"Bharathi Teacher Seventh Class" movie to release next month

“ಭಾರತಿ ಟೀಚರ್ ಏಳನೇ ತರಗತಿ” ಚಿತ್ರ ಮುಂದಿನ ತಿಂಗಳು ಬಿಡುಗಡೆ - CineNewsKannada.com

“ಭಾರತಿ ಟೀಚರ್ ಏಳನೇ ತರಗತಿ” ಚಿತ್ರ ಮುಂದಿನ ತಿಂಗಳು ಬಿಡುಗಡೆ

“ಭಾರತಿ ಟೀಚರ್ ಏಳನೇ ತರಗತಿ” ಚಿತ್ರದ ‘ಬಾ ಬಾ ಕನ್ನಡಿಗ’, ‘ಎಳೆ ಜೀವ’ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಆಗಿದೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇರುವುದರಿಂದ ಚಿತ್ರ ನೋಡಲೇಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ರಾಜೇಂದ್ರಸಿಂಗ್‍ಬಾಬು ಇತರೆ ಗಣ್ಯರು ಹಾಜರಿದ್ದರು.

ಉದ್ಯಮಿ ರಾಘವೇಂದ್ರ ರೆಡ್ಡಿ ನಿರ್ಮಾಣ ಮಾಡಿದ್ದು ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ ನಿರ್ವಹಿಸಿದ್ದಾರೆ.ವೆಂಕಟ್‍ಗೌಡ ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ

ರೋಹಿತ್ ರಾಘವೇಂದ್ರ, ಸಿಹಿಕಹಿಚಂದ್ರು, ಕು.ಯಶಿಕಾ, ಗೋವಿಂದೇಗೌಡ, ಅಶ್ವಿನ್‍ಹಾಸನ್. ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ.

ಎಂ. ಎಲ್ ಪ್ರಸನ್ನ ಮಾತನಾಡಿ ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿಯೊಬ್ಬಳು ಟೀಚರ್ ಕನಸನ್ನು ಹೇಗೆ ನನಸು ಮಾಡುತ್ತಾಳೆ. ಇದರಿಂದ ಮುಂದಕ್ಕೆ ಕರ್ನಾಟಕದಲ್ಲಿ ಕನ್ನಡ ಹಾಗೂ ಶಿಕ್ಷಣ ಎಷ್ಟು ಮುಖ್ಯ ಜತೆಗೆ ಮಗು ನನ್ನ ಹಾಗೆ ಲಕ್ಷಾಂತರ ಮಕ್ಕಳು ಕನಿಷ್ಟ ಹತ್ತು ಜನರಿಗೆ ಕನ್ನಡ ಕಲಿಸಬೇಕು. ಅದಕ್ಕೊಂದು ಯೋಜನೆ ಬೇಕು. ಇವರೆಡು ಅಂಶಗಳನ್ನು ಕ್ಲೈಮಾಕ್ಸ್‍ದಲ್ಲಿ ಹೇಳಲಾಗಿದೆ. ಚಿತ್ರವು ಕನ್ನಡ ಕಾಳಜಿಯ ಕಥೆಯಾಗಿದೆ. ಹಾಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಆದಿತ್ಯ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇವರೆಡು ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‍ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ರಾಘವ್‍ಸೂರ್ಯ-ದರ್ಶನ್‍ಗೌಡ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin