Actor Tanush Shivanna's 'Boss' to release on August 7

ನಟ ತನುಷ್ ಶಿವಣ್ಣ ಅಭಿನಯದ `ಬಾಸ್’ ಚಿತ್ರ ಆಗಸ್ಟ್ 7 ರಂದು ಬಿಡುಗಡೆ - CineNewsKannada.com

ನಟ ತನುಷ್ ಶಿವಣ್ಣ ಅಭಿನಯದ `ಬಾಸ್’ ಚಿತ್ರ ಆಗಸ್ಟ್ 7 ರಂದು ಬಿಡುಗಡೆ

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ ‘ಬಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, `ಬಾಸ್’ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದು ಚಿತ್ರ ಆಗಸ್ಟ್ 7 ರಂದು ಬಿಡುಗಡೆಯಾಗುತ್ತಿದೆ

ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ ಮೊದಲಿನಿಂದಲೂ ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟು ಕಷ್ಟಗಳಿದೆ ಎಂದು ಅರಿತಿರುವ ನಟ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದು ಬೇಡ. ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರು ಸಹ ಫೆÇೀನ್ ನಲ್ಲಿ ಮಾತನಾಡಿ ಚಿತ್ರ ಬಿಡುಗಡೆ ಮಾಡಿ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದು ಚಿತ್ರದ ತಿಳಿಸಿದರು.

ನಿರ್ದೇಶಕ ಲವ ಸಹ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಿದರು.

ನಾಯಕಿ ಪಾಯಲ್ ಚಂಗಪ್ಪ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಶರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin