Muhurta for the film “Love Case” starring young actors

ಯುವ ನಟರ “ಲವ್ ಕೇಸ್” ಚಿತ್ರಕ್ಕೆ ಮಹೂರ್ತ - CineNewsKannada.com

ಯುವ ನಟರ “ಲವ್ ಕೇಸ್” ಚಿತ್ರಕ್ಕೆ ಮಹೂರ್ತ

ಹಿರಿಯ ಕಲಾವಿದರಾದ ಸಾಯಿಕುಮಾರ್, ಸುಧಾರಾಣಿ, ಶ್ರೀನಗರ ಕಿಟ್ಟಿ, ಟಗರು ಪಲ್ಯ ನಾಗಭೂಷಣ್ ,ಪ್ರಮೋದ್ ಶೆಟ್ಟಿ, ಜೀ ಕನ್ನಡ ಮಹಾನಟಿ ಖ್ಯಾತಿಯ ವಂಶಿ ಸೇರಿದಂತೆ ಹಿರಿ-ಕಿರಿಯ ಕಲಾವಿದರು ನಟಿಸುತ್ತಿರುವ “ಲವ್ ಕೇಸ್” ಚಿತ್ರ ಸೆಟ್ಟೇರಿದೆ.

ಬೆಂಗಳೂರಿನ ಬಂಡೆಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ, ಮೋಹನ್ ಬಾಬು ನಿರ್ಮಾಣದಲ್ಲಿ ಜೈಶ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಚಿತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

ಲವ್ ಕೇಸ್ ಪ್ಯೂರ್ ಲವ್ ಸ್ಟೋರಿ ಅನ್ನೋ ಅಡಿ ಬರಹವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸ್ತಿದ್ದಾರೆ. ಮಾಸ್ತಿ ಸಂಭಾಷಣೆ ಲವ್ ಕೇಸ್ ಚಿತ್ರಕ್ಕಿದ್ದು, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಅನುಕೃಷ್ಣ ಸಂಕಲನ ಚಿತ್ರಕ್ಕಿದೆ.

ಚಿಂತಾಮಣಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು, ಈ ವೇಳೆ ಹಿರಿಯ ನಟಿ ಸುಧಾರಾಣಿ , ಶ್ರೀನಗರ ಕಿಟ್ಟಿ, ನಾಗಭೂಷಣ್, ಮಾಸ್ತಿ ಹಾಗೂ ನಿರ್ದೇಶಕ ಜೈಶ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

ಮುಂದಿನ 6 ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin