ಗಮನ ಸೆಳೆದ “ಸ್ಪಾರ್ಕ್” ಚಿತ್ರದ ವಿಶೇಷ ಹಾಡಿನಲ್ಲಿ ನಿರಂಜನ್- ರಚನಾ ಹೆಜ್ಜೆ
ಯುವ ನಟ ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿರುವ “ ಸ್ಪಾರ್ಕ್” ಚಿತ್ರದ ‘ಶಕಲಕ ಭುಂ ಭೂಮ್.. ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಹಾಡನ್ನು ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

ಈ ವೇಳೆ ಮಾತನಾಡಿದ ನಟ ಪ್ರೇಮ್, ಯುವ ನಟ ನಿರಂಜನ್ ಕನ್ನಡದ ಪ್ರತಿಭೆ. ಅವರನ್ನು ಪರಭಾಷೆಯವರು ಹೈಜಾಕ್ ಮಾಡುವ ಮೊದಲು, ಕನ್ನಡದ ನಿರ್ಮಾಪಕರು ಉಳಿಸಿಕೊಳ್ಳಬೇಕು. ಈ ಚಿತ್ರದ ನಿರ್ಮಾಪಕರು ಒಂದು ಹಾಲಿವುಡ್ ಸಿನಿಮಾ ಮಾಡುವಷ್ಟು ಜ್ಞಾನ ಮತ್ತು ಶ್ರೀಮಂತಿಕೆ ಇರುವವರು. ಕನ್ನಡದ ಯುವ ನಾಯಕನಿಗಾಗಿ ಹತ್ತಾರು ಕೋಟಿ ಹಾಕಿ ಚಿತ್ರ ಮಾಡಿರುವುದನ್ನು ಮೆಚ್ಚಲೇಬೇಕು ಎಂದರು.
ನಾಯಕ ನಿರಂಜನ್ ಮಾತನಾಡಿ, ಹಾಡನ್ನು ಉಪೇಂದ್ರ ಈಗಾಗಲೇ ಅವರಿಗೆ ತೋರಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃತ್ತಿ ಬದುಕಿನಲ್ಲಿ ತುಂಬ ವೇಗವಾಗಿ ಚಿತ್ರೀಕರಣಗೊಂಡಂಥ ಸಿನಿಮಾ. ಯಾಕೆಂದರೆ ಇದರ ಹಿನ್ನೆಲೆಯಲ್ಲಿ ಕಾಪೆರ್Çರೇಟ್ ನಿರ್ಮಾಪಕರಿರುವುದೇ ಕಾರಣ” ಎಂದರು.

ನಾಯಕಿ ರಚನಾ ಇಂದರ್ ಮಾತನಾಡಿ, ನನ್ನ ಮೊದಲ ಕಮರ್ಷಿಯಲ್ ಸಾಂಗ್” .ಜೊತೆಗೆ ಫಸ್ಟ್ ಟೈಮ್ ಇಷ್ಟು ಗ್ಲಾಮರಸ್ಸಾಗಿಯೂ ಕಾಣಿಸಿದ್ದೇನೆ ಎಂದರು.
ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ ವರ್ಷದ ಪಯಣ. ಅಂದುಕೊಂಡಿದ್ದನ್ನು ತೆರೆಯ ಮೇಲೆ ಮೂಡಿಸಿರುವ ತೃಪ್ತಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮ್ ನೆಗೆಟಿವ್ ಪಾತ್ರ ಒಪ್ಪಿಕೊಂಡು, ಬೆಂಬಲಿಸಿದ್ದು ನಮಗೆ ಶಕ್ತಿ ನೀಡಿದೆ”.ಕನ್ನಡದಲ್ಲಿ ಉತ್ತರ ಕರ್ನಾಟಕದ ಭಾಷೆ ಇದೆ ಎಂದರು

ನಿರ್ಮಾಪಕ ದಂಪತಿ ಗರಿಮಾ ಮತ್ತು ಅವಿನಾಶ್ ವಸಿಷ್ಠ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ಮಾಲಿಕ ಮನೋಹರ್ ಅವರು ಸೇರಿ, ವೇದಿಕೆ ಮೇಲೆ ಈ ಹಾಡು ಬಿಡುಗಡೆಗೊಳಿಸಿದರು.
.
ನಟ ಧರ್ಮಣ್ಣ ಕಡೂರು ಮಾತನಾqಡಿ “ನಿಜವಾಗಿ ಜರ್ನಲಿಸಂ ಮಾಡಿರುವ ಚಿತ್ರದಲ್ಲಿ ಪತ್ರಕರ್ತನಾಗಿದ್ದೇನೆ” ಎಂದರು


