ಸುಪ್ರೀಂ ಹೀರೋ ಶಶಿಕುಮಾರ್ -ತಾರಾ ಜೋಡಿಯ “ ರುದ್ರ ಅವತಾರ”
ಸವಾದ್ ಮಂಗಳೂರು ನಿರ್ದೇಶನದ “ರುದ್ರ ಅವತಾರ” ಚಿತ್ರದ ಮೂಲಕ ಹಿರಿಯನಟ ಶಶಿಕುಮಾರ್ ಬಹಳ ದಿನಗಳ ಬಳಿಕ ಪ್ರಮುಖ ಪಾತ್ರದಲಗಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಿರಿಯ ನಟಿ ತಾರಾ ಅನುರಾಧ ಜೋಡಿಯಾಗಿದ್ದಾರೆ

ರುದ್ರ ಅವತಾರ ಚಿತ್ರದಲ್ಲಿ ಶಶಿಕುಮಾರ್ ಜವಾಬ್ದಾರಿಯುತ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಾಂಡೇಲಿಯ ಉದ್ಯಮಿ ಡಾ.ಪ್ರೇಮಾನಂದ್ ವಿ ಗವಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು, ಇದೇ ತಿಂಗಳ 24ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.ಸುಪ್ರೀಂ ಹೀರೋ ಶಶಿಕುಮಾರ್ ಹಾಗೂ ತಾರಾ ನಟಿಸುತ್ತಿರುವ 26ನೇ ಚಿತ್ರವಿದು.
ನಿರ್ದೇಶಕ ಸವಾದ್ ಮಂಗಳೂರು ಮಾತನಾಡಿ ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ, ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಚಿತ್ರದ ಮೂಲಕ ಹೇಳಹೊರಟಿದ್ದೇನೆ, ಮಕ್ಕಳ ಕನಸುಗಳನ್ನು ಈಡೇರಿಸುವ ಸಲುವಾಗಿ, ಪೆÇೀಷಕರು ತಮ್ಮ ಕನಸು, ಆಸೆಗಳನ್ನು ಕಟ್ಟಿಟ್ಟು ಜೀವನ ನಡೆಸುತ್ತಾರೆ, ಅದೇ ತಮ್ಮ ಮಕ್ಕಳಗೆ ತೊಂದರೆ ಎದುರಾದಾಗ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಯಾವರೀತಿ ಹೋರಾಡುತ್ತಾರೆ. ಹೇಗೆ ರುದ್ರ ಅವತಾರ ತಾಳುತ್ತಾರೆ ಎನ್ನುವುದೇ ನಮ್ಮ ಚಿತ್ರದ ಕಥಾಹಂದರ. ಈ ಕಥೆಯಲ್ಲಿ ಪ್ರಮುಖವಾಗಿ ಮೂರು ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು, ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್. ನವೆಂಬರ್ 24ರಿಂದ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಹೇಳಿದರು,

ಹಿರಿಯ ನಟ ಶಶಿಕುಮಾರ್ ಮಾತನಾಡಿ ಇದು ಹೀರೋ, ಹೀರೋಯಿನ್ ಕಥೆಯಲ್ಲ, ಕಂಟೆಂಟೇ ಹೀರೋ, ಚಿತ್ರದಲ್ಲಿ ನಾನೊಬ್ಬ ಆಟೋ ಡ್ರೈವರ್ , ಹೆಣ್ಣುಮಗಳ ತಂದೆಯಾಗಿ ನಟಿಸುತ್ತಿದ್ದೇನೆ, ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಮಗಳಿಗಾಗಿ ಹೋರಾಡೋ ತಂದೆಯ ಪಾತ್ರ ನನ್ನದು. ಚಿತ್ರದಲ್ಲಿ ಹಾರ್ಟ್ ಟಚಿಂಗ್ ಸೀಕ್ವೇನ್ಸ್ ತುಂಬಾನೇ ಇದೆ, ಈ ಚಿತ್ರದ ಪ್ರಥಮಾರ್ಧ ಕಥೆ ಕೇಳಿದಾಗಲೇ ನನಗೆ ರೋಮಾಂಚನವಾಯಿತು ಎಂದು ಹೇಳಿದರು,
ಹಿರಿಯನಟಿ ತಾರಾ ಮಾತನಾಡಿ ಚಿತ್ರದ ಯಾವುದೇ ಪಾತ್ರವಾಗಲೀ ಸುಮ್ಮನೆ ಬಂದು ಹೋಗುವುದಲ್ಲ, ಎಲ್ಲ ಕ್ಯಾರೆಕ್ಟರ್ ಕಥೆಯ ಭಾಗವಾಗಿವೆ, ತುಂಬಾ ವರ್ಷಗಳ ನಂತರ ಶಶಿಕುಮಾರ್, ಸಂಗೀತಾ ಜತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು,
ನಿರ್ಮಾಪಕ ಪ್ರೇಮಾನಂದ್ ಮಾತನಾಡಿ ಹಣ ಮಾಡೋದಕ್ಕಿಂತ ಸಮಾಜಕ್ಕೆ ಸಂದೇಶ ಒಳ್ಳೆಯ ನೀಡುವುದು ಉದ್ದೇಶ, ಚಿತ್ರದ ಮೂಲಕ ಸಮಾಜಕ್ಕೆ ಏನಾದರೂ ಮೆಸೇಜ್ ಕೊಡಬೇಕು ಎಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಂದೆಯೂ ಚಿತ್ರಗಳನ್ನು ಮಾಡುವ ಉದ್ದೇಶವಿವದೆ ಎಂದು ಮಾಹಿತಿ ನೀಡಿದರು

ಸಂಗೀತಾ, ಯಶ್ ಶೆಟ್ಟಿ, ವರ್ಧನ್ ತೀರ್ಥಳ್ಳಿ, ಅಂಕಿತಾ ಜಯರಾಮ್, ಸಾಧನಾ ಇವರೆಲ್ಲ ತಂತಮ್ಮ ಪಾತ್ರಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿಕೊಂಡರು. ಶಶಿಕುಮಾರ್ ಪುತ್ರ ಆದಿತ್ಯ ಕೂಡ ಹಾಜರಿದ್ದು ಶುಭ ಹಾರೈಸಿದರು.
ಅಲನ್ ಭರತ್ ಛಾಯಾಗ್ರಹಣ, ಪಾಲ್ ಅಲೆಕ್ಸ್ ಸಂಗೀತ ಸಂಯೋಜನೆ, ಶ್ರೀಕಾಂತ್ ಸಂಕಲನ, ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.

