Miss and Mr India mega auditions on August 16: First song from the movie Mudhol

ಆಗಸ್ಟ್ 16ಕ್ಕೆ ಮಿಸ್ ಅಂಡ್ ಮಿಸ್ಟರ್ ಇಂಡಿಯಾ ಮೆಗಾ ಆಡಿಷನ್: ಮುಧೋಳ್ ಚಿತ್ರದ ಮೊದಲ ಹಾಡು - CineNewsKannada.com

ಆಗಸ್ಟ್ 16ಕ್ಕೆ ಮಿಸ್ ಅಂಡ್ ಮಿಸ್ಟರ್ ಇಂಡಿಯಾ ಮೆಗಾ ಆಡಿಷನ್: ಮುಧೋಳ್ ಚಿತ್ರದ ಮೊದಲ ಹಾಡು

ಅಮೃತ ಸಿನಿಕ್ರಾಫ್ಟ್ ವತಿಯಿಂದ 9ನೇ ‘ಮಿಸ್ ಅಂಡ್ ಮಿಸಸ್ ಇಂಡಿಯಾ ವುಮನ್ ಆಫ್ ಸಬ್ ಸ್ಟ್ಯಾನ್ಸ್’ ಸ್ಪರ್ಧೆಗೆ ಸಜ್ಜಾಗಿದೆ. ಪ್ರತಿಭಾವಂತ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದು, ಅವರಲ್ಲಿ ಆತ್ಮ ವಿಶ್ವಾಸ ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಅಮೃತಾ ವಿಜಯ್ ಟಾಟಾ ಹೇಳಿದ್ದಾರೆ

ನಮ್ಮ ಉದ್ದೇಶ. ಪ್ರತಿ ವರ್ಷ ದುಬೈನಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆ ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸೀಜನ್ ನ ಮೆಗಾ ಆಡಿಷನ್ ಆಗಸ್ಟ್ 16ರಂದು ನಡೆಯಲಿದೆ. ಈಗಾಗಲೇ ಮಿಸ್ ಅಂಡ್ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ 17 ಜನ ಸ್ಪರ್ಧಿಗಳ ಷಾರ್ಟ್ ಲಿಸ್ಟ್ ಕೂಡ ಆಗಿದೆ. ಬ್ರಾಂಡ್ ಅಂಬಾಸಿಡರ್ ಆಗಿ ನಟಿ ರೀಶ್ಮಾ ನಾಣಯ್ಯ ಅವರು ಆಯ್ಕೆಯಾಗಿದ್ದಾರೆ ಎಂದರು

ಸಂಸ್ಥೆ ವತಿಯಿಂದನಿರ್ಮಿಸಲಾಗುತ್ತಿರುವ ಮುಧೋಳ್ ಚಿತ್ರದ ಮೊದಲ ಹಾಡನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುವುದು ಹಾಗೂ ಚಿಂಟು ಸನ್ ಆಫ್ ವಿಶಾಲಾಕ್ಷಿ ಚಲನಚಿತ್ರದ ಫಸ್ಟ್ ಲುಕ್ ಕೂಡ ಅಂದೇ ಬಿಡುಗಡೆಯಾಗಲಿದೆ
ಅಲ್ಲದೆ ನಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಅಪ್ ಡೇಟ್ ಕೂಡ ನೀಡಲಾಗುವುದು ಮಾಹಿತಿ ನೀಡಿದರು

ನಟಿ ರೀಶ್ಮಾ ನಾಣಯ್ಯ ಮಾತನಾಡಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸೌಂದರ್ಯ ಸ್ಪರ್ಧೆಯಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗ್ತಿದೆ. ಇದೊಂದು ಸುಂದರ ವೇದಿಕೆ. ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಲು ಒಳ್ಳೆಯ ಅವಕಾಶವಿದು ಎಂದು ಹೇಳಿದರು.

ನಟ ವಿಕ್ರಂ ರವಿಚಂದ್ರನ್ ಮಾತನಾಡಿ ಮುಧೋಳ್ ಲೇಟಾಗ್ತಿರುವುದಕ್ಕೆ ಸ್ವಲ್ಪ ಬೇಜಾರಿದೆ. ಸಿನಿಮಾನ ಸ್ಟ್ರಾಂಗ್ ಆಗಿ ಕಟ್ಟಿಕೊಡಬೇಕು ಅನ್ನೋ ಪ್ರಯತ್ನದಲ್ಲಿ ತಡವಾಗಿದೆ. ನಿಯತ್ತಿಗೆ ಮತ್ತೊಂದು ಹೆಸರೇ ಮುಧೋಳ್, ಚಿತ್ರವನ್ನು ಕೈಗೆತ್ತಿಕೊಂಡ ಮೇಲೆ ಇವರು ಜತೆಯಾದರು. ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ರಿಲೀಸ್ ಮಾಡೋ ಪ್ಲಾನಿದೆ ಎಂದು ಹೇಳಿದರು.

ಚಿಂಟು ಸನ್ನಾಫ್ ವಿಶಾಲಾಕ್ಷಿ ಚಿತ್ರದ ನಿರ್ದೇಶಕಿ ಮಾನಸಿ ಮಾತನಾಡಿ ಚಿತ್ರದಲ್ಲಿ ಹಿರಿಯನಟಿ ಲಕ್ಷ್ಮಿ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ ಎಂದು ವಿವರಿಸಿದರು.

ಅಮೃತಾ ಅವರ ಪತಿ ವಿಜಯ್ ಟಾಟಾ ಕೂಡ ಹಾಜರಿದ್ದು ತಮ್ಮ ಚಿತ್ರಗಳ ಪ್ರಗತಿಯ ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin