದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ.ಎಸ್.ದೀಪು ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin